ಕರ್ನಾಟಕದ ಋಣ ತೀರಿಸೋಕಾಗಲ್ಲ, ಆದ್ರೂ ನನ್ ಕರ್ತವ್ಯ ಮಾಡ್ತೀನಿ; ರಾಕಿಂಗ್ ಸ್ಟಾರ್ ಯಶ್

By Shriram Bhat  |  First Published Jun 19, 2024, 11:43 AM IST

ಕನ್ನಡದ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಜಗದ್‌ವಿಖ್ಯಾತಿ ಪಡೆದಿರುವ ನಟ. ಕೆಜಿಎಫ್ ಸಿನಿಮಾಗಳ ಮೂಲಕ ಪ್ರಪಂಚದ ಮೂಲೆಮೂಲೆಯನ್ನು ತಲುಪಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ..


'ಕರ್ನಾಟಕದ ಜನತೆ ನನ್ಮೇಲೆ ತುಂಬಾನೇ ಪ್ರೀತಿ-ಹಾರೈಕೆ ತೋರ್ಸಿದೀರಾ. ಅದನ್ನು ನಾನು ಇನ್ನೂ ಒಳ್ಳೊಳ್ಳೆಯ ಸಿನಿಮಾ ಮಾಡೋ ಮೂಲಕ ಉಳಿಸಿಕೊಳ್ತೀನಿ. ನನ್ನ ಶಕ್ತಿಯ ಮೂಲಕ ಒಳ್ಳೊಳ್ಳೆ ಕೆಲಸ ಮಾಡೋ ಮೂಲಕ ನಿಮ್ಮ ಋಣನಾ ತೀರಿಸೋ ಪ್ರಯತ್ನ ಮಾಡ್ತೀನಿ. ನಿಮ್ಮ ಋಣ ತೀರಿಸೋಕಾಗಲ್ಲ, ಆದ್ರೂ ನನ್ನ ಕರ್ತವ್ಯ ನಾನು ಮಾಡ್ತೀನಿ. ನಿಮ್ಮ ಆಶೀರ್ವಾದ ಸದಾ ನನ್ಮೇಲೆ ಹೀಗೇ ಇರಲಿ' ಎಂದಿದ್ದಾರೆ ವೇದಿಕೆಯ ಮೇಲೆ ಮಾತನಾಡುವಾಗ ಒಮ್ಮೆ ನಟ, ರಾಕಿಂಗ್ ಸ್ಟಾರ್ ಯಶ್. 

ಕನ್ನಡದ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಂದು ಜಗದ್‌ವಿಖ್ಯಾತಿ ಪಡೆದಿರುವ ನಟ. ಕೆಜಿಎಫ್ (KGF) ಸಿನಿಮಾಗಳ ಮೂಲಕ ಪ್ರಪಂಚದ ಮೂಲೆಮೂಲೆಯನ್ನು ತಲುಪಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಇದೀಗ ಟಾಕ್ಸಿಕ್ ಎಂಬ ಪ್ಯಾನ್ ವರ್ಲ್ಡ್‌ ಹಾಗು ರಾಮಾಯಣ ಎಂಬ ಬಾಲಿವುಡ್‌ ಸಿನಿಮಾದಲ್ಲಿ ನಟ ಯಶ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾಗೆ ನಟ ಯಶ್ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಈ ಸಿನಿಮಾದ ಬಜೆಟ್ 885 ಕೋಟಿ. 

Tap to resize

Latest Videos

ಒಂದೇ ವಾರಕ್ಕೆ ಕಾಲೇಜಿಂದ ಓಡಿ ಬಂದಿದ್ದೆ ಅಂದ್ರು ಐಶ್ವರ್ಯಾ; ಡಿಕೆಶಿ ಮಗಳಿಗೆ ಹೀಗ್ ಆಗಿತ್ತಾ?

ಇನ್ನೊಂದು ವಿಷಯ ಏನೆಂದರೆ, ರಾಕಿಂಗ್ ಸ್ಟಾರ್ ನಟ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಸ್ನೇಹ, ಗೆಳೆತನದ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಸ್ನೇಹ ತುಂಬಾ ಮುಖ್ಯವಾದುದು. ಸ್ನೇಹ ಅಂದ್ರೆ ಏನು ಅಂದ್ರೆ, ನಾವು ಏನ್ ಮಾಡಿದೀವೋ ಅದು ವಾಪಸ್ ಬರುತ್ತೆ ಪ್ರಪಂಚದಲ್ಲಿ. ಅದೇ ಅಲ್ವಾ ಜೀವನದ ಬೇಸಿಕ್? ನಟ ಯಶ್ ಕೂಡ ಅದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅದನ್ನೇ ಅವರು ಹೇಳಿದ್ದಾರೆ ಕೂಡ. 

ಶಿವರಾಜ್‌ಕುಮಾರ್‌ ಕಾಲೇಜಿಗೆ ಹೋಗ್ವಾಗ ದಿನಾಲೂ ಎರಡೇ ರೂ. ಕೊಡ್ತಿದ್ರಂತೆ ಡಾ ರಾಜ್‌ಕುಮಾರ್‌!

ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಶೂಟಿಂಗ್ ಶುರುವಾಗಿದೆ.

ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

click me!