YASH: 'ವಿಷಕಾರಿ' ಚಿತ್ರದಲ್ಲಿ ತಮ್ಮ ಇಮೇಜನ್ನೇ ಪಣಕ್ಕಿಟ್ಟ ಯಶ್..? ಕಾರಿನೊಳಗಿನ 'ಆ' ದೃಶ್ಯಕ್ಕೆ ಎದ್ದಿದೆ ಅಪಸ್ವರ..!

Published : Jan 11, 2026, 05:54 PM IST
yash Toxic Movie

ಸಾರಾಂಶ

ರಾಕಿಂಗ್ ಸ್ಟಾರ್​ ಯಶ್  ರಿಯಲ್​ ಲೈಫ್​​ನಲ್ಲಿ ಫ್ಯಾಮಿಲಿ ಮ್ಯಾನ್​ ಅನ್ನೋದು ಸತ್ಯ. ತನ್ನ ಹೆಂಡತಿ ಮಕ್ಕಳು ಅಂತ ಇರೋ ಹೀರೋ ಯಶ್.. ಯಶ್​ ಕುಟುಂಬವನ್ನ ನೋಡಿದವರು ಈ ತಾರಾ ಜೋಡಿ ಎಲ್ಲರಿಗೂ ರೋಲ್ ಮಾಡೆಲ್ ಅಂತಾರೆ. ಆದ್ರೆ ಸಿನಿಮಾ ಅಂತ ಬಂದ್ರೆ ಯಶ್​ ಯೋಚನೆ, ಯೋಜನೆಗಳೇ ಬೇರೆನಾ? ಹೌದು ಅಂತೀರಾ?

ಯಶ್ ಈಗ ವಿಷಕಾರಿ!

ಇಡೀ ಭಾರತೀಯ ಸಿನಿ ಜಗತ್ತು ಈಗ ಮತ್ತೆ ಹುಬ್ಬೇರಿಸಿದೆ. ಅಂತಹ ದೊಡ್ಡ ಭರವಸೆ ಟಾಕ್ಸಿಕ್​ಟೀಸರ್ ಹುಟ್ಟುಹಾಕಿದೆ. ಇದರ ಮಧ್ಯೆ ಯಶ್​(Yash) ಇಷ್ಟು ದಿನ ಸಂಪಾದಿಸಿದ್ದ ತನ್ನ ಇಮೇಜ್​ಅನ್ನೇ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದಾರಾ..? ಅನ್ನೋ ವಾದ ವಿವಾದ ಪ್ರತಿವಾದಗಳು ಸಿನಿ ಜಗತ್ತಲ್ಲಿ ಕೋಲಾಹಲ ಎಬ್ಬಿಸಿದೆ. ಹಾಗಾದ್ರೆ ಟಾಕ್ಸಿಕ್​ಟೀಸರ್​​ ಜನಕ್ಕೆ ಇಷ್ಟ ಆಯ್ತಾ..? ಈ ಟೀಸರ್​​ ಬಗ್ಗೆ ದೇಶಾದ್ಯಂತ ಯಾಕಿಷ್ಟು ಚರ್ಚೆ ಆಗ್ತಾ ಇದೆ ನೋಡೋಣ

ಯೆಸ್.. ಯಶ್ ಈಗ ವಿಷಕಾರಿ.. ಯಾಕಂದ್ರೆ ಯಶ್​(Rocking Star Yash) ನಟಿಸ್ತಾ ಇರೋ ಸಿನಿಮಾದ ಹೆಸ್ರು ಟಾಕ್ಸಿಕ್​.. ಕನ್ನಡದಲ್ಲಿ ಟಾಕ್ಸಿಕ್​​ ಅಂದ್ರೆ ವಿಷ ಅಂತ ಅರ್ಥ. ಆದ್ರೆ ಈ ವಿಷಕಾರಿ ಅನ್ನೋ ಸಿನಿಮಾದ ಈ ಟೀಸರ್​ನಲ್ಲಿ ಎಷ್ಟೋ ವಿಷಯ ಅಡಗಿದೆ. ಎಷ್ಟೋ ಕುತೂಹಲಗಳು ಇವೆ ಅನ್ನೋದು ಮೊನ್ನೆ ಬಂದ ಟೀಸರ್​ನಲ್ಲೇ ಸ್ಪಷ್ಟವಾಗಿದೆ.

ವಿಷಕಾರಿ ಕಥೆಯಲ್ಲಿ ಇಮೇಜನ್ನೇ ಪಣಕ್ಕಿಟ್ಟ ಯಶ್..? ಸಿನಿ ಜಗತ್ತಲ್ಲಿ ಈಗ ರಾಕಿಂಗ್ ಸ್ಟಾರ್ ಟಾರ್ಗೆಟ್..!

ಹೌದು, ನಟ ಯಶ್​​ ಈಗ ಸಿನಿ ಜಗತ್ತಿನಲ್ಲಿ ಟಾರ್ಗೆಟ್ ಆಗಿದ್ದಾರೆ. ಅದಕ್ಕೆ ಕಾರಣ ರಾಕಿ ಟಾಕ್ಸಿಕ್​ನಲ್ಲಿ ಕೊಟ್ಟ ಡೋಸ್.. ಕೆಜಿಎಫ್ ಬಂದ ಮೇಲೆ ಯಶ್​ ಇನ್ನೇನ್ ಮಾಡುತ್ತಾರೆ ಅಂತ ಕಾಯುತ್ತಿದ್ದ ಕಣ್ಣುಗಳಿಗೆ ಇವತ್ತು ದೊಡ್ಡ ಉತ್ತರ ಸಿಕ್ಕಾಗಿದೆ. ಆದ್ರೆ ಈ ವಿಷಕಾರಿ ಕಥೆಯಲ್ಲಿ ಯಶ್​ ತನ್ನ ಇಮೇಜನ್ನೇ ಪಣಕಿಟ್ಟಿದ್ದಾರೆ..

ಒಂದು ವರ್ಷದ ಹಿಂದೆ ಟಾಕ್ಸಿಕ್​​ನ 57 ಸೆಕೆಂಡ್​ನ ಟೀಸರ್ ಬಂದಿತ್ತು. ಆ ಟೀಸರ್ ಬಂದಾಗ ಟಾಕ್ಸಿಕ್​​ ಬಗ್ಗೆ ಅಂತದ್ದೇನು ಟಾಕ್ ಆಗಿರಲಿಲ್ಲ. ಪಾರ್ಟಿ ಮಾಡುತ್ತಿರೋ ಪಬ್​ ಒಂದಕ್ಕೆ ಯಶ್​ ಅವರದ್ದೇ ಆದ ರಾಕಿಂಗ್ ಸ್ಟೈಲ್​​​ನಲ್ಲಿ ಎಂಟ್ರಿ ಕೊಟ್ಟು ಅಲ್ಲಿದ್ದ ಡಾನ್ಸರ್ಸ್​ ಜೊತೆ ಕಾಣಿಸಿಕೊಳ್ಳೊ ಝಲಕ್ ಅಲ್ಲಿತ್ತು. ಆದ್ರೆ ಆ ಟೀಸರ್​ ಅಷ್ಟೇನ್ ಇಷ್ಟ ಆಗಿರಲಿಲ್ಲ..

ಈಗ ಬಂದಿರೋ ಟೀಸರ್​ನಲ್ಲಿ ಇದು ಬರೀ ವಿಷಕಾರಿ ಮಾತ್ರವಲ್ಲ ಇದರಲ್ಲಿ ವಿಷಯಗಳು ಅಡಗಿವೆ ಅಂತ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಝನ್ಸಿ ಜನರೇಷನ್​ಗೆ ಕಿಕ್​ ಕೊಡ್ತಾ ಇದೆ. ಸಿಕ್ಕ ಸಿಕ್ಕವರೆಲ್ಲಾ ಈ ಟೀಸರ್​ ನ ಒಂದೊಂದು ದೃಶ್ಯದ ಬಗ್ಗೆಯೂ ವಿಮರ್ಷೆ ಮಾಡುತ್ತಿದ್ದಾರೆ. ಕೆಲವ್ರು ಈ ಟೀಸರ್​ನಲ್ಲಿ ಬರೋ ಇಂಟಿಮೇಟೆಡ್​​ ದೃಶ್ಯದ ಬಗ್ಗೆ ಯಶ್​ ರ ಟ್ಯಾಲೆಂಟ್​​​ ಅಂತ ಹೊಗಳಿದ್ರೆ. ಮತ್ತೆ ಕೆಲವರು ರಾಕಿಗೆ ಇದೆಲ್ಲಾ ಬೇಕಿತ್ತಾ ಅಂತ ವಿರೋಧವೂ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್​ ರಿಯಲ್​ ಲೈಫ್​​ನಲ್ಲಿ ಫ್ಯಾಮಿಲಿ ಮ್ಯಾನ್​ ಅನ್ನೋದು ಸತ್ಯ. ತನ್ನ ಹೆಂಡತಿ ಮಕ್ಕಳು ಅಂತ ಇರೋ ಹೀರೋ ಯಶ್​.. ಯಶ್​ ಕುಟುಂಬವನ್ನ ನೋಡಿದವರು ಈ ತಾರಾ ಜೋಡಿ ಎಲ್ಲರಿಗೂ ರೋಲ್ ಮಾಡೆಲ್ ಅಂತಾರೆ. ಆದ್ರೆ ಸಿನಿಮಾ ಅಂತ ಬಂದ್ರೆ ಯಶ್​ ಯೋಚನೆ ಯೋಜನೆಗಳೇ ಬೇರೆ. ತನ್ನ ಇಮೇಜ್​ ಗೆ ಯಾವ್ದೇ ದಕ್ಕೆ ಬರದ ಹಾಗೆ ಕಥೆಗಳ ಆಯ್ಕೆ ಮಾಡಿಕೊಂಡು ಅದನ್ನ ಗ್ಲೋಬಲ್​ ಮಟ್ಟಕ್ಕೆ ರೀಚ್​ ಮಾಡೋದು ಯಶ್ ಗಿರೋ ಗುರಿ. ಈಗ ಟಾಕ್ಸಿಕ್​ನ ಈ ಒಂದೇ ಒಂದು ಇಂಟಿಮೇಟೆಡ್ ಸೀನ್​ ಯಶ್​ ಇಮೇಜ್​​​ ಗೆ ಇದು ಬೇಕಿತ್ತಾ ಅನ್ನೋ ಮಾತುಗಳು ಹುಟ್ಟಿವೆ.

ಭಾರತೀಯ ಚಿತ್ರರಂಗದಲ್ಲಿ 'ಟಾಕ್ಸಿಕ್' ಹೊಸ ದಾಖಲೆ..! 24 ಗಂಟೆಯಲ್ಲಿ ಟೀಸರ್​ಗೆ ಲೈಕ್ಸ್, ವೀವ್ಸ್ ಎಷ್ಟು ಗೊತ್ತಾ..?

ಟೀಕೆಗಳಿಗೆ ಗೋಲಿ ಹೊಡೆದು 'ಟಾಕ್ಸಿಕ್' ಟೀಸರ್ ಅಬ್ಬರಿಸುತ್ತಿದೆ. ಕೋಟಿ ಕೋಟಿ ವೀವ್ಸ್ ಸಾಧಿಸಿ ಝಲಕ್ ವೈರಲ್ ಆಗ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಟ್ವಿಟರ್ ಎಲ್ಲೆಲ್ಲೂ ರಾಯ ಆರ್ಭಟ ಜೋರಾಗಿದೆ. ಕೇವಲ 24 ಗಂಟೆಗಳಲ್ಲಿ 'ಟಾಕ್ಸಿಕ್' ಟೀಸರ್ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸೇರಿ 200 ಮಿಲಿಯನ್ ಅಂದ್ರೆ 20 ಕೋಟಿ ವೀಕ್ಷಣೆ ಕಂಡಿದೆ. 10 ಲಕ್ಷಕ್ಕೂ ಅಧಿಕ ಲೈಕ್ಸ್​ ಈ ಟೀಸರ್​ಗೆ ಸಿಕ್ಕಿದೆ.

ಟಾಕ್ಸಿಕ್​ ಫಸ್ಟ್ ಟೀಸರ್​ ಬಂದಾದ ಅಯ್ಯೋ ಇದೇನ್ ಗುರು ಯಶ್​ ಕೆಜಿಎಫ್​​ನಲ್ಲಿ ಮೇಳೈಸಿದ ಹಾಗೆ ಟಾಕ್ಸಿಕ್​ನಲ್ಲಿ ಮಿಂಚೋಗೆ ಆಗಲ್ಲ ಬಿಡು ಅಂತ ಹೇಳಿದವರೂ ಇದ್ದಾರೆ. ಆದ್ರೆ ಈಗ ಬಂದಿರೋ ಟೀಸರ್​​​ ಎಲ್ಲರ ಬಾಯ್ ಮುಚ್ಚಿಸಿದೆ. ಈ ಟೀಸರ್​ ಬಂದ ಮೇಲೆ ಟಾಕ್ಸಿಕ್​​ ಸಿನಿಮಾ ಹೀಗಿರಬಹುದು ಹಾಗ್ ಇರಬಹುದು ಅಂತ ಯೋಚನೇ ಮಾಡೋ ಹಾಗೆ ಮಾಡಿರೋದಂತು ಸತ್ಯ

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ 'ಕಾಂತಾರ-1' ಆ ಕಪ್ಪು ಸುಂದರಿಯನ್ನು ಕನ್ನಡ ಮಣ್ಣಿಗೆ ತರುತ್ತಾ? ನನಸಾಗುತ್ತಾ ಹೊಂಬಾಳೆ ಕಸನು..?
ಎವಿಆರ್ ರೆಡ್ಡಿ ಕನ್ನಡ ನಟಿ ವಿವಾದ, ಹಣ ಕೊಟ್ಟಿದ್ದಕ್ಕೆ ದಾಖಲೆ, ಇಬ್ಬರು ಜೊತೆಗಿರೋ ತೀರಾ ಖಾಸಗಿ ಫೋಟೋ ಲೀಕ್!