ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಅಧಿಕೃತ.. ಯಾವಾಗಿನಿಂದ ಅಬ್ಬರ?

Published : Jan 29, 2021, 06:48 PM ISTUpdated : Jan 29, 2021, 07:48 PM IST
ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಅಧಿಕೃತ.. ಯಾವಾಗಿನಿಂದ ಅಬ್ಬರ?

ಸಾರಾಂಶ

ಕೆಜಿಎಫ್ ಚಾಪ್ಟರ್ 2   ನೋಡೋಕೆ‌ ಕಾಯ್ತಿದ್ದವರಿಗೆ ಗುಡ್ ನ್ಯೂಸ್/ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್/ ಜುಲೈ 16ಕ್ಕೆ ತೆರೆ ಮೇಲೆ ಬರುತ್ತಿದೆ ರಾಕಿಂಗ್‌ ಸ್ಟಾರ್ ಯಶ್ ರ ಕೆಜಿಎಫ್ ಚಾಪ್ಟರ್ 2 ಸಿನಿಮಾ/ ವಿಶ್ವದಾಧ್ಯಂತ‌ ಜುಲೈ 16ಕ್ಕೆ ತೆರೆ ಮೇಲೆ ಬರುತ್ತಿದೆ‌ ಕೆಜಿಎಫ್ ಚಾಪ್ಟರ್ 2

ಬೆಂಗಳೂರು( ಜ.  29)  ಬಹುನಿರೀಕ್ಷಿತ ಕೆಜಿಎಫ್  2  ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ಕೆಜಿಎಫ್ ಚಾಪ್ಟರ್ 2   ನೋಡೋಕೆ‌ ಕಾಯ್ತಿದ್ದವರಿಗೆ ಗುಡ್ ನ್ಯೂಸ್ ಚಿತ್ರತಂಡದಿಂದ ಸಿಕ್ಕಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಜುಲೈ 16ಕ್ಕೆ ತೆರೆ ಮೇಲೆ ರಾಕಿಂಗ್‌ ಸ್ಟಾರ್ ಯಶ್ ರ ಕೆಜಿಎಫ್ ಚಾಪ್ಟರ್ 2 ರಾರಾಜಿಸಲಿದೆ.

ಕೆಜಿಎಫ್ ಬಂಡವಾಳ ಎಷ್ಟು? 

ವಿಶ್ವದಾಧ್ಯಂತ‌ ಜುಲೈ 16ಕ್ಕೆ ತೆರೆ ಮೇಲೆ‌ ಕೆಜಿಎಫ್ ಚಾಪ್ಟರ್ 2 ಬರಲಿದೆ. ಹೊಂಬಾಳೆ  ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದ್ದು ಕೆಜಿಎಫ್ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಯಶ್ ರಾಕಿ ಬಾಯ್ ಆಗಿ ಕಾಣಿಸಿಕೊಂಡಿದ್ದು ಎಲ್ಲ ಕಡೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು.

ಯಶ್ ಹುಟ್ಟುಹಬ್ಬದ (ಜ. 8)  ದಿನ ಕೆಜಿಎಫ್ 2 ಟೀಸರ್ ಬಿಡುಗುಡೆ ಮಾಡಲು ಚಿತ್ರತಂಡ  ಯೋಜನೆ ಹಾಕಿಕೊಂಡಿತ್ತು. ಆದರೆ  ಕಿಡಿಗೇಡಿಗಳು  ಜನವರಿ ಏಳರಂದು ರಾತ್ರಿಯೇ ಟೀಸರ್ ಲೀಕ್ ಮಾಡಿದ್ದರು. ತಕ್ಷಣ ಪರಿಹಾರ ತೆಗೆದುಕೊಂಡ ಚಿತ್ರತಂಡ ಅಂದು ರಾತ್ರಿಯೇ ಟೀಸರ್  ಅನಾವರಣ ಮಾಡಿತ್ತು.

ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ನೂರು ಮಿಲಿಯನ್ ವೀವ್ಸ್ ಕಂಡ ಟೀಸರ್ ಗೆ ಅಭಿಮಾನಿಗಳು ಜೈಕಾರ ಹಾಕಿದ್ದರು. ಟೀಸರ್ ಬಿಡುಗಡೆ ನಂತರ ಯಶ್ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ತೆರಳಿ ಸಮಯ ಕಳೆದಿದ್ದರು.

ಪ್ರಕಾಶ್ ರಾಜ್ ಮತ್ತು  ಬಾಲಿವುಡ್ ನಟ ಸಂಜಯ್ ದತ್ ಚಾಪ್ಟರ್ 2 ಆಕರ್ಷಣೆಯಾಗಲಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಾಯಕಿ ರವೀನಾ ಟಂಡನ್ ಸಹ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ