ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಕಾಮಿಡಿ ಕಿಂಗ್ ಸಾಧು ಕೋಕಿಲ ಅವರು ಅದರಲ್ಲಿ ಸಂದರ್ಶನ ಮಾಡುತ್ತಿದ್ದಾರೆ. ಸಾಧು ಕೋಕಿಲ 'ಸರ್, ಮದ್ವೆಗೂ ಮೊದ್ಲು ಯಾವ್ದಾದ್ರೂ ಲವ್ ಇತ್ತಾ ಸರ್ ನಿಮ್ದು?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉಪೇಂದ್ರ ಅವರು 'ಲವ್ವು ಅಂದ್ರೆ ಬರೀ..
ಸೋಷಿಯಲ್ ಮೀಡಿಯಾದಲ್ಲಿ ಒಂದು ಹಳೆಯ ವೀಡಿಯೋ ಇತ್ತೀಚೆಗೆ ಸಖತ್ ವೈರಲ್ ಆಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರನ್ನು ಕಾಮಿಡಿ ಕಿಂಗ್ ಸಾಧು ಕೋಕಿಲ (Sadhu Kokila) ಅವರು ಅದರಲ್ಲಿ ಸಂದರ್ಶನ ಮಾಡುತ್ತಿದ್ದಾರೆ. ಸಾಧು ಕೋಕಿಲ 'ಸರ್, ಮದ್ವೆಗೂ ಮೊದ್ಲು ಯಾವ್ದಾದ್ರೂ ಲವ್ ಇತ್ತಾ ಸರ್ ನಿಮ್ದು?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉಪೇಂದ್ರ ಅವರು 'ಲವ್ವು ಅಂದ್ರೆ ಬರೀ ಅದ್ನೇ ಯಾಕೆ ಯೋಚ್ನೆ ಮಾಡ್ತೀರಾ ನೀವು? ಎಂದು ಮರು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಸಾಧು ಕೋಕಿಲ ಅವರು 'ಲವ್ ಅಂದ್ರೆ ಒಂದ್ ಸೈಡ್ ಲವ್ವು, ಅವ್ರು ಅಲ್ಲೇ, ನೀವು ಇಲ್ಲೇ.. 'ಎನ್ನುತ್ತಾರೆ.
'ಬರೀ ನೋಡ್ತಾ ಇದ್ರಾ ಅಥವಾ ಬೇರೆ ಏನಾದ್ರೂ ಆಯ್ತಾ ಸರ್ ಇನ್ಸಿಡೆಂಟ್' ಎಂದ ಸಾಧು ಕೋಕಿಲ ಅವರಿಗೆ ಸೂಪರ್ ಸ್ಟಾರ್ ಉಪ್ಪಿ 'ಅದೇ ಬ್ಯೂಟಿಫುಲ್ ಲವ್. ಇದ್ರಲ್ಲೇ ಹಾಡಲ್ಲೇ ಹೇಳ್ಬಿಟ್ಟಿದೀನಿ, ಮೌನವೇನೇ ಧ್ಯಾನವೇ ಪ್ರೇಮಾ...' ಎಂದಿದ್ದಾರೆ. ಅದಕ್ಕೆ ಸಾಧು 'ಮುಗೀತು ಅಲ್ಲಿಗೆ..' ಎನ್ನಲು ನಟ ಉಪೇಂದ್ರ 'ಅದಕ್ಕಿಂತ ಇನ್ನೇನಿದೆ ಲವ್ವಲ್ಲಿ? ಮೌನವಾಗಿ ಧ್ಯಾನ ಮಾಡೋದೇ ಪ್ರೇಮಾ.. ಲವ್ ಇಲ್ದೇ ಇರೋದು ಒಂದು ಜೀವನಾನ? ಸಿಕ್ಕಾಪಟ್ಟೆ ಲವ್‌ಗಳಾಗ್ಬೇಕು, ಎಲ್ಲಾರ್ನು ಲವ್ ಮಾಡ್ಭೆಕು, ಅದು ರಿಯಲ್ ಲವ್' ಎಂದಿದ್ದಾರೆ ನಟ ಉಪೇಂದ್ರ. ಅದಕ್ಕೆ ಅಲ್ಲಿದ್ದವರಿಂದ ಸಖತ್ ಚಪ್ಪಾಳೆಯ ರೆಸ್ಪಾನ್ಸ್ ಸಿಕ್ಕಿದೆ.
ಬ್ಯಾಡ್ ಕಾಮೆಂಟ್ಸ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಖಡಕ್ ಮಾತು ಕೇಳಿ ಸೋಷಿಯಲ್ ಮೀಡಿಯಾ ಬೆಪ್ ತಕ್ಕಡಿ!
ಉಪೇಂದ್ರ ಅವರು ಮದುವೆಗೂ ಮೊದಲು ನಟಿ ಪ್ರೇಮಾ (Prema) ಅವರನ್ನು ಲವ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಅಂದು ಹಬ್ಬಿತ್ತು. ಅದಕ್ಕೆ ನಟ ಉಪೇಂದ್ರ ಅವರು ಹಾಗೇನೂ ಇಲ್ಲ ಎಂದು ಹಲವಾರು ಬಾರಿ ಹೇಳಿದ್ದರು. ನಾನು ಹಾಗೂ ನಟಿ ಪ್ರೇಮಾ ಪರಸ್ಪರ ಲವ್ ಮಾಡುತ್ತಿಲ್ಲ ಎಂದು ಜಗತ್ತಿಗೇ ತಿಳಿಸಲಿಕ್ಕಾಗಿಯೇ 'ಕರಿಮಣಿ ಮಾಲೀಕ ನಾನಲ್ಲ' ಎಂಬ ಹಾಡನ್ನು ಉಪೇಂದ್ರ ಬರೆದಿದ್ದು ಎಂಬುದು ಸಹ ಈಗ ಜಗಜ್ಜಾಹೀರಾಗಿದೆ. ಆದರೆ ಅಂದು ಉಪೇಂದ್ರ ಹೋದಲ್ಲೆಲ್ಲಾ ಅವರಿಗೆ 'ಅದೇ ಪ್ರಶ್ನೆ'ಯನ್ನು ಕೇಳಲಾಗುತ್ತಿತ್ತು. ಸಾಧು ಕೋಕಿಲ ಸಹ ಅದೇ ಪ್ರಶ್ನೆಯನ್ನು ಅಂದು ಉಪೇಂದ್ರ ಅವರಿಗೆ ಕೇಳಿ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದರು.
'ಕೆಜಿಎಫ್'ನಲ್ಲಿ ಯಶ್ ನೋಡಿ ಕಲಿತಿದ್ಧೇನು ಎಂಬ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಕೊಟ್ರು ಶಾಕಿಂಗ್ ಆನ್ಸರ್!
ಆದರೆ ನಟ ಉಪೇಂದ್ರ ಹೇಳಿ ಕೇಳಿ ಭಾರೀ ಬುದ್ದಿವಂತ. ಅವರು ತುಂಬಾ ಡೈನಾಮಿಕ್ ಆಗಿ ಭಾರೀ ಬುದ್ಧಿವಂತಿಕೆಯಿಂದ ಕೊಟ್ಟ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟಿದ್ದಾರೆ. ಆ ಮೂಲಕ ಜಾಣತನದ ಪ್ರಶ್ನೆಗೆ ಬಲು ಜಾಣತನದ ಉತ್ತರ ಕೊಟ್ಟಿದ್ದಾರೆ. ಈಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಕೂಡ ನಟ ಉಪೇಂದ್ರ ಅವರ ಬುದ್ಇವಂತಿಕೆ ಜತೆ ಸಮಯಪ್ರಜ್ಞೆಯನ್ನು ಕೂಡ ನೋಡಬಹುದು. ಅದಕ್ಕೇ ಅವರನ್ನು ಬುದ್ದಿವಂತ ಎನ್ನುವುದು ಅಲ್ಲವೇ?
ಅನುಷ್ಕಾ ಶರ್ಮಾ ಕೊಟ್ಟ ಬಿಗ್ ಫ್ಲಾಪ್‌ನಿಂದ ಕಂಗಾಲಾಗಿ ನಟನೆಯನ್ನೇ ಬಿಟ್ಟ ವಿಲನ್ ಪಾತ್ರಧಾರಿ!