ಕೇರಳ ಚಿತ್ರೋತ್ಸವಕ್ಕೆ ಬರಗೂರು ಸಿನಿಮಾ ‘ಬಯಲಾಟದ ಭೀಮಣ್ಣ’

Published : Oct 19, 2019, 05:40 PM IST
ಕೇರಳ ಚಿತ್ರೋತ್ಸವಕ್ಕೆ ಬರಗೂರು ಸಿನಿಮಾ ‘ಬಯಲಾಟದ ಭೀಮಣ್ಣ’

ಸಾರಾಂಶ

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬಯಲಾಟದ ಭೀಮಣ್ಣ’ ಚಿತ್ರವು ಪ್ರತಿಷ್ಟಿತ ಕೇರಳ ಅಂತಾರಾಷ್ಟ್ರೀಯ 11 ನೇ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಕೇರಳದ ಎರ್ನಾಕುಲಂನಲ್ಲಿ  ಶುಕ್ರವಾರ(ಅ.18) ದಿಂದಲೇ ಚಿತ್ರೋತ್ಸವ ಆರಂಭವಾಗಿದ್ದು, ಅ.22 ರವರೆಗೂ ನಡೆಯಲಿದೆ.

ಬೆಂಗಳೂರು (ಅ. 19): ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬಯಲಾಟದ ಭೀಮಣ್ಣ’ ಚಿತ್ರವು ಪ್ರತಿಷ್ಟಿತ ಕೇರಳ ಅಂತಾರಾಷ್ಟ್ರೀಯ 11 ನೇ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಕೇರಳದ ಎರ್ನಾಕುಲಂನಲ್ಲಿ  ಶುಕ್ರವಾರ(ಅ.18) ದಿಂದಲೇ ಚಿತ್ರೋತ್ಸವ ಆರಂಭವಾಗಿದ್ದು, ಅ.22 ರವರೆಗೂ ನಡೆಯಲಿದೆ.

ಈ ಚಿತ್ರೋತ್ಸವದಲ್ಲಿ ಶನಿವಾರ(ಅ.19) ಬರಗೂರು ರಾಮಚಂದ್ರಪ್ಪ ನಿರ್ದೇಶನದ ಬಯಲಾಟದ ಭೀಮಣ್ಣ ಚಿತ್ರ ಪ್ರದರ್ಶನಗೊಂಡಿದೆ. ‘ಬಯಲಾಟದ ಭೀಮಣ್ಣ’ ಚಿತ್ರವು ಬರಗೂರು ಅವರೇ ಬರೆದ ಕತೆಯಾಧರಿತ ಚಿತ್ರ. ಇದು ಬಯಲಾಟದ ಕಲಾವಿದನೊಬ್ಬನ ಕತೆ.

ಸುಂದರ ರಾಜ್, ಪ್ರಮೀಳಾ ಜೋಷಾಯ್, ಸ್ಪರ್ಷ ರೇಖಾ, ಹನುಮಂತೇ ಗೌಡ, ರಾಧಾ ರಾಮಚಂದ್ರ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ಇದು ಪ್ರದರ್ಶನ ಕಂಡಿದೆ. ಇದೀಗ ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ನಿರ್ದೇಶಕರಾದ ಸಾಹಿತಿ ಬರಗೂರು ರಾಮಚಂದ್ರಪ್ಪ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್