ಟೈಟಲ್‌ನಿಂದಲೇ ಗಮನ ಸೆಳೆಯುತ್ತಿದೆ ರಂಗನಾಯಕಿ ’ಸಿನಿಮಾ’ | ಅದಿತಿ ಪ್ರಭುದೇವ್ ನಾಯಕಿಯಾಗಿ ನಟಿಸಿದ್ದಾರೆ | ಈ ಚಿತ್ರದ ಪೋಸ್ಟರ್ ರಿಲೀಸಾಗಿದೆ.
ಚಿತ್ರದ ಟೈಟಲ್ ಮೂಲಕ ಸುದ್ಧಿ ಮಾಡುತ್ತಿರುವ ಚಿತ್ರ ರಂಗನಾಯಕಿ. ಈ ಚಿತ್ರದ ಪೋಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದೆ.
undefined
ರಂಗನಾಯಕಿಯ ನಾಯಕಿಯಾಗಿ ಅದಿತಿ ಪ್ರಭುದೇವ್ ನಟಿಸಲಿದ್ದಾರೆ. ಆ ಕರಾಳ ರಾತ್ರಿ, ಹಗ್ಗದ ಕೊನೆ, ಪುಟ 109 ಸಿನಿಮಾ ನಿರ್ದೇಶನ ಮಾಡಿರುವ ದಯಾಳ್ ರಂಗನಾಯಕಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಮತ್ತೆ ಕನ್ನಡ ನಾಡಿನ ರಸಿಕರ ಮನವ ಗೆಲ್ಲಲು ಬರುತ್ತಿದ್ದಾಳೆ ’ರಂಗನಾಯಕಿ’
ಏಪ್ರಿಲ್ 26 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಮತ್ತೊಂದು ಕಡೆ ಸಿನಿಮಾದ ಸಬ್ ಟೈಟಲ್ ವಾಲ್ಯೂಮ್ 1- ವರ್ಜಿನಿಟಿ ಚರ್ಚೆಗೆ ಆಸ್ಪದವಾಗಿದೆ. ಎಸ್ ವಿ ನಾರಾಯಣ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್ ನೀಡಿದ್ದಾರೆ. ಅದಿತಿ ಪ್ರಭುದೇವ್, ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ.