ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!

Published : Dec 15, 2024, 12:28 PM IST
ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!

ಸಾರಾಂಶ

ರಮ್ಯಾ, ಪುನೀತ್ ಜೊತೆಗಿನ ಆರಂಭಿಕ ಚಿತ್ರಗಳ ಅನುಭವ ಹಂಚಿಕೊಂಡಿದ್ದಾರೆ. ಪುನೀತ್ ನೃತ್ಯದಲ್ಲಿ ಸಹಾಯ ಮಾಡುತ್ತಿದ್ದರು, ಕಷ್ಟದ ಹೆಜ್ಜೆಗಳನ್ನು ಬದಲಾಯಿಸಲು ಡಾನ್ಸ್ ಮಾಸ್ಟರ್‌ಗೆ ಸೂಚಿಸುತ್ತಿದ್ದರು ಎಂದಿದ್ದಾರೆ. ರಾಜ್ ಕುಟುಂಬದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ (Ramya) ಅವರು ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಬಗ್ಗೆ ಮಾತನ್ನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ರಮ್ಯಾ ಅವರು ಮೊಟ್ಟಮೊದಲು ನಟಿಸಿರುವ ಸಿನಿಮಾ ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಎಂಬುದು ಬಹುತೇಕರಿಗೆ ಗೊತ್ತು. ಆ ಬಳಿಕ ಕೂಡ ತಮ್ಮ 2ನೇ ಚಿತ್ರ 'ಆಕಾಶ್'ದಲ್ಲಿ ಕೂಡ ನಟಿ ರಮ್ಯಾ ಅವರು ನಟಿಸಿದ್ದು ಪುನೀತ್ ಜೋಡಿಯಾಗಿಯೇ. ಆ ಬಳಿಕ ಅವರು ಬಹಳಷ್ಟು ಬೇರೆಬೇರೆ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. 

ನಟಿ ರಮ್ಯಾ ಅವರು ಅಪ್ಪು ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ರಮ್ಯಾ ಅವರು ಅದೇನು  ಹೇಳಿದ್ದಾರೆ? ಪುನೀತ್ ರಾಜ್‌ಕುಮಾರ್ ಬಗ್ಗೆ, ಡಾ ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ, ದೊಡ್ಮನೆ ಫ್ಯಾಮಿಲಿಯ ಎಲ್ಲರ ಬಗ್ಗೆ ಅದೇನು ಹೇಳಿದ್ದಾರೆ ಎಂಬುದು ಈ ವಿಡಿಯೋದಲ್ಲಿದೆ. ಹಾಗಿದ್ರೆ, ನಟಿ ರಮ್ಯಾ ರಮ್ಯಾ ಅದೇನು ಹೇಳಿದ್ದಾರೆ ಎಂಬನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ, ನೋಡಿ.. 

'ನಿಮ್ಗೆ ಎಲ್ರಿಗೂ ಗೊತ್ತಿರೋ ವಿಷ್ಯಾನೇ.. ನಂಗೆ ಡಾನ್ಸ್ ಅಷ್ಟು ಚೆನ್ನಾಗಿ ಬರಲ್ಲ.. ಅಪ್ಪು ಅವ್ರ ಜೊತೆ ನಾನು ಡಾನ್ಸ್ ಮಾಡುವಾಗಲೆಲ್ಲಾ ಅವ್ರೇ ನನಗೆ ಹೇಳಿ ಕೊಡ್ತಾ ಇದ್ರು.. ರಮ್ಯಾ ಅವ್ರೇ, ಈ ಥರ ಮಾಡಿ, ಇನ್ನೂ ಸುಲಭ ಆಗುತ್ತೆ ಅಂತ.. ಆಮೇಲೆ ಕೆಲವೊಂದು ಸಾರಿ ಸ್ಟೆಪ್ಸ್ ಬರದೇ ಹೋಗಿದ್ರೆ ಅಪ್ಪು ಅವ್ರೇ ಡಾನ್ಸ್ ಮಾಸ್ಟರ್‌ ಹತ್ರ ಹೋಗಿ ಹೇಳ್ತಾರೆ, 'ಸ್ಟೆಪ್ಸ್‌ ಚೇಂಜ್ ಮಾಡೋಣ ಮಾಸ್ಟರ್.. ಪಾಪ ರಮ್ಯಾ ಅವ್ರಿಗೆ ಕಷ್ಟ ಆಗ್ತಿದೆ ಅಂತ.. 

ಅಂದ್ರೆ, ಅಪ್ಪು ಅಷ್ಟರಮಟ್ಟಿಗೆ ಒಂದು ಸಪೋರ್ಟಿವ್ ಕೋ-ಸ್ಟಾರ್ ಅಂತನೇ ಹೇಳ್ಬಹುದು. ಇವತ್ತು ನಾನು ಈ ವೇದಿಕೆ ಮೇಲೆ ನಿಂತಿದೀನಿ ಅಂದ್ರೆ, ಇವ್ರೆಲ್ರೂ ನನಗೆ ಇಷ್ಟು ಅಭಿಮಾನ-ಪ್ರೀತಿ ತೋರಿಸ್ತಿದಾರೆ ಅಂದ್ರೆ ಅದಕ್ಕೆ ಡಾ ರಾಜ್‌ಕುಮಾರ್ ಅವ್ರ ಕುಟುಂಬ ಕಾರಣ. ಅಪ್ಪು, ಅಶ್ವಿನಿ ಅವ್ರು, ರಾಘಣ್ಣ ಅವ್ರು, ಶಿವಣ್ಣ ಅವ್ರು, ಗೀತಕ್ಕ ಹಾಗೂ ಇಡೀ ಫ್ಯಾಮಿಲಿ.. ಇವತ್ತು ಯುವ, ಡಿಂಪಿ, ಧೀರೆನ್, ಅಮ್ಮು ಅವ್ರು ಎಲ್ಲರನ್ನ ನೋಡಿದಾಗ ನಂಗೆ ಖುಷಿ ಆಗುತ್ತೆ.. ' ಎಂದಿದ್ದಾರೆ ನಟಿ ರಮ್ಯಾ. 

ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಈಗ ದಿವಂಗತ ಎನ್ನಿಸಿರುವ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅಂದು ಮಾತನ್ನಾಡಿರುವುದು ಇಂದು ವೈರಲ್ ಆಗಿದೆ. ಈ ಸೋಷಿಯಲ್ ಮೀಡಿಯಾ ಮಹಿಮೆಯೇ ಅಂಥದ್ದು.. ಯಾವಾಗಲೋ ಆಡಿರುವ ಮಾತು ಇನ್ಯಾವಲೋ ವೈರಲ್ ಆಗುತ್ತವೆ. ಕೆಲವೊಮ್ಮೆ ಅದು ವಾದ-ವಿವಾದಗಳಿಗೆ ಚರ್ಚೆ, ಅಪಪ್ರಚಾರಕ್ಕೂ ಕಾರಣವಾಗುತ್ತವೆ. ಆದರೆ ಇಲ್ಲಿ ಹಾಗಾಗಿಲ್ಲ, ನಟಿ ರಮ್ಯಾ ಅವರು ಪುನೀತ್ ಹಾಗೂ ಅಣ್ಣಾವ್ರ ಕುಟುಂಬದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಅದು ಈಗ ವೈರಲ್ ಆಗಿದೆ ಅಷ್ಟೇ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?