ಅಂಥ ಅನುಭವಗಳೇ ಆಗಿರ್ಲಿಲ್ಲ, ಸಂಬಂಧಗಳ ಬಗ್ಗೆ ತಿಳಿದುಕೊಂಡೆ: ಸೂರ್ಯ ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

Published : Jul 16, 2023, 02:26 PM ISTUpdated : Jul 16, 2023, 02:28 PM IST
ಅಂಥ ಅನುಭವಗಳೇ ಆಗಿರ್ಲಿಲ್ಲ, ಸಂಬಂಧಗಳ ಬಗ್ಗೆ ತಿಳಿದುಕೊಂಡೆ: ಸೂರ್ಯ ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

ಸಾರಾಂಶ

ನನಗೆ ಆಗ 22 ವರ್ಷ ವಯಸ್ಸು, ಅಂಥ ಅನುಭವಗಳೇ ಆಗಿರಲಿಲ್ಲ,  ಸಂಬಂಧಗಳ ಬಗ್ಗೆ ತಿಳಿದುಕೊಂಡೆ ಎಂದು ನಟಿ ರಮ್ಯಾ ತಮಿಳು ಸ್ಟಾರ್ ಸೂರ್ಯ ಜೊತೆ ನಟಿಸಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 

ಸ್ಯಾಂಡಲ್‌ವುಡ್ ನಟಿ ರಮ್ಯಾ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅಷ್ಟೆಯಲ್ಲದೇ ಸಿನಿಮಾಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದ ರಮ್ಯಾ ಇದೀಗ ಮತ್ತೆ ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಅಂಥ ಅಭಿಮಾನಿಗಳಿಗೆ ಜುಲೈ 21 ವಿಶೇಷ ದಿನ. ಯಾಕೆಂದರೆ, ಅಂದು ರಮ್ಯಾ ನಟನೆಯ ಎರಡು ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಬಹುದು. ಹೌದು, ರಮ್ಯಾ ನಟಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ರಂದು ಬಿಡುಗಡೆ ಆಗಲಿದೆ. ಅದೇ ದಿನ, ರಮ್ಯಾ ಮತ್ತು ಸೂರ್ಯ ನಟನೆಯ ಹಳೇ ಸಿನಿಮಾ ‘ಸೂರ್ಯ ಸನ್​ ಆಫ್​ ಕೃಷ್ಣನ್​’ಕೂಡ ಮರು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ರಮ್ಯಾ ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಮಿಳಿನ ‘ವಾರನಂ ಆಯಿರಂ’ ಸಿನಿಮಾ ತೆಲುಗಿಗೆ ‘ಸೂರ್ಯ ಸನ್​ ಆಫ್​ ಕೃಷ್ಣನ್​’ ಎಂದು ಡಬ್​ ಆಗಿ 2008ರಲ್ಲಿ ತೆರೆಕಂಡಿತ್ತು. ಸುಮಾರು 15 ವರ್ಷಗಳ ಬಳಿಕ ಆ ಸಿನಿಮಾ ಮತ್ತೆ ರೀರಿಲೀಸ್ ಆಗುತ್ತಿದೆ. ಆ ಸಿನಿಮಾದ ಪೋಸ್ಟರ್​ ಅನ್ನು ರಮ್ಯಾ ಈಗ ಹಂಚಿಕೊಂಡಿದ್ದಾರೆ. ಅದರ ಜೊತೆ ರಮ್ಯಾ ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದ ದಿನಗಳು ಹೇಗಿದ್ದವು ಎಂಬುದನ್ನು ರಮ್ಯಾ ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪ್ರಿಯಾ ಎಂಬ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿದ್ದರು.

ಚಡ್ಡಿ ಹಾಕ್ಕೊಂಡಿದ್ಯಾ, ಅಕ್ಕ ಪ್ಯಾಂಟ್ ಎಲ್ಲಿ, ಸಿನಿಮಾ ಮಾಡ್ತಿಲ್ವಾ? ರಮ್ಯಾ ಬೋಲ್ಡ್ ಫೋಟೋ ಸಖತ್ ಟ್ರೋಲ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ, ‘ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬ ಖುಷಿ ನೀಡಿತ್ತು. ಇದರ ಚಿತ್ರೀಕರಣ ನಡೆದಾಗ ನನಗೆ 22 ವರ್ಷ ವಯಸ್ಸು. ನಾನು ಒಂದಷ್ಟು ಎಮೋಷನ್​ಗಳಿಗೆ ತೆರೆದುಕೊಳ್ಳಬೇಕಿತ್ತು. ಆ ಪ್ರಾಯದಲ್ಲಿ ನನಗೆ ಅಂಥ ಅನುಭವಗಳೇ ಆಗಿರಲಿಲ್ಲ. ಬದುಕು, ನಷ್ಟ, ಸಂಬಂಧಗಳ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಪ್ರಿಯಾ ಎಂಬ ಪಾತ್ರ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಂಕೇತವಾಗಿ ಇರುತ್ತದೆ. ನಾನೂ ಆ ರೀತಿ ಪ್ರೀತಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ಕಲ್ಟ್​ ಕ್ಲಾಸಿಕ್ ಜುಲೈ 21 ಮತ್ತೆ ಬರ್ತಿದೆ. ಆನಂದಿಸಿ' ಎಂದು ಬರೆದುಕೊಂಡಿದ್ದಾರೆ. ರಮ್ಯಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಥ ಸಿನಿಮಾ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ. 

ತೆರೆಮೇಲೆ ಬ್ಲಾಕ್‌ಬಸ್ಟರ್ ಹಿಟ್ ಸಂಜು ವೆಡ್ಸ್ ಗೀತಾ ಪಾರ್ಟ್ 2: ನಾಯಕಿ ಯಾರು ಗೊತ್ತಾ..?

ಅನೇಕ ವರ್ಷಗಳ ಬಳಿಕ ಮತ್ತೆ ರಮ್ಯಾ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶೇಷ ಎಂದರೆ ಒಂದು ಹಳೆಯ ಸಿನಿಮಾವಾದರೆ ಮತ್ತೊಂದು ಹೊಸ ಸಿನಿಮಾ ಮೂಲಕ ಎನ್ನುವುದು ಅಭಿಮಾನಿಗಳಿಗೆ ಸಂಭ್ರಮ. ಸೂರ್ಯ ಮತ್ತು ರಮ್ಯಾ ಅವರನ್ನು ಮತ್ತೆ ತೆರೆಮೇಲೆ ನೋಡಿ ಆನಂದಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?