ಸ್ಟಾರ್‌ಗಳ ಜೊತೆ ಸಿನಿಮಾ ಮಾಡಲ್ಲ; ತನ್ನ ಮೇಲಿರುವ ಆರೋಪದ ಬಗ್ಗೆ ಕ್ಲಾರಿಟಿ ಕೊಟ್ಟ ರಾಜ್‌ ಬಿ ಶೆಟ್ಟಿ

Published : Jul 21, 2023, 01:43 PM IST
ಸ್ಟಾರ್‌ಗಳ ಜೊತೆ ಸಿನಿಮಾ ಮಾಡಲ್ಲ; ತನ್ನ ಮೇಲಿರುವ ಆರೋಪದ ಬಗ್ಗೆ ಕ್ಲಾರಿಟಿ ಕೊಟ್ಟ ರಾಜ್‌ ಬಿ ಶೆಟ್ಟಿ

ಸಾರಾಂಶ

ಶೆಟ್ರುಗಳು ಸೇರಿಕೊಂಡು ಎಷ್ಟು ಸಿನಿಮಾ ಮಾಡ್ಬೋದು? ಗಾಸಿಪ್‌ಗಳಿಗೆ ಬ್ರೇಕ್ ಹಾಕಬೇಕಿದ ರಾಜ್‌ ಬಿ ಶೆಟ್ಟಿ... 

ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸೂಪರ್ ಹಿಟ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾಗಳ ಕಲರವ ಹೆಚ್ಚಾಗಿದೆ. ಅದರಲ್ಲೂ ಶೆಟ್ರು ಗ್ಯಾಂಗ್‌ ತುಂಬಾನೇ ಹೆಸರು ಮಾಡುತ್ತಿದೆ. ರಾಜ್‌ ಬಿ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಸಿನಿಮಾ ಅಂದ್ರೆ ಅಲ್ಲಿ ಕ್ರಿಯೇಟಿವ್ ಸ್ಟೋರಿ ಇರುತ್ತೆ, ಮ್ಯೂಸಿಕ್ ಇರುತ್ತೆ ಮತ್ತು ಪಕ್ಕಾ ಶೆಟ್ರು ಭಾಷೆ ಇತ್ತು. ಆದರೆ ಈಗ ಜನರಲ್ಲಿ ಮೂಡಿರುವ ಪ್ರಶ್ನೆ ಏನೆಂದರೆ ಶೆಟ್ರು ಶೆಟ್ರು ಗ್ಯಾಂಗ್ ಮಾತ್ರ ಸೇರಿಕೊಂಡು ಸಿನಿಮಾ ಮಾಡುತ್ತಿದ್ದಾರೆ ದೊಡ್ಡ ಸ್ಟಾರ್‌ಗಳ ಜೊತೆ ಮಾಡುತ್ತಿಲ್ಲ ಹಾಗೂ ಹೊಸ ಕಲಾವಿದರಿಗೆ ಅವಕಾಶವಿಲ್ಲ ಅಂತ. ಈ ಪ್ರಶ್ನೆ ಬಗ್ಗೆ ರಾಜ್ ಕ್ಲಾರಿಟಿ ಕೊಟ್ಟಿದ್ದಾರೆ. 

'ಪ್ರತಿಯೊಬ್ಬ ಜನಪ್ರಿಯ ನಟರು ಕೂಡ ಫಿಲ್ಮಂಗೆ ಬರುವಾಗ ಒಂದು ಬಣ್ಣವನ್ನು ಹಿಡಿದುಕೊಂಡು ಬರುತ್ತಾರೆ, ಆ ಬಣ್ಣವನ್ನು ಬೇಕು ಅಂದ್ರೂ ಬೇಡ ಅಂದ್ರು ತುಂಬಿಸಲೇ ಬೇಕಾಗುತ್ತದೆ ಅದೇ ಹೊಸ ಪ್ರತಿಭೆಗಳಿಗೆ ಆ ಬಣ್ಣ ಇರುವುದಿಲ್ಲ ನಾವು ಹಚ್ಚಿದೇ ಬಣ್ಣ ಇದರಿಂದ ಕಥೆಗಾರನಿಗೆ ಒಂದು ಶಕ್ತಿ ಸಿಗುತ್ತದೆ. ಜನರಿಗೆ ತಲುಪಲು ಆಗುತ್ತೋ ಇಲ್ವೋ ಅನ್ನೋ ಯೋಚನೆ ಬೇಡ ಏಕೆಂದರೆ ಅದು ಕಂಟೆಂಟ್‌ನಲ್ಲಿ ಇರುತ್ತದೆ. ಈಗ ನಾವು ಎರಡು ತರ ಸಿನಿಮಾಗಳನ್ನು ಮಾಡಬಹುದು ಒಂದು ದೊಡ್ಡ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು ಅದರಿಂದ ತುಂಬಾ ಒಳ್ಳೆ ಓಪನಿಂಗ್ ಪಡೆದುಕೊಳ್ಳ ಬಹುದು ಆದರೆ ಸಿನಿಮಾ ಚೆನ್ನಾಗಿರಬೇಕು ಅದರ ಅಗತ್ಯ ತುಂಬಾ ಇದೆ ...ಅದೇ ರೀತಿ ಮತ್ತೊಂದು ಸಿನಿಮಾ ಮಾಡಬಹುದು ಪ್ರಮೋಷನ್ ಚೆನ್ನಾಗಿ ಮಾಡಬಹುದು ಕಂಟೆಂಟ್ ಚೆನ್ನಾಗಿ ಕೊಡಬಹುದು ಆದರೆ ಓಪನಿಂಗ್ ಭಯ ಇರುತ್ತದೆ ಒಂದು ವೇಳೆ ಪ್ರಮೋಷನ್‌ನಲ್ಲಿ ಜನರನ್ನು ತಲುಪಿದರೆ ಜನರು ಕಂಟೆಂಟ್ ಇಷ್ಟ ಪಡುತ್ತಾರೆ' ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ರಾಜ್ ಮಾತನಾಡಿದ್ದಾರೆ.

ದೊಡ್ಡಮ್ಮ ಪಾತ್ರ ಮಾಡಿರೋದು ಜಗ್ಗೇಶ್ ಅಲ್ಲ ಪಂಕಜಾ; ಮೇಕಪ್ ಸಿನಿಮಾ ಸ್ಟೋರಿ ಬಿಚ್ಚಿಟ್ಟ ನಟಿ!

'ದೊಡ್ಡ ನಟರು ಇಲ್ಲಿ ಇಲ್ಲ ಅನ್ನೋದನ್ನು ನಾನು ನಂಬುವುದಿಲ್ಲ..ಈಗ ಚೈತ್ರಾ ಆಚಾರ್ ತುಂಬಾ ಒಳ್ಳೆ ಒಳ್ಳೆ ಸಿನಿಮಾಗಳನ್ನು ಮಾಡುತ್ತಿದ್ದಾರೆ ಗೋಪಾಲ್ ಕೃಷ್ಣ ದೇಪಾಂಡೆ ನನ್ನ ಫೇವರೆಟ್‌ ನಟರಲ್ಲಿ ಒಬ್ಬರು...ಒಳ್ಳೆ ಒಳ್ಳೆ ನಟರಿದ್ದಾರೆ ಉಳಿದಿರುವುದರಲ್ಲಿ ಸರಿದೂಗಿಸಬೇಕು ಬಜೆಟ್‌ ಒಂದು ಕಾರಣನೇ ಅಲ್ಲ ನಾವು ಮಾಡುತ್ತಿರುವುದು ದೊಡ್ಡ ಬಜೆಟ್ ಸಿನಿಮಾನೇ. ಇಲ್ಲಿ ಸಮಸ್ಯೆ ಇರುವುದು ಡೇಟ್ಸ್...ಕ್ಯಾನವರ್ಸ್‌ ಸಿಕ್ಕಿದಾಗ ಅದರ ಮೇಲೆ ಚಿತ್ರ ಬಿಡಿಸುವ ಆರ್ಟಿಸ್ಟ್‌ ನಾನು ಮತ್ತೊಬ್ಬ ಸ್ಟಾರ್ ನಟನ ಡೇಟ್‌ಗಳನ್ನು ಮ್ಯಾನೇಜ್ ಮಾಡುವಷ್ಟು ಬುದ್ಧಿವಂತಿಕೆ ನನಗಿಲ್ಲ. ನಾನೊಬ್ಬ ಇಂಡಿ ಸಿನಿಮಾ ಮೇಕರ್ ಯಾವ ಸಂಸ್ಥೆಯಲ್ಲೂ ಸಿನಿಮಾ ಬಗ್ಗೆ ಕಲಿತಿಲ್ಲ ಯಾವ ನಿರ್ದೇಶಕರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡದೇ ಬಂದಿರುವ ಕಾರಣ ಆ ಫಾರಮಲ್ ಸೆಟಪ್ ಮಾಡಿಲ್ಲ. ಮುಂದೆ ಅವಕಾಶ ಸಿಕ್ಕರೆ ಕಲಿತು ಮಾಡುವೆ' ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ನಟಿ ರಾಗಿಣಿ ನಿಶ್ಚಿತಾರ್ಥ?; ಕೈಯಲ್ಲಿರುವ ಡೈಮೆಂಡ್‌ ಉಂಗುರ ಪ್ರಶ್ನಿಸಿದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?