ಏಕಾಂಗಿಯಾಗಿ ನ್ಯೂ ಇಯರ್ ಆಚರಿಸಿದ ಚಂದನವನದ ಸ್ವೀಟಿ ರಾಧಿಕಾ ಕುಮಾರಸ್ವಾಮಿ…!

Published : Jan 01, 2025, 04:42 PM ISTUpdated : Jan 01, 2025, 04:47 PM IST
ಏಕಾಂಗಿಯಾಗಿ ನ್ಯೂ ಇಯರ್ ಆಚರಿಸಿದ ಚಂದನವನದ ಸ್ವೀಟಿ ರಾಧಿಕಾ ಕುಮಾರಸ್ವಾಮಿ…!

ಸಾರಾಂಶ

ರಾಧಿಕಾ ಕುಮಾರಸ್ವಾಮಿ ಏಕಾಂಗಿಯಾಗಿ ಕೇಕ್ ಕತ್ತರಿಸಿ 2025ರ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಕಪ್ಪು ಉಡುಪಿನಲ್ಲಿ, ಕಪ್ಪು ಬಲೂನ್ ಅಲಂಕಾರದಲ್ಲಿ ಹೊಸ ವರ್ಷಾಚರಣೆ ಮಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. 

ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಏಕಾಂಗಿಯಾಗಿ ಸೆಲೆಬ್ರೇಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಆವಾಗ ಅವರ ಜೊತೆಗೆ ಇದ್ದುದ್ದು ಮುದ್ದಿನ ನಾಯಿಮರಿ ಮಾತ್ರ. ಇದೀಗ ನಟಿ ಹೊಸ ವರ್ಷವನ್ನು ತಮ್ಮ ಸ್ನೇಹಿತರು, ಫ್ಯಾಮಿಲಿ ಜೊತೆ ಎಂಜಾಯ್ ಮಾಡೋದು ಬಿಟ್ಟು ಈ ಬಾರಿಯೂ ಏಕಾಂಗಿಯಾಗಿದ್ದುಕೊಂಡೇ ಕೇಕ್ ಕತ್ತರಿಸಿ, ತಾವೇ ಎಂಜಾಯ್ ಮಾಡಿಕೊಂಡು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. 

ಪೂರ್ತಿಯಾಗಿ ಕಪ್ಪು ಬಣ್ಣದ ಬಲೂನ್ ಗಳಿಂದ ತುಂಬಿರುವ, ಸುಂದರವಾಗಿ ಡೆಕೊರೇಶನ್ ಮಾಡಲಾಗಿರುವ ಸ್ಥಳದಲ್ಲಿ ರಾಧಿಅಕ ಕುಮಾರಸ್ವಾಮಿ ಕಪ್ಪು ಬಣ್ಣದ ಥೈ ಹೈ ಸ್ಲಿಟ್ ಗೌನ್ ಧರಿಸಿ, 2024 ರ ಬಲೂನ್ ನಿಂದ 4 ನ್ನು ತೆಗೆದು 5ನ್ನು ಇಡುತ್ತಾ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂಭ್ರಮದ ವಿಡಿಯೋ ಶೇರ್ ಮಾಡಿರುವ ರಾಧಿಕ ‘ಹೊಸ ವರ್ಷ 2025 ಇಲ್ಲಿದೆ. ನಿಮ್ಮ ಕನಸುಗಳನ್ನು ನನಸಾಗಿಸಲು ನೂರಾರು ದಿನಗಳಿವೆ. ಕಹಿ ನೆನಪು ಮರೆತು, ಸಿಹಿ ಕನಸು ಹೊತ್ತು ಹೊಸ ವರ್ಷವನ್ನು (New Year) ಸ್ವಾಗತಿಸೋಣ ಎಂದು ಬರೆದುಕೊಂಡಿದ್ದಾರೆ. 

ಮುದ್ದಿನ ನಾಯಿ ಜೊತೆ ಒಬ್ಬಳೇ ಬರ್ತಡೇ ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ!

ರಾಧಿಕಾ ಕುಮಾರಸ್ವಾಮಿಗೆ ಅಭಿಮಾನಿಗಳು ಹೊಸ ವರ್ಷದ ಶುಭಾಷಯ ಕೋರಿದ್ದಾರೆ. ಜೊತೆಗೆ ಯಾಕೆ ಒಬ್ಬರೇ ನ್ಯೂ ಇಯರ್ ಆಚರಿಸುತ್ತಿದ್ದೀರಿ, ಕುಮಾರಣ್ಣನ ಜೊತೆ ಆಚರಿಸಿ ಮೇಡಂ ಎಂದು ಸಹ ಹೇಳಿದ್ದಾರೆ. ಜೊತೆಗೆ ನಟಿಯ ಅಂದವನ್ನು ಹೊಗಳುತ್ತಾ, ನಿಮ್ಮ ವಯಸ್ಸು ಮತ್ತು ಅಂದ ರಿವರ್ಸ್ ಗೇರಲ್ಲಿ (ageing in reverse gare) ಹೋಗ್ತಿದೆ, ನೀವು ಚಂದನವನದ ಐಶ್ವರ್ಯ ರೈ ಎಂದು ಹಾಡಿ ಹೊಗಳಿದ್ದಾರೆ. ಜೊತೆಗೆ ನಿಮ್ಮ ಮುದ್ದಾದ ಮೊಗದಲ್ಲಿ ಆ ನಗು ಯಾವಾಗಲೂ ಹಾಗೇ ಇರಲಿ ಎಂದು ಹಾರೈಸಿದ್ದಾರೆ. 

ಕಡಲ ತೀರದಲ್ಲಿ ಕುಣಿದು ಕುಪ್ಪಳಿಸಿದ ಸ್ವೀಟಿ ರಾಧಿಕಾ ಕುಮಾರಸ್ವಾಮಿ; ಹಾಡು ಕೇಳಿ ಶಾಕ್ ಆಗ್ಬೇಡಿ..!

ರಾಧಿಕಾ ಬಗ್ಗೆ ಹೇಳುವುದಾದ ಮೂಲತಃ ಮಂಗಳೂರಿನವರಾದ ಇವರು ನಟಿ ಹಾಗೂ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಸೃಜನ್ ಲೋಕೇಶ್ ಜೊತೆ 'ನೀಲಮೇಘಶ್ಯಾಮ' ಚಿತ್ರದ ಮೂಲಕ ಕರಿಯರ್ ಆರಂಭಿಸಿದರು.2002 ರಲ್ಲಿ ತೆರೆಕಂಡ ನಟ ವಿಜಯ್ ರಾಘವೇಂದ್ರ (Vijay Raghavendra) ಜೊತೆ ನಟಿಸಿದ 'ನಿನಗಾಗಿ' ಸಿನಿಮಾ ರಾಧಿಕಾರಿಗೆ ಹೆಸರು ತಂದುಕೊಟ್ಟಿತು. ಜೊತೆಗೆ ತವರಿಗೆ ಬಾ ತಂಗಿ, ಪ್ರೇಮಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮಸಾಲಾ, ಆಟೋ ಶಂಕರ್, ಮಂಡ್ಯ, ಅನಾಥರು, ಸ್ವೀಟಿ ನನ್ನ ಜೋಡಿ ಸೇರಿ ಅನೇಕ ಸಿನಿಮಾಗಳಲ್ಲಿ ರಾಧಿಅಕ ನಟಿಸಿದ್ದಾರೆ. ಸಿನಿಮಾ ನಿರ್ಮಾಣಗಳನ್ನೂ ಕೂಡ ಮಾಡಿದ್ದು, ಯಶ್ ಹಾಗೂ ರಮ್ಯ ಅಭಿನಯದ 'ಲಕ್ಕಿ' ಹಾಗೂ ಆದಿತ್ಯ ಜೊತೆ ತಾವು ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ರಾಧಿಕಾ ನಿರ್ಮಾಣ ಮಾಡಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?