
ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್‌ಮ್ಯಾನರ್ಸ್’ ಚಿತ್ರದಲ್ಲಿ ಪ್ರಮೋದ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಮೂಲಕ ಗಮನ ಸೆಳೆದು, ಸದ್ಯ ಹೀರೋ ಆಗಿ ಯಶಸ್ಸಿನ ಹಾದಿಯಲ್ಲಿರುವ ನಟ ಪ್ರಮೋದ್ ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದರೂ ಅಭಿಷೇಕ್‌ಗೆ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಇಬ್ಬರ ಪಾತ್ರದ ಚಿತ್ರೀಕರಣ ಎರಡನೇ ಹಂತದಲ್ಲಿ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಏ.20ರಿಂದ ಕೋಲಾರದಲ್ಲಿ ನಡೆಯಬೇಕಿತ್ತು. ಕೊರೋನಾ ಕಾರಣಕ್ಕೆ ಚಿತ್ರೀಕರಣ ಮುಂದೂಡಲಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ಸೂರಿ ಅವರು ಮತ್ತೊಬ್ಬ ಭರವಸೆಯ ನಟನನ್ನು ವಿಲನ್ ಮಾಡಿದ್ದಾರೆ.
ನಿರೀಕ್ಷೆಗಿಂತ ಹೆಚ್ಚು ಅವಕಾಶಗಳು ಸಿಗುತ್ತಿವೆ: ಪ್ರಮೋದ್
ಸೂರಿ ‘ಟಗರು’ ಚಿತ್ರದಲ್ಲಿ ಧನಂಜಯ್ ಅವರನ್ನು ವಿಲನ್ ಮಾಡಿ, ಡಾಲಿ ಇಮೇಜ್ ತಂದುಕೊಟ್ಟರು. ಈಗ ಪ್ರಮೋದ್ ಸರದಿ. ಧನಂಜಯ್ ಅವರಂತೆಯೇ ಪ್ರಮೋದ್ ಕೂಡ ಹೀರೋ ಕಂ ವಿಲನ್ ಆಗಿ ಮಿಂಚಲಿದ್ದಾರೆಯೇ, ಡಾಲಿಗೆ ಸಿಕ್ಕ ಅದೃಷ್ಟಪ್ರಮೋದ್‌ಗೂ ಸಿಗಲಿದೆಯೇ ಎಂಬುದು ಎಲ್ಲರ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.