ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ಕನ್ನಡದಲ್ಲೇ ಪತ್ರ ಬರೆದ ನಟಿ ಪೂಜಾ ಗಾಂಧಿ

By Shruthi Krishna  |  First Published Mar 25, 2023, 1:41 PM IST

 ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ನಟಿ ಪೂಜಾ ಗಾಂಧಿ ಕನ್ನಡದಲ್ಲೇ ಪತ್ರ ಬರೆದು ವಿವರಿಸಿದ್ದಾರೆ. 


ನಟಿ ಪೂಜಾ ಗಾಂಧಿ ಸದ್ಯ ಸಿನಿಮಾರಂಗದಿಂದ ದೂರ ಇದ್ದಾರೆ. ಮಳೆ ಹುಡುಗಿ ಎಂದೇ ಖ್ಯಾತಿಗಳಿಸಿದ್ದ ನಟಿ ಪೂಜಾ ತೆರೆಮೇಲೆ ಬರದೇ ವರ್ಷಗಳೇ ಆಗಿದೆ. ಪೂಜಾ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎನ್ನುವುದು ಅನೇಕರ ಪ್ರಶ್ನೆಯಾಗಿತ್ತು. ಆದರೆ ಇತ್ತೀಚಿಗೆ ಕನ್ನಡ ಕಲಿಕೆಯ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿಕರ ರೀತಿಯಲ್ಲಿ ದರ್ಶನ ನೀಡಿದರು. ಪೂಜಾ ಗಾಂಧಿ ಕನ್ನಡ ಬರೆಯುವುದನ್ನು ಕಲಿತಿದ್ದಾರೆ. ಪಂಜಾಬಿ ಸುಂದರಿ ಪೂಜಾ ಕನ್ನಡ ಮಾತನಾಡುವುದನ್ನು ಕಲಿತಿದ್ದರು. ಆದರೆ ಅವರಿಗೆ ಕನ್ನಡ ಬರೆಯುವುದು ಬರುತ್ತಿರಲಿಲ್ಲ. ಇದೀಗ ಅದನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಕೀರ್ತನೆಗಳು, ವಚನಗಳನ್ನು ಬರೆದು ಸಾಮಾಜಿಕಾ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಪೂಜಾ ಬರಹ ಕಂಡು ಕನ್ನಡ ಅಭಿಮಾನಿಗಳು ಬೆರರಾಗಿದ್ದರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಇದೀಗ ಪೂಜಾ ಮತ್ತೊಂದು ಪತ್ರ ಹಂಚಿಕೊಂಡಿದ್ದಾರೆ. ಅದೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಬಗ್ಗೆ ಎನ್ನುವುದು ವಿಶೇಷ. ಹೌದು, ರಮ್ಯಾ ಬಗ್ಗೆ ಪೂಜಾ ಗಾಂಧಿ ಕನ್ನಡದಲ್ಲಿ ಪತ್ರ ಬರೆದಿದ್ದಾರೆ. ರಮ್ಯಾ ಯಾಕಿಷ್ಟ ಎಂದು ಪತ್ರದಲ್ಲಿ ವವರಿಸಿದ್ದಾರೆ. ರಮ್ಯಾ ಸದ್ಯ ವೀಕೆಂಡ್ ವಿತ್ ರಮೇಶ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗುತ್ತಿದೆ. ಈಗಾಗಲೇ ರಮ್ಯಾ ಎಪಿಸೋಡ್ ಚಿತ್ರೀಕರಣವಾಗಿದ್ದು ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋ ನೋಡಿದ ಪೂಜಾ ಗಾಂಧಿ, ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ವಿವರಿಸಿದ್ದಾರೆ. 

Tap to resize

Latest Videos

'ರಮೇಶ್ ಸರ್, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್ ಬಂದಿ ನೋಡೋಕೆ ಲಕ್ಷಾಂತರ  ಕನ್ನಡಿಗರ ರೀತಿ ನಾನು ಕೂಡ ಕಾತುರದಿಂದ ಕಾತ್ದಿದ್ದೀನಿ' ಎಂದು ಹೇಳಿದ್ದಾರೆ. 

ದಾಸರ ಕೀರ್ತನೆ, ವಚನ ಬರೆದ ಪೂಜಾ ಗಾಂಧಿ; ಕೈ ಬರಹಕ್ಕೆ ಜೈ ಎಂದ ಕನ್ನಡಿಗರು

'ನನಗೆ ವೈಯಕ್ತಿಕವಾಗಿ ಆಕೆ ಯಾಕೆ ಇಷ್ಟ ಆಗ್ತಾರೆ ಎಂದರೆ ಅವರು ಸಹಕಲಾವಿದರ ಪರವಾಗಿ ನಿಲ್ಲುತ್ತಾರೆ. ಆಕೆಯಲ್ಲಿನ ಈ ಗುಣ ನನಗೆ ತುಂಬಾ ಇಷ್ಟವಾಗುತ್ತದೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ ಪೂಜಾ ಗಾಂಧಿ ಉತ್ತಮ ಪ್ರಯತ್ನ ಮಾಡಿದ್ದೀರಾ ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್‌ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ ಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ' ಎಂದು ಹೇಳಿದ್ದಾರೆ. 

Weekend With Ramesh; ಮೊದಲ ಅತಿಥಿ ರಮ್ಯಾ, ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಇರ್ತಾರೆ? ಇಲ್ಲಿದೆ ಪಟ್ಟಿ

ರಮ್ಯಾ ಸದ್ಯ ಅನೇಕ ವರ್ಷಗಳ ಬಳಿಕ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. ಸಿನಿಮಾದಿಂದ  ರಾಜಕೀಯಕ್ಕೆ ಜಿಗಿದಿದ್ದ ರಮ್ಯಾ ಇದೀಗ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ನಟನೆ ಜೊತೆಗೆ ರಮ್ಯಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ರಮ್ಯಾ ನಿರ್ಮಾಣದ ಆಪಲ್ ಬಾಕ್ಸ್ ಸಂಸ್ಥೆಯಿಂದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಡಿ ಬರುತ್ತಿದೆ. ಇನ್ನೂ ರಮ್ಯಾ ನಟ ಧನಂಜಯ್ ಜೊತೆ ಬಣ್ಣ ಹಚ್ಚುವ ಮೂಲಕ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬರ್ತಿದ್ದಾರೆ. ರಮ್ಯಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.  

click me!