
ನಿರ್ದೇಶಕ ನಂದಕಿಶೋರ್ ಹಾಗೂ ಶ್ರೇಯಸ್ ಕೆ ಮಂಜು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ರಾಣಾ' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನಲ್ಲಿ ಸಾಹಸ ದೃಶ್ಯ ಚಿತ್ರೀಕರಣ ನಡೆಯುತಿದ್ದು, ಕಂಬವೊಂದು ಫೋಟೋಗ್ರಾಫರ್ ತಲೆ ಮೇಲೆ ಬಿದ್ದು, ಅವಘಡ ಸಂಭವಿಸಿದೆ. ಫೋಟೋಗ್ರಾಫರ್ ಪಣೀಂದ್ರ ತೆಲೆಗೆ ಪೆಟ್ಟು ಬಿದ್ದಿದೆ.
ಹೌದು! ಮಿನರ್ವಾ ಮಿಲ್‌ನಲ್ಲಿ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕಂಬ ಬಿದ್ದು, ಫೋಟೋಗ್ರಾಫರ್ ಪಣೀಂದ್ರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಲವಾಗಿ ಪೆಟ್ಟಾಗಿರೋ ಕಾರಣ ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರು ವಾರಗಳ ಹಿಂದೆಯಷ್ಟೇ ಚಿತ್ರದ ಮುಹೂರ್ತ ಮಾಡಲಾಗಿತ್ತು. ಗುಜ್ಜಾಲ್ ಪುರುಷೋತ್ತಮ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಏಕ್ ಲವ್ ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಮತ್ತು ಮಟಾಶ್ ಸಿನಿಮಾ ಖ್ಯಾತಿಯ ರಜನಿ ಭಾರದ್ವಾಜ್. ಖಡಕ್ ವಿಲನ್ ಪಾತ್ರದಲ್ಲಿ ರಾಘವೇಂದ್ರ ಮತ್ತು ಮೋಹನ್ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.