
‘ರಂಗನಾಯಕಿ’ ಚಿತ್ರದ ನಂತರ ಶ್ರೀನಿ ಮತ್ತು ಅದಿತಿ ಪ್ರಭುದೇವ ಮತ್ತೆ ಜತೆಯಾಗುತ್ತಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಮಹಾಲಕ್ಷ್ಮೀ ಮಂದಿರದಲ್ಲಿ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಬಂದು ಚಿತ್ರತಂಡ ಹೇಳಿಕೊಂಡ ಮಾತುಗಳು ಇಲ್ಲಿವೆ-
1. ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಕತೆ. ಯಾವುದೇ ಗೊಂದಲಗಳಿಲ್ಲದೆ ನಿರೂಪಣೆ ಮಾಡಿರುವ ಕತೆ ಇದಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೆ ಮೆಚ್ಚುಗೆ ಆಗಲಿದೆ.
ಶ್ರೀನಿ ಜೊತೆ 'ಓಲ್ಡ್ ಮಾಂಕ್' ಹಿಡಿದ ಅದಿತಿ ಪ್ರಭುದೇವ.!
2. ಚಿತ್ರದ ಹೆಸರು ತುಂಬಾ ಕ್ಯಾಚಿಯಾಗಿದೆ. ‘ಓಲ್ಡ್ ಮಾಂಕ್’ ಎನ್ನುವುದು ಎಲ್ಲರಿಗೂ ಗೊತ್ತಿರುವ ಹೆಸರು. ಎಣ್ಣೆ ಹೆಸರಿನ ಚಿತ್ರದಲ್ಲಿ ಏನು ಹೇಳಕ್ಕೆ ಹೊರಟಿದ್ದೇವೆ ಎಂಬುದು ಚಿತ್ರದ ಕತೆ.
3. ಶಾಪಕ್ಕೆ ಗುರಿಯಾದ ನಾರದ ಭೂಲೋಕಕ್ಕೆ ಬಂದ ಮೇಲೆ ಏನಾಗುತ್ತದೆ, ನಾರದನ ಪ್ರೇಮ ಕತೆಯನ್ನು ಈ ಜನರೇಷನ್ ಪ್ರೇಮ ಕತೆಗಳ ಜತೆಗೆ ಹೇಳುತ್ತಿದ್ದೇವೆ.
4. ಚಿತ್ರದ ನಾಯಕಿ ಅದಿತಿ ಪ್ರಭುದೇವ ಅವರು ಇಲ್ಲಿ ತುಂಬಾ ಟ್ರೆಡಿಷನಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ಗಿಂತ ಹೆಚ್ಚಾಗಿ ನಟನೆಗೆ ಮಹತ್ವ ಇರುವ ಪಾತ್ರ ಅವರದು.
ನೀಲಿ ಸೀರೆಯಲ್ಲಿ ಗ್ಲಾಮರಸ್ ಬೊಂಬೆಯಾಗಿದ್ದಾಳೆ 'ಬ್ರಹ್ಮಚಾರಿ' ಹುಡುಗಿ!
5. ಎಸ್ ನಾರಾಯಣ್, ಅರುಣಾ ಬಾಲರಾಜ್ ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಶ ಕೂದವಳ್ಳಿ ಕ್ಯಾಮೆರಾ, ಸೌರಭ್ ವೈಭವ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ.
6. ಎಸ್ ನಾರಾಯಣ್ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ‘ಇವರು ಎಲ್ಲಕ್ಕೂ ಎಸ್ ನಾರಾಯಣ್, ಪ್ರೀತಿ ವಿಚಾರಕ್ಕೆ ಬಂದರೆ ನೋ ನಾರಾಯಣ್’ ಎನ್ನುವ ಸಂಭಾಷಣೆಗಳು ಬರಿದ್ದು, ಚಿತ್ರದ ಹೈಲೈಟ್ ಕೂಡ ಈ ಸಂಭಾಷಣೆಗಳಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.