ಮತ್ತೆ ಬರಲಿದೆ 'ನಾ ನಿನ್ನ ಬಿಡಲಾರೆ; ಅನಂತ್‌ ನಾಗ್‌-ಲಕ್ಷ್ಮೀ ಬದಲು ಪಂಚಿ-ಅಂಬಾಲಿ ಭಾರತಿ ಜೋಡಿ!

By Shriram Bhat  |  First Published Feb 24, 2024, 8:02 PM IST

ಹಿರಿಯ ನಟ ಅನಂತನಾಗ್ ಹಾಗೂ ಜ್ಯೂಲಿ ಲಕ್ಷ್ಮಿ ಕಾಂಬಿನೇಷನಲ್ಲಿ ಬಂದಂತಹ 'ನಾ ನಿನ್ನ ಬಿಡಲಾರೆ' ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಹೊಸ ರೀತಿಯ ಕಂಟೆಂಟ್ನ ಹೊಂದಿದೆ' ಎನ್ನುವುದು ಚಿತ್ರತಂಡದ ಮಾತು. 


ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಆಗಮನ ಜಾಸ್ತಿಯಾಗಿದೆ. ವಿಭಿನ್ನವಾದ ಕಂಟೆಂಟು ಪ್ರತಿಭಾವಂತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ತಮ್ಮಲ್ಲಿರುವಂತಹ ವಿಭಿನ್ನವಾದಂತಹ ಪ್ರತಿಭೆ ಹಾಗೂ ಪ್ರಯತ್ನಗಳೊಂದಿಗೆ ಹೊಸ ರೀತಿಯ ಸಿನಿಮಾಗಳನ್ನ ಮಾಡುತ್ತಲೇ ಬಂದಿದ್ದಾರೆ. ಈಗ ಚಿತ್ರ ರಂಗದಲ್ಲಿ ಇರುವಂತವರು ಮೊದಲು ಬಂದಾಗ ಹೊಸಬರಾಗಿದ್ದರು. ಈಗ ನಿಧಾನವಾಗಿ ತಮ್ಮ ಒಳ್ಳೆಯ ಸಿನಿಮಾಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. 

ಈ ನಿಟ್ಟಿನಲ್ಲಿ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಯುವ ತಂಡ,ಉತ್ಸಾಹಿ ಕಲಾವಿದರ ಬಳಗ ಬಂದು ನಿಂತಿದೆ, ಅದುವೇ 'ನಾ ನಿನ್ನ ಬಿಡಲಾರೆ'. ಈಗಾಗಲೇ ಬಿಡುಗಡೆಯಾಗಿರುವ 'ನಾ ನಿನ್ನ ಬಿಡಲಾರೆ' ಚಿತ್ರದ ಫಸ್ಟ್ ಲುಕ್, ಒಂದು ಮಟ್ಟದ ಸುದ್ದಿ ಮಾಡಿದ್ದು ಟೈಟಲ್ ತುಂಬಾ ಕುತೂಹಲವನ್ನು ಕೆರಳಿಸಿದೆ. ಮೇಲಾಗಿ ನಾ ನಿನ್ನ ಬಿಡಲಾರೆ ಅನ್ನುವಂತಹ ಒಂದು ಶೀರ್ಷಿಕೆ ಬಗ್ಗೆ ನಾವು ಮಾತನಾಡಿದರೆ ಬಹಳ ವರ್ಷಗಳಿಂದ ಇದೇ ಶೀರ್ಷಿಕೆಯಲ್ಲಿ ಬರುವಂತಹ ಸಿನಿಮಾ ರೆಕಾರ್ಡ್ ಮಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Tap to resize

Latest Videos

ಅಪ್ಪು-ಉಪ್ಪಿ ಓಲ್ಡ್ ವೀಡೀಯೋ ಮತ್ತೆಮತ್ತೆ ವೈರಲ್; ಪುನೀತ್ ಪ್ರಶ್ನೆ, ಉಪೇಂದ್ರ ಉತ್ತರಕ್ಕೆ ಶಾಕ್ ಆಗ್ತೀರಾ!

ಆದರೆ ಹಿರಿಯ ನಟ ಅನಂತನಾಗ್ ಹಾಗೂ ಜ್ಯೂಲಿ ಲಕ್ಷ್ಮಿ ಕಾಂಬಿನೇಷನಲ್ಲಿ ಬಂದಂತಹ 'ನಾ ನಿನ್ನ ಬಿಡಲಾರೆ' ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಹೊಸ ರೀತಿಯ ಕಂಟೆಂಟ್ನ ಹೊಂದಿದೆ' ಎನ್ನುವುದು ಚಿತ್ರತಂಡದ ಮಾತು. ಇತ್ತೀಚಿಗಷ್ಟೇ ನಾ ನಿನ್ನ ಬಿಡಲಾರೆ ಚಲನಚಿತ್ರದ ಚಿತ್ರಿಕರಣ ಮುಗಿದು ಕುಂಬಳಕಾಯಿಯನ್ನ ಒಡೆಯಲಾಗಿದೆ.

ಗೆಲುವು ಕೆಟ್ಟ ಶಿಕ್ಷಕ, ಸೋಲು ಕಲಿಸುವ ಪಾಠ ಮರೆಯಲಾಗದು; ಯಾಕೆ ಹೀಗಂದ್ರು ನಟ ಶಾರುಖ್‌ ಖಾನ್?

ಕಮಲ ಉಮಾ ಭಾರತಿ ನಿರ್ಮಾಣ ಸಂಸ್ಥೆಯಲ್ಲಿ ಬರುತ್ತಿರುವಂತಹ, ಶ್ರೀಮತಿ ಭಾರತಿ ಬಾಳಿ ನಿರ್ಮಾಣದ, ನವೀನ್ ಜಿ ಎಸ್ ನಿರ್ದೇಶನದ, ಎಂ ಎಸ್ ತ್ಯಾಗರಾಜ ಸಂಗೀತ ನಿರ್ದೇಶನದ, ವೀರೇಶ್ ಛಾಯಾಗ್ರಣ ಹೊಂದಿರುವ ನಾ ನಿನ್ನ ಬಿಡಲಾರೆ ಚಿತ್ರದ ತಾರಾಗಣದಲ್ಲಿ  ಪಂಚಿ ಮತ್ತು ಅಂಬಾಲಿ ಭಾರತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಸಿನಿಮಾ ತನ್ನ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ.

ಸ್ಟಾರ್ ಕಿಡ್ ಆಗಿದ್ದರೂ ಸಕ್ಸಸ್‌ಗೆ ಅದಕ್ಕಿಂತ ಹೆಚ್ಚಿನದೇನೋ ಬೇಕು; ನಟ ಜೂನಿಯರ್ ಎನ್‌ಟಿಆರ್‌

ಪ್ರತಿ ಹೊಸಬರ ಚಿತ್ರವು ತನ್ನ ವಿಭಿನ್ನ ಕಂಟೆಂಟ್ ಮೂಲಕವೇ ಎಲ್ಲರ ಮನಸ್ಸನ್ನು ಸೆಳೆಯುತ್ತಿರುವ ಈ ಕಾಲದಲ್ಲಿ  ಈ ಜಮಾನದಲ್ಲಿ 'ನಾ ನಿನ್ನ ಬಿಡಲಾರೆ' ಚಿತ್ರವು ಸಹ ಎಲ್ಲರ ಮನಸ್ಸನ್ನು ಗೆಲ್ಲುವ ಭರವಸೆಯಲ್ಲಿದೆ. ಹೀಗಂತ ಹೊಸಬರ ಚಿತ್ರತಂಡ ಹೇಳಿಕೊಂಡಿದೆ. ಬಹಳಷ್ಟು ಭರವಸೆ ಹೊಂದಿರುವ ಹೊಸಬರ ಈ ಚಿತ್ರವು ರಿಲೀಸ್ ಬಳಿಕ ಯಾವ ರೀತಿಯಲ್ಲಿ ಜಾದೂ ಮಾಡಲಿದೆ  ಎಂಬುದನ್ನು ಕಾದು ನೋಡಬೇಕಿದೆ. 

ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!

click me!