
777 ಚಾರ್ಲಿ ಟೀಸರ್‌ನ ಸ್ಪೂಫ್‌ಗೂ ಸಖತ್ ರೆಸ್ಪಾನ್‌ಸ್ ಬರುತ್ತಿದೆ. ಒಂದಿಷ್ಟು ಜನ ಉತ್ಸಾಹಿಗಳು ಈ ಟೀಸರ್‌ನ ಅನುಕರಣೆ ಮಾಡಿ ಯೂಟ್ಯೂಬ್‌ನಲ್ಲಿ ಬಿಡುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಾಣೋದು ನಿರ್ದೇಶಕ ಸಚಿನ್ ಶೆಟ್ಟಿ ಅವರು ತಮ್ಮ ಶಟರ್ ಬಾಕ್‌ಸ್ ಫಿಲಂಸ್ ಅನ್ನುವ ಯೂಟ್ಯೂಬ್ ಪೇಜ್‌ನಲ್ಲಿ ಇದನ್ನು ಹರಿಯಬಿಟ್ಟಿರುವ 777 ಚಾರ್ಲಿ ಸ್ಪೂಫ್.
ಸಚಿನ್ ‘ಒಂದು ಶಿಕಾರಿಯ ಕಥೆ’ ಸಿನಿಮಾ ನಿರ್ದೇಶಿಸಿ ನಿರ್ಮಾಣ ಮಾಡಿದ್ದರು. ಚಾರ್ಲಿ ಟೀಸರ್‌ನಲ್ಲಿ ಬರುವ ಚಾರ್ಲಿ ನಾಯಿಯಂತೆ, ತನ್ನ ನಾಯಿ ಚೊಂಟ ಎಂಬ ಸೊಟ್ಟ ಕಾಲಿರುವ ನಾಯಿಮರಿಯನ್ನು ಬಳಸಿ ಕರಾವಳಿಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಈ ಮರುಸೃಷ್ಟಿಯನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಈ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಸಿದ್ದಾರೆ. ನಿರ್ದೇಶಕ ಕಿರಣ್‌ರಾಜ್ ಅವರೂ ಶಹಭಾಸ್ ಅಂದಿದ್ದಾರೆ.
ಇದರ ಜೊತೆಗೆ ವಿವೇಕ್ ಅನ್ನುವವರು ತಮ್ಮ ‘ಎಎಸ್‌ವಿ 6’ ಯೂಟ್ಯೂಬ್ ಚಾನೆಲ್‌ನಲ್ಲಿ ತಮಾಷೆಯಾಗಿ ಸಣಕಲು ನಾಯಿಯನ್ನಿಟ್ಟು ಸ್ಪೂಫ್ ಮಾಡಿದ್ದಾರೆ. ಇದನ್ನೂ ಸಾವಿರಾರು ಜನ ನೋಡಿದ್ದಾರೆ.
ಸಚಿನ್ ಶೆಟ್ಟಿ ಮಾಡಿದ ಸ್ಪೂಫ್‌ನಲ್ಲಿ ಏನೇನಿದೆ?
ಕರಾವಳಿ ಭಾಗದ ತೋಟ, ಗದ್ದೆ, ನೀರು ತುಂಬಿದ ಕೆರೆಗಳು, ಕಾಡು ಬೆಟ್ಟಗಳ ಜೊತೆಗೆ ಚೊಂಟ ಎಂಬ ನಾಯಿಯ ಚಂದದ ನಟನೆ ಇದೆ. ಇದರಲ್ಲಿ ರಕ್ಷಿತ್ ಶೆಟ್ಟಿ ಪಾತ್ರದಲ್ಲಿ ಸಚಿನ್ ಅವರ ಸ್ನೇಹಿತ ನಟಿಸಿದ್ದು, ಥೇಟ್ ರಕ್ಷಿತ್ ಅವರನ್ನೇ ಹೋಲುತ್ತಾರೆ. ಮಗುವಿನ ಪಾತ್ರದಲ್ಲಿ ಆ ಊರಿನ ಬಾಲೆಯೊಬ್ಬಳು ಕಾಣಿಸಿಕೊಂಡಿದ್ದಾಳೆ. ಈ ಸ್ಪೂಫ್ ಮೇಕಿಂಗ್‌ಅನ್ನೂ ಸಚಿನ್ ಅವರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದು 70 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ‘ಚೊಂಟ’ ಅನ್ನುವ ನಾಯಿ ಮರಿಯಿಂದ ನಟನೆ ತೆಗೆಸಿದ್ದನ್ನು ಅವರಿಲ್ಲಿ ಸಖತ್ ತಮಾಷೆಯಾಗಿ ವಿವರಿಸಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ '777 ಚಾರ್ಲಿ' ಟೀಸರ್; 4 ದಿನದಲ್ಲಿ 5 ಮಿಲಿಯನ್!
ಏನಿದು ಸ್ಪೂಫ್ ಟ್ರೆಂಡ್?
ಸ್ಪೂಫ್ ಅಂದರೆ ತಮಾಷೆಯಾಗಿ ಸಿನಿಮಾದ ಒಂದು ಸಣ್ಣ ಪಾರ್ಟ್ ಅನ್ನು ಅನುಕರಣೆ ಮಾಡುವುದು. ಈಗಾಗಲೇ ಹಾಲಿವುಡ್‌ನ ಅನೇಕ ಸಿನಿಮಾಗಳ ಸ್ಪೂಫ್‌ಗಳು ತಮ್ಮ ನಗಿಸುವ ಗುಣದಿಂದಲೇ ಗಮನಸೆಳೆದಿವೆ. ಮಲಯಾಳಂ ಚಿತ್ರರಂಗದಲ್ಲೂ ಇಂಥಾ ಪ್ರಯತ್ನಗಳಾಗಿವೆ. ಕೆಲವೊಮ್ಮೆ ಇಡೀ ಸಿನಿಮಾವನ್ನೇ ಸ್ಪೂಫ್ ಮಾಡೋದೂ ಇದೆ. ಹಾಲಿವುಡ್‌ನಲ್ಲಿ ಕಳೆದ ವರ್ಷ ‘ಟೊ್ರೀಲ್‌ಸ್ ವರ್ಲ್‌ಡ್ ಟೂರ್’, ‘ಸೋಲ್’ ನಂಥಾ ಸ್ಪೂಫ್ ಚಿತ್ರಗಳು ಗಮನಸೆಳೆದಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.