
ಕಾಡು ಮೇಡು , ಪ್ರಾಣಿ ಪಕ್ಷಿ , ಮಲೆನಾಡಿನ ಸೌಂದರ್ಯದ ಅಪರೂಪದ ಸೂಕ್ಷ್ಮ ಲೋಕವನ್ನು ಅಕ್ಷರದ ರೂಪದಲ್ಲಿ ತನ್ನದೇ ನೆಲದ ಶೈಲಿಯಲ್ಲಿ ಓದುಗನಿಗೆ ಪರಿಚಯಿಸಿದ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಮೂರು ಕಥೆ,ಕಾದಂಬರಿಗಳು ಈಗಾಗಲೇ ಚಲನಚಿತ್ರಗಳಾಗಿವೆ ಇದರ ಪಟ್ಟಿಗೆ ಮತ್ತೊಂದು ಕಥೆ ಸೇರ್ಪಡೆಯಾಗುತ್ತಿದ್ದು ಅದುವೇ 'ಡೇರ್‌ಡೆವಿಲ್ ಮುಸ್ತಫಾ' .
ಪತ್ರದಲ್ಲಿ ಪುತ್ರ ತೇಜಸ್ವಿಯವರಿಗೆ ಕುವೆಂಪು ತಿಳಿಸಿದ ವಿಚಾರವೇನು..?
ಮೈಸೂರು ಮೂಲದ ಶಶಾಂಕ್ ಕೆಲ ವರ್ಷಗಳ ಕಾಲ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಇದೀಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದು ಪ್ರಸ್ತುತ ಸಮಾಜದ ಕೈಗನ್ನಡಿಯಂತಿರುವ ತೇಜಸ್ವಿ ಅವರ 'ಡೇರ್‌ಡೆವಿಲ್' ಕಥೆಯನ್ನು ಸಿನಿಮಾ ಮಾಡಲೇಬೇಕು ಎಂದು ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಹಾಗೂ ಪುತ್ರಿಯರ ಒಪ್ಪಿಗೆಯನ್ನು ಕೂಡ ಪಡೆದುಕೊಂಡಿದ್ದಾರೆ.
ತೇಜಸ್ವಿ ಅವರು ಅಂದು ಬರೆದಿರುವ ಈ ಕಥೆ ಇಂದಿನ ಜನಾಂಗಕ್ಕೂ ಇಂದಿನ ಪರಿಸ್ಥಿತಿಗೆ ಒಪ್ಪುವಂತಿದೆ . 'ಡೇರ್‌ಡೇವಿಲ್ ಕಥೆಯು ಭೂಮಿಯ ಮೇಲೆ ಜಾತಿ ಧರ್ಮ ಯಾವುದೂ ಶಾಶ್ವತವಲ್ಲ ಮನುಷ್ಯತ್ವ ಒಂದೇ ಶಾಶ್ವತ ಎಂಬ ಸತ್ಯವನ್ನು ಈ ಕಥೆ ಹೇಳುತ್ತದೆ. ತೇಜಸ್ವಿ ಅವರೇ ಹೇಳುವಂತೆ ಪ್ರಪಂಚದಲ್ಲಿ ಕೊಂದು ಉಳಿಸಿಕೊಳ್ಳಬೇಕಾದ ಧರ್ಮ , ಜಾತಿ ಯಾವುದಿದೆ ? ಇದನ್ನು ಪ್ರತಿಪಾದಿಸುವಂತೆ ಈಕಥೆಯು ತಪ್ಪುತ್ತಿರುವ ಈಗಿನ ಯುವಕ - ಯುವಕರಿಗೆ ಪಾಠವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಎಲ್ಲವನ್ನೂ ಸರಿ ದಾರಿಗೆ ತರುವ ಪ್ರಯತ್ನವೇ ಈ ಕಥೆಯ ಸಾರಾಂಶವಾಗಿದೆ. ಪ್ರಸ್ತುತ ಸಮಾಜದ ಸ್ಥಿತಿಗೆ ಇದನ್ನು ಸಿನಿಮಾವಾಗಿ ಮಾಡಲೇಬೇಕು ಅನಿಸಿತು' ಎಂದು ನಿರ್ದೇಶಕ ಶಶಾಂಕ್ ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಂತ್ರಿ ನಾಯಿಯೋ, ಜಾತಿ ನಾಯಿಯೋ ತಿಳಿಯುವುದು ಹೇಗೆ? ತೇಜಸ್ವಿ ಹೇಳ್ತಾರೆ ನೋಡಿ
ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಆಡಿಷನ್ ಮಾಡಲಾಗಿದೆ. ಮಂಡ್ಯ ರಮೇಶ್, ಹಿರಿಯ ನಟ ಉಮೇಶ್, ಪೂರ್ಣಚಂದ್ರ ಮೈಸರೂ, ನಾಗಾಭೂಷಣ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಅಭಿನಯಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.