ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡಿದ್ದು, ಅದರ ಕ್ಯೂಟ್ ಫೋಟೋವನ್ನು ಮೇಘನಾ ರಾಜ್ ಶೇರ್ ಮಾಡಿಕೊಂಡಿದ್ದಾರೆ.
ಚಿಕ್ಕವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಸ್ಯಾಂಡಲ್ವುಡ್ನ ಅಪರೂಪದ ಕಣ್ಮಣಿಗಳಲ್ಲಿ ಒಬ್ಬರು ಚಿರಂಜೀವಿ ಸರ್ಜಾ. ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಸಂದಿವೆ. 2020ರಲ್ಲಿ 36ನೇ ವಯಸ್ಸಿಯಲ್ಲಿಯೇ ಹೃದಯಾಘಾತದಿಂದ ನಿಧನರಾದಾಗ ಅವರ ಪತ್ನಿ ಮೇಘನಾ (Meghana Raj) ಇನ್ನೂ ಗರ್ಭಿಣಿ. ಇನ್ನು ಕೆಲವೇ ತಿಂಗಳುಗಳಲ್ಲಿ ಅಪ್ಪನಾಗಿ ಜೀವನದ ಮತ್ತೊಂದು ಮಜಲು ಆರಂಭಿಸಬೇಕಿದ್ದ ಚಿರು ಬಾಳಿನಲ್ಲಿ ವಿಧಿ ಕ್ರೌರ್ಯವನ್ನೇ ಮೆರೆದುಬಿಟ್ಟಿತು. ವಾಯುಪುತ್ರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರಂಜೀವಿ ನಂತರ ಸಾಲು ಸಾಲು ಚಿತ್ರಗಳ ಮೂಲಕ ಜನರಿಗೆ ಹತ್ತಿರವಾಗುತ್ತಾ ಹೋಗಿದ್ದರು. ಆದರೆ ವಿಧಿಯಾಟದ ಮುಂದೆ ಎಲ್ಲವೂ ಗೌಣವಾಗಿಯೇ ಹೋಯ್ತು. ಮೇಘನಾ ಗರ್ಭಿಣಿ ಎಂಬ ಸುದ್ದಿ ತಿಳಿದಿದ್ದ ಚಿರಂಜೀವಿ ಅವರು, ಕುಣಿದು ಕುಪ್ಪಳಿಸಿ ಮುದ್ದಾದ ಗೊಂಬೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದರಂತೆ. ಪತಿ ಕೊಟ್ಟ ಉಡುಗೊರೆ ನೋಡಿ ಮೇಘನಾ ಸಹ ಭಾವುಕರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಚಿರು ಪತ್ನಿಗೆ ಕೊಟ್ಟ ಉಡುಗೊರೆ ಅದೇ ಕೊನೆಯಾಗಿತ್ತು.
ಚಿರಂಜೀವಿಯವರು ಸಾವನ್ನಪ್ಪಿದ ಕೆಲ ತಿಂಗಳ ಬಳಿಕ ಮೇಘನಾ ಅವರು ಪುಟ್ಟಾದ ಕಂದ ರಾಯನ್ಗೆ (Raayan Raj Sarja) ಜನ್ಮ ನೀಡಿದರು. 2021ರ ಅಕ್ಟೋಬರ್ನಲ್ಲಿ ಹುಟ್ಟಿದ ರಾಯನ್ಗೆ ಈಗ ಇನ್ನೂ ಎರಡು ವರ್ಷ ತುಂಬಿಲ್ಲ. ಇದಾಗಲೇ ಸೆಲೆಬ್ರಿಟಿಯಾಗಿದ್ದಾನೆ. ಮುದ್ದು ಮೊಗದ ರಾಯನ್ನ ಫೋಟೋಗಳನ್ನು ಮೇಘನಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಮೇಘನಾ ಅವರು ಮಗನ ಅಪ್ಡೇಟ್ಸ್ಗಳನ್ನೂ ಆಗಾಗ್ಗೆ ನೀಡುತ್ತಿರುತ್ತಾರೆ. ಪತಿಯ ಅಗಲಿಕೆಯ ನೋವನ್ನು ಮೇಘನಾ ಅವರು ರಾಯನ್ ರಾಜ್ ಸರ್ಜಾ ಆಗಮನದ ಬಳಿಕ ಮರೆಯಲು ಪ್ರಯತ್ನಿಸುತ್ತಿದ್ದಾರೆ. ಮಗನ ಆರೈಕೆಯಲ್ಲಿ ಅವರು ಸಂಪೂರ್ಣ ತೊಡಗಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಕ್ಕೆ ನಿವೇದಿತಾ ಗೌಡ ಸ್ಪೆಷಲ್: ವಂದೇ ಮಾತರಂನಲ್ಲಿ ಮಿಂಚಿದ ನಟಿ
undefined
ಸ್ವಾತಂತ್ರ್ಯ ದಿನದ (Independence Day 2023) ಅಂಗವಾಗಿ ಇಂದು ಪುಟಾಣಿ ರಾಯನ್, ಸೆಲ್ಯೂಟ್ ಮಾಡಿದ್ದಾನೆ. ಇದರ ಫೋಟೋ ಅನ್ನು ಮೇಘನಾ ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ. ಆತನ ಕ್ಯೂಟ್ನೆಸ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಲವ್ ಯೂ ಜ್ಯೂನಿಯರ್ ಚಿರು ಎನ್ನುತ್ತಾರೆ. ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದೆ. ಅಪ್ಪನನ್ನು ಮೀರಿಸುವ ಮಗನಾಗು ಎಂದು ಆಶೀರ್ವದಿಸುತ್ತಿದ್ದಾರೆ. ಜೊತೆಗೆ, ಮೇಘನಾ ರಾಜ್ ಅವರ ವೃತ್ತಿಜೀವನಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದೂ ಹಾರೈಸುತ್ತಿದ್ದಾರೆ.
ಪತಿಯ ಅಗಲಿಕೆ, ಮಗುವಿನ ಜನನದ ಬಳಿಕ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಮೇಘನಾ ಅವರು, ಸಾಮಾಜಿಕ ಜಾಲತಾಣದಲ್ಲಿ ಈಗ ಆ್ಯಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಮೂಲಕವೂ ಹಲವಾರು ಅಪ್‌ಡೇಟ್ಸ್ ನೀಡುತ್ತಿರುತ್ತಾರೆ. ಈಗ ಕೆಲ ವರ್ಷಗಳಿಂದ ಬಳಿಕ ಮತ್ತೆ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ‘ತತ್ಸಮ ತದ್ಭವ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕೂಡ ಒಂದು ಪಾತ್ರ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಕೊಲೆ ರಹಸ್ಯದ ಸುತ್ತ ಈ ಸಿನಿಮಾದ ಕಥೆ ಸಾಗಲಿದೆ. ವಿಶಾಲ್ ಆತ್ರೇಯ ನಿರ್ದೇಶನದ ‘ತತ್ಸಮ ತದ್ಭವ’ ಚಿತ್ರಕ್ಕೆ ಪನ್ನಗ ಭರಣ ಅವರು ಬಂಡವಾಳ ಹೂಡಿದ್ದಾರೆ.