ಪ್ಯಾರಿಸ್‌ ಟವರ್‌ ಎದುರು ಚಿರು ಜೊತೆ ಸೆಲ್ಫಿ; ಕಮ್‌ ಬ್ಯಾಕ್‌ ಎಂದ ಮೇಘನಾ ರಾಜ್!

Suvarna News   | Asianet News
Published : May 01, 2021, 10:26 AM ISTUpdated : May 01, 2021, 10:45 AM IST
ಪ್ಯಾರಿಸ್‌ ಟವರ್‌ ಎದುರು ಚಿರು ಜೊತೆ ಸೆಲ್ಫಿ; ಕಮ್‌ ಬ್ಯಾಕ್‌ ಎಂದ ಮೇಘನಾ ರಾಜ್!

ಸಾರಾಂಶ

ಚಿರಂಜೀವಿ ಸರ್ಜಾ ಜೊತೆ ಫಾರಿನ್‌ ಟ್ರಿಪ್ ಮಾಡಿದ ಫೋಟೋ ಶೇರ್ ಮಾಡಿಕೊಂಡ ಮೇಘನಾ ರಾಜ್.

ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಇಲ್ಲದ ಜೀವನವನ್ನು ಮೇಘನಾ ರಾಜ್‌ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುತ್ರನಲ್ಲೇ ಪತಿಯ ಗುಣಗಳನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಚಿರು ಜೊತೆ ಟ್ರ್ಯಾವಲ್ ಮಾಡಿದ ಫೋಟೋ ಶೇರ್ ಮಾಡಿಕೊಂಡು ಕಮ್ ಬ್ಯಾಕ್ ಎಂದಿದ್ದಾರೆ ಮೇಘನಾ ರಾಜ್. 

ಪ್ಯಾರಿಸ್‌ ಟವರ್ ಎದುರು ಇಬ್ಬರು ಕುಳಿತು ಸೆಲ್ಫಿ ಕ್ಲಿಕಿಸಿಕೊಂಡಿರುವ ಫೋಟೋ ಹಂಚಿಕೊಂಡು 'ಐ ಲವ್ ಯು, ಕಮ್ ಬ್ಯಾಕ್' ಎಂದು ಮೇಘನಾ ಬರೆದುಕೊಂಡಿದ್ದಾರೆ. ಸಿನಿ ಸ್ನೇಹಿತರಾದ ಪನ್ನಗಾ ಭರಣ, ರಾಗಿಣಿ ಪ್ರಜ್ವಲ್ ಸೇರಿದಂತೆ ಅನೇಕರು ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿ ಹಾಗೂ ಮೇಘನಾ ಅಭಿಮಾನಿಗಳು ಈ ಫೋಟೋ ನೋಡಿ ಭಾವುಕರಾಗಿದ್ದಾರೆ. ಅಣ್ಣ ಇದ್ದಿದ್ರೆ ಜೂನಿಯರ್‌ನ ರಾಜನ ರೀತಿ ನೋಡಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ. 

ಪುತ್ರನ 6 ತಿಂಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಮೇಘನಾ ರಾಜ್! 

6 ತಿಂಗಳ ಸಂಭ್ರಮದಲ್ಲಿರುವ ಜೂನಿಯರ್ ಚಿರು ಆರೈಕೆಯಲ್ಲಿ ಮೇಘನಾ ರಾಜ್‌ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಬಾಸ್ ಬೇಬಿ ಫೋಟೋಶೂಟ್ ಕೂಡ ಮಾಡಿಸಿದ್ದರು. 'ಮೇಡಂ ಪಾಪು ಈಗೀಗ ನೋಡಲು ನಿಮ್ಮ ರೀತಿ ಕಾಣಿಸುತ್ತಿದೆ' ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ದುಖಃದಲ್ಲಿದ್ದ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಸಂತೋಷವನ್ನು ಹೊತ್ತುಬಂದ  ಜೂನಿಯರ್ ಚಿರುಗೆ ಹೀಗೆ ಸದಾ ನಗು ನಗುತ್ತಾ ಆರೋಗ್ಯವಂತನಾಗಿರಲಿ ಎಂದು ಎಲ್ಲರೂ ಆಶಿಸೋಣ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ