KGF ನಿರ್ದೇಶಕ ಮಾಸ್ ಸಿನಿಮಾ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸ್ತಿರೋ ಈ ಸಿನಿಮಾ ಪೋಸ್ಟರ್ ವೈರಲ್ ಆಗಿದೆ. ನಟಿಸ್ತಿರೋದ್ಯಾರು ಗೊತ್ತಾ..?
ಕೆಜಿಎಫ್ ನಂತರ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್ ಇನ್ನೊಂದು ಮಾಸ್ ಸಿನಿಮಾ ನಿರ್ಮಿಸಲು ನಿದ್ಧವಾಗಿದೆ. ಭಗೀರಾ ಎಂಬ ಟೈಟಲ್‌ನೊಂದಿಗೆ ಸಿನಿಮಾ ಘೋಷಣೆಯಾಗಿದ್ದು, ನಟ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿದ್ದಾರೆ. ಸ್ಟಾರ್ ನಟನ ಜನ್ಮದಿನದ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ.
ಈ ಯೋಜನೆಗೆ ಕಥೆ ಬರೆದಿದ್ದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ತಮ್ಮ ಟ್ವಿಟ್ಟರ್‌ನಲ್ಲಿ ಪ್ರಶಾಂತ್ ಹೀಗೆ ಬರೆದಿದ್ದಾರೆ: ಭಗೀರಾ ನನ್ನ ಮೊದಲ ಮಾಸ್ ಹೀರೊಗಾಗಿ ಶೌರ್ಯ ಕಥೆ. # ಶ್ರೀಮುರಳಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.
ಕಾಶ್ಮೀರದಲ್ಲಿ ಹನಿಮೂನ್ ಜೋಡಿ: ಪತ್ನಿಯ ನೋಡಿ ಆದಿತ್ಯ ಬರೆದ ಕವನ ನೋಡಿ
ಶ್ರೀಮುರಳಿ ಅವರು ಉಗ್ರಮ್ ಮತ್ತು ಮಫ್ತಿ ಸಿನಿಮಾ ಮೂಲಕ ಕನ್ನಡಿಗೆ ಮನ ಗೆದ್ದಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಪ್ರಶಾಂತ್ ನೀಲ್ ಅವರ ನಿರ್ದೇಶನದ ಉಗ್ರಾಮ್ ನಂತರ ಭಗೀರಾದಲ್ಲಿ ಶ್ರೀಮುರಳಿ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ ಕೆಜಿಎಫ್ ಡೈರೆಕ್ಟರ್.
. as
Penned a story of valor, for my first true Mass Hero.
Wishing a Happy Birthday. pic.twitter.com/7uKtBiENIu
ಭಗೀರಾ ಚಿತ್ರವನ್ನು ಸೂರಿ ನಿರ್ದೇಶಿಸಲಿದ್ದಾರೆ. ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಶ್ರೀಮುರಳಿ ಪಾತ್ರದ ಪೋಸ್ಟರ್ ನೋಡಿ ಅವರು ಸಿನಿಮಾದಲ್ಲಿ ಒಬ್ಬ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಭಾವಿಸಿದ್ದಾರೆ ಫ್ಯಾನ್ಸ್