ಆ ಗಾಯಕನಿಗಾಗಿ ಮಿಡಿದ ಈ ಗಾಯಕನ ಹೃದಯ; ಕೇಳಲೇ ಬೇಕು 'ಮೇಲೊಬ್ಬ ಮಾಯಾವಿ'!

By Suvarna NewsFirst Published Apr 13, 2020, 4:35 PM IST
Highlights

ಖ್ಯಾತ ಗಾಯಕ ದಿವಂಗತ ಎಲ್ ಎನ್ ಶಾಸ್ತ್ರಿ  ಅವರ ಕಟ್ಟಕಡೆಯ ಹಾಡನ್ನು ಕೇಳಿ ಎಂದು ಮನವಿ ಮಾಡಿದ ವಿಜಯ್ ಪ್ರಕಾಶ್. 

1991ರಲ್ಲಿ 'ಅಜಗಜಾಂತರ' ಚಿತ್ರದ ಮೂಲಕ ಪ್ಲೇಬ್ಯಾಕ್‌ ಗಾಯಕನಾಗಿ ವೃತ್ತಿ ಆರಂಭಿಸಿದ ಎಲ್‌ ಎನ್‌ ಶಾಸ್ತ್ರಿ ಕನ್ನಡ ಚಿತ್ರರಂಗದಲ್ಲಿ  ಸುಮಾರು 3000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಶಾಸ್ತ್ರಿ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಜನುಮದ ಜೋಡಿ ಚಿತ್ರದ 'ಕೋಲುಮಂಡೆ ಜಂಗಮದೇವ' ಹಾಡು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಾಸ್ತ್ರಿ ಅವರು ಆಗಸ್ಟ್‌ 30,1971ರಂದ ಕೊನೆ ಉಸಿರೆಳೆದಿದ್ದಾರೆ. ಅದಕ್ಕೂ ಮುನ್ನ ಅವರು  ಹಾಡಿದ ಕಟ್ಟ ಕಡೆಯ ಹಾಡನ್ನು ಈಗ ಬಿಡುಗಡೆ ಮಾಡಲಾಗಿದೆ. 

ಸಂಚಾರಿ ವಿಜಯ್ ಅಭಿನಯ 'ಮೇಲೊಬ್ಬ ಮಾಯಾವಿ' ಚಿತ್ರದ  'ಕಲ್ಲ ಕೊಳಲ  ಹಿಡಿದವನೊಬ್ಬ ಗೋಪಾಲ' ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಕ್ರವರ್ತಿ ಚಂದ್ರಚೂಡ್  ಅವರು ಬರೆದಿರುವ ಸಾಹಿತ್ಯವನ್ನು ಎಲ್‌ ಎನ್‌ ಶಾಸ್ತ್ರಿ ಅವರ ಧ್ವನಿಯಲ್ಲಿ ಕೇಳಿರುವ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಎಲ್ ಎನ್  ಶಾಸ್ತ್ರಿ ಅವರ ಕೊನೆಯ ಹಾಡು ಇದಾಗಿದ್ದು ಎಲ್ಲರೂ ದಯವಿಟ್ಟು ಇದನ್ನು ವೀಕ್ಷಿಸಬೇಕೆಂದು ಗಾಯಕ ವಿಜಯ್ ಪ್ರಕಾಶ್  ಮನವಿ ಮಾಡಿಕೊಂಡಿದ್ದಾರೆ. 'ಶಾಸ್ತ್ರಿ ಅವರ ಕಡೆಯ ಹಾಡಿದು ಅಂತ ಹೇಳೋಕೆ ಕಷ್ಟವಾಗುತ್ತದೆ ಅವರು ನಮಗೋಸ್ಕರ ಬಿಟ್ಟು  ಹೋದಂತಹ ಸುಂದರವಾದ ಹಾಡಿದು. ದಯವಿಟ್ಟು ನೀವೆಲ್ಲರೂ ಇದನ್ನು ಕೇಳಿ , ಶೇರ್ ಮಾಡಿ, ವೈರಲ್ ಮಾಡಿ. ಇದೇ ನಾವು ಅವರಿಗೆ ಪ್ರೀತಿಯಿಂದ  ನೀಡುವ ಸಣ್ಣ ಗೌರವ ' ಎಂದು ವಿಜಯ್ ಪ್ರಕಾಶ್ ಮಾತನಾಡಿದ್ದಾರೆ.

 

click me!