ಅಪ್ಪನ ಸಾವಿನ ಬಗ್ಗೆ 18 ದಿನಗಳ ಮುಂಚೆಯೇ ಗೊತ್ತಿತ್ತು: ಬುಲೆಟ್ ಪ್ರಕಾಶ್ ಪುತ್ರ

By Suvarna News  |  First Published Apr 14, 2020, 3:38 PM IST
ಸ್ಯಾಂಡಲ್‌ವುಡ್‌ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಇಂದು ನಮಗೆಲ್ಲಾ ನೆನಪು  ಮಾತ್ರ. ಅನಾರೋಗ್ಯದಿಂದ ಬುಲೆಟ್‌ ಪ್ರಕಾಶ್‌ ಸಾಯುತ್ತಾರೆ ಎಂಬ  ವಿಚಾರ ಪುತ್ರ ರಕ್ಷಕ್‌ ಮುಂಚೆನೇ ತಿಳಿದಿದ್ದು ಹೀಗೆ? ಇಲ್ಲಿದೆ ನೋಡಿ
 

ದಶಕಗಳ ಕಾಲ ಕನ್ನಡ  ಸಿನಿ ಪ್ರೇಕ್ಷಕರನ್ನು ಮನರಂಜಿಸಿದ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ ಇಂದು ನೆನಪು ಮಾತ್ರ. ಲಿವರ್‌ ಹಾಗೂ ಕಿಡ್ನಿ ವೈಫಲ್ಯದಿಂದ  ಏಪ್ರಿಲ್‌ 6ರಂದು ಬುಲೆಟ್‌ ಪ್ರಕಾಶ್‌ ಇಹಲೋಕ ತ್ಯಜಿಸಿದರು. 

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಬುಲೆಟ್‌ ಪ್ರಕಾಶ್‌ ಅವರ ಅಂತಿಮ ದರ್ಶನ ಪಡೆಯಲು ಕೆಲವೇ ನಿಮಿಷಗಳ ಕಾಲ ಪೊಲೀಸರು ಅನುಮತಿ ನೀಡಿದ್ದರು ಆದ್ದರಿಂದ ಬುಲೆಟ್ ಪ್ರಕಾಶ್ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲಾಗದ ಅನೇಕರು ಅವರ ಪುತ್ರ ರಕ್ಷಕ್‌ಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಬುಲೆಟ್‌ ಪ್ರಕಾಶ್‌ ಕೊನೆಯ ಸವಾರಿ ಹೊರಟ ನಗೆ ಮೋಡಿಗಾರ!

ಖಾಸಗಿ ವಾಹಿನಿಯೊಂದರಲ್ಲಿ ತಂದೆಯ ಬಗ್ಗೆ ಮಾತನಾಡಿದ ರಕ್ಷಕ್‌ ತಂದೆಯ ಸಾವಿನ ಬಗ್ಗೆ ಮುಂಚೆನೇ ತಿಳಿದಿತ್ತು ಎಂದು ಹೇಳಿದ್ದಾರೆ. 'ಮನೆ ಕಟ್ಟಿಸಿದೀನಿ ಎಂದು ಅಪ್ಪ ಎಂದೂ ಹಾಲ್‌ಗೆ ಬಂದು ಕೂರುತ್ತಿರಲಿಲ್ಲ ಯಾವಗಲೂ ರೂಮ್‌ನಲ್ಲೇ ಇರುವರು. ಮಾರ್ಚ್‌ 19 ಅಪ್ಪ ತುಂಬಾ ನರಳುತ್ತಿದ್ದರು ಆಗ ನಾನು ಆರ್ಜುನ್‌ ಗುರುಗಳಿಗೆ ವಿಡಿಯೋ ಕಾಲ್‌ ಮಾಡಿದೆ. ಅವರು  ಅಪ್ಪನಿಗೆ ಕೊಬ್ಬರಿ ಎಣ್ಣೆ ಡಬ್ಬಿ ಕೊಡ್ತೀನಿ, ತಾಯತ ಕಳಿಸ್ತೀನಿ, ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ ತಾಯತ ಕಟ್ಕೊಳ್ಳಿ ಎಂದು ಹೇಳಿದರು.ಸ್ವಲ್ಪ ಹೊತ್ತಿನ ನಂತರ ನನಗೆ ಪರ್ಸನಲ್‌ ಆಗಿ ಕಾಲ್‌ ಮಾಡಿ 18 ದಿನದ ನಂತರ ಅಪ್ಪ ಕಾಣಿಸೋದಿಲ್ಲ ಅವರನ್ನು ಚೆನ್ನಾಗಿ ನೋಡ್ಕೋ ಎಂದರು' ಎಂದು ರಕ್ಷಕ್‌ ಭಾವುಕರಾಗಿ  ಮಾತನಾಡಿದ್ದಾರೆ. 

ಅಷ್ಟೇ ಅಲ್ಲದೆ  ಗುರುಗಳು ರಕ್ಷಕ್‌ ಅವರಿಗೆ ಈ ದಿನಾಂಕವನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಲು ಹೇಳಿದ್ದಾರೆ. 'ಅರ್ಜುನ್‌ ಗುರುಗಳು ಅಪ್ಪನ ಸಾವಿನ ಸುದ್ದಿ ಹೇಳಿದಾಗ ನನಗೆ ತುಂಬಾ ಬೇಸರವಾಯ್ತು . ಈ ಹಿಂದೆಯೂ ಅಪ್ಪ 10 ವರ್ಷ ಬದುಕುತ್ತಾರೆ .  ನಿನಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡ್ತಾರೆ ಎಂದು ಹೇಳಿದರು. ಗುರುಗಳು ಹೇಳಿದಾಗ ತುಂಬಾ ಗಾಳಿ ಮಳೆ ಗುಡುಗು ಇತ್ತು. ಅಪ್ಪ ಸತ್ತಾಗಲೂ ತುಂಬಾ ಗಾಳಿ ಮಳೆ ಗುಡುಗು ಇತ್ತು.  ಗುರುಗಳು ಟೈಂ ಕೊಟ್ಟಾಗಲು ಬುಲೆಟ್‌ ಸೌಂಡ್‌ ಇತ್ತು ಅಪ್ಪ ಹೋದಾಗಲು ಬುಲೆಟ್‌ ಸೌಂಡ್ ಇತ್ತು' ಎಂದು ಪುತ್ರ ಮಾತನಾಡಿದ್ದಾರೆ.
click me!