
ಕನ್ನಡ ಚಿತ್ರರಂಗಕ್ಕೆ ಸೂಪರ್ ಡೂಪರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಸ್.ಉಮೇಶ್ ಅನಾರೋಗ್ಯದಿಂದ ಹಾಗೂ ಕೊರೋನಾ ಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಿದ್ದರು. ಕನ್ನಡ ಚಿತ್ರರಂಗದವರು ಸಹಾಯ ಮಾಡಬೇಕು, ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. ಉಮೇಶ್ ಅವರ ಮನವಿಗೆ ಲಹರಿ ಸಂಸ್ಥೆಯಲ್ಲಿರುವ ಮನೋಹರ್ ಸಹಾಯಕ್ಕೆ ಮುಂದಾಗಿದ್ದಾರೆ.
ಸಂಗೀತ ಕಲಾವಿದರ ನೆರವಿಗೆ ರು.10 ಲಕ್ಷ ನೀಡಿದ ಲಹರಿ ವೇಲು!
ಸಾಮಾಜಿಕ ಜಾಲತಾಣದಲ್ಲಿ ಉಮೇಶ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮನೋಹರ್ ನಾಯ್ಡು ಅವರು ಉಮೇಶ್ ಅವರಿಗೆ 1 ಲಕ್ಷ ನೀಡುವಂತೆ ಸಹೋದರ ವೇಲು ಅವರಿಗೆ ತಿಳಿಸಿದ್ದಾರೆ. ನಿರ್ಮಾಪಕ ಪ್ರಭಾಕರ್ ಹಾಗೂ ನಿರ್ದೇಶಕ ಎಸ್ ಉಮೇಶ್ ಮನೋಹರ್ ನಾಯ್ಡು ಅವರಿಗೆ 'ಅವಳೇ ನನ್ನ ಹೆಂಡತಿ' ಚಿತ್ರ ತೋರಿಸಿ ಕಥೆ ಹೇಳಿದ್ದರಂತೆ. ಇನ್ನೂ ಡಬ್ಬಿಂಗ್ ಆಗದ ಚಿತ್ರ ನೋಡಿ ಮನೋಹರ್ ಇದು ಹಿಟ್ ಸಿನಿಮಾ ಎಂದು ಹೇಳಿದ್ದರಂತೆ. ಆಗಿನಿಂದಲೂ ಉಮೇಶ್ ಅವರಿಗೆ ಲಹರಿ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದಾರೆ. ಹೀಗಾಗಿ ಉಮೇಶ್‌ಗೆ ಸಹಾಯ ಮಾಡುವುದು ತಮ್ಮ ಕರ್ತವ್ಯ ಎಂದಿದ್ದಾರೆ.
48 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಉಮೇಶ್ ಅವರಿಗೆ ನಟ ಭುವನ್ ಪೊನ್ನಣ್ಣ ಕೂಡ ಸಹಾಯ ಮಾಡಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.