ದಳಪತಿ ಕೊನೆಯ ಚಿತ್ರಕ್ಕೆ ಕನ್ನಡದ ನಿರ್ಮಾಣ ಸಂಸ್ಥೆಯಿಂದ ಸಾಥ್. ಚಿತ್ರದ ಬಜೆಟ್ ಗಗನ ಮುಟ್ಟಿದೆ....
ಸೆಲೆಬ್ರಿಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆ ಮೆಂಟೈನ್ ಮಾಡುತ್ತಾರೆ. ಟಾಪ್ ಸ್ಟಾರ್ಗಳ ಸಂಭಾವನೆ ಬಗ್ಗೆ ಕೇಳಿದ್ರೆ ಆಶ್ಚರ್ಯವೂ ಆಗುತ್ತೆ ಯಾಕಂದ್ರೆ ಅವರದ್ದೆಲ್ಲಾ ಹತ್ತಿಪ್ಪತ್ತು ಕೋಟಿ ಸಂಭಾವನೆ ಅಲ್ಲವೇ ಅಲ್ಲ. ಏನಿದ್ರು ನೂರು ಇನ್ನೂರು ಕೋಟಿ ಲೆಕ್ಕ. ಈಗ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಹೀರೋ ಯಾರು ಅನ್ನೋ ಗುಟ್ಟು ರಟ್ಟಾಗಿದೆ. ಆ ಕೀರ್ತಿ ದಳಪತಿ ವಿಜಯ್‌ಗೆ ಸಿಕ್ಕಿದೆ. ಹಾಗಾದ್ರೆ ವಿಜಯ್ ನಟಿಸುತ್ತಿರೋ ಕೊನೆ ಸಿನಿಮಾದ ಸಂಭಾವನೆ ಎಷ್ಟು..? ರಜನಿಕಾಂತ್, ಪ್ರಭಾಸ್, ಯಶ್, ಶಾರುಖ್ರನ್ನೇ ಹಿಂದಿಕ್ಕಿದ್ರಾ ವಿಜಯ್.?
ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ಗಳು ಅಂದ್ರೆ ಮೊದಲು ಕಣ್ಮುಂದೆ ಬರೋದೇ ಪ್ರಭಾಸ್, ಯಶ್, ರಜನಿಕಾಂತ್, ಸಲ್ಮಾನ್ ಖಾನ್, ಶಾರುಖ್ ಖಾನ್.. ಒಂದು ಸಿನಿಮಾಗೆ ಇವರು ಪಡೆಯುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಇವರ ರೆಮ್ಯೂನರೇಷನ್ ಹತ್ತಿಪ್ಪತ್ತು ಕೋಟಿ ಲೆಕ್ಕದ್ದಲ್ಲ ಇವರದ್ದು ಏನಿದ್ದರೂ 100-200 ಕೋಟಿ ಸಂಭಾವನೆ. ಹೀಗಾಗಿ ಈ ಸ್ಟಾರ್ಗಳ ಮಧ್ಯೆ ಸಂಭಾವನೆ ವಿಷಯಕ್ಕೆ ಆಗಾಗ ಪೈಪೋಟಿ ಆಗುತ್ತಿರುತ್ತದೆ. ಡಾರ್ಲಿಂಗ್ ಪ್ರಭಾಸ್ ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಫಿಕ್ಸ್ ಮಾಡಿಕೊಂಡಿದ್ದಾರೆ. ಆ ಕಡೆ ಸೂಪರ್ ಸ್ಟಾರ್ ರಜನಿಕಾಂತ್ 100 ಕೋಟಿ ರೀಚ್ ಆಗಿದ್ದಾರೆ. ಯಶ್ ನಿರ್ಮಾಣದ ಜೊತೆ ಕೈ ಜೋಡಿಸಿ ಲಾಭ ಮಾಡೋ ಐಡಿಯಾ ಹಾಕಿದ್ದಾರೆ. ಹೀಗಾಗಿ ಯಶ್ ಸಂಭಾವನೆ 120 ಕೋಟಿಗೆ ರೀಚ್ ಆಗಿದೆ. ಆ ಕಡೆ ಶಾರುಖ್ ಖಾನ್ 150 ರಿಂದ 170 ಕೋಟಿ ಪಡೆದರೆ, ಅಮೀರ್ ಖಾನ್ 100 ರಿಂದ 125 ಕೋಟಿ ಚಾರ್ಜ್ ಮಾಡುತ್ತಾರೆ. ಆದರೆ ಈಗ ದಳಪತಿ ಇವರನ್ನೆಲ್ಲಾ ಮೀರಿಸಿ ನಿಂತಿದ್ದಾರೆ..
undefined
ಮಗನಿಗೆ ಡ್ರೈಫ್ರೂಟ್ಸ್ ತಂದುಕೊಟ್ಟ ತಾಯಿ ಮೀನಾ ತೂಗುದೀಪ್; ತಬ್ಬಿಕೊಂಡು ಕಣ್ಣೀರಿಟ್ಟ ದರ್ಶನ್!
ಇಳಯ ದಳಪತಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ನಟ ವಿಜಯ್ ಸದ್ಯ ಚಿತ್ರರಂಗಕ್ಕೆ ಗುಡ್ ಬೈ ಹೇಳೋಕೆ ಸಜ್ಜಾಗಿದ್ದಾರೆ. ಅದಕ್ಕೆ ಬೇಕಾದ ತಯಾರಿಯೂ ಆಗಿದೆ. ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ ಜೊತೆ ನನ್ನ ಕೊನೆ ಸಿನಿಮಾ ಅಂತ ವಿಜಯ್ ಅನೌನ್ಸ್ ಕೂಡ ಮಾಡಿದ್ದಾರೆ. ರಜನಿಕಾಂತ್, ಶಾರುಖ್ರನ್ನೂ ಮೀರಿಸಿರೋ ವಿಜಯ್ ಈ ಹಿಂದೆಲ್ಲಾ ಒಂದು ಸಿನಿಮಾಗೆ 200 ಕೋಟಿ ಚಾರ್ಜ್ ಮಾಡುತ್ತಿದ್ದರು. ಈಗ ವಿಜಯ್ ತನ್ನ ಕೊನೆ ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ.? ಬರೋಬ್ಬರಿ 250 ಕೋಟಿಯಂತೆ.. ವಿಜಯ್ ನಟನೆಯ ಗೋಟ್ ಸಿನಿಮಾ ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆಗಿದೆ. ಈ ಚಿತ್ರಕ್ಕೆ 370 ಕೋಟಿ ಬಂಡವಾಳ ಹೂಡಲಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಶೋ ತೋರಿಸಿದೆ. ಆದರೂ ಧೈರ್ಯ ಮಾಡಿರೋ ಕರ್ನಾಟಕದ ಕೆವಿಎನ್ ಪ್ರೊಡಕ್ಷನ್, ದಳಪತಿ ವಿಜಯ್ರ ಕೊನೆ ಚಿತ್ರಕ್ಕೆ 600 ಕೋಟಿಗೂ ಅಧಿಕ ಹಣವನ್ನು ವಿಜಯ್ ಮೇಲೆ ಸುರಿಯುತ್ತಿದ್ದಾರೆ. ಅದರಲ್ಲಿ ನಟ ವಿಜಯ್‌ಗೆ 250 ಕೋಟಿ ಕೊಟ್ಟಿದ್ದಾರಂತೆ.
ಹಿಂದೆ ಪ್ರಭಾಸ್, ಶಾರುಖ್ ಖಾನ್, ಸಲ್ಮಾನ್ ಖಾನ್, ಇಷ್ಟೇ ಯಾಕೆ ರಜಿನಿಕಾಂತ್ ಕೂಡ ಇಷ್ಟೊಂದು ದುಬಾರಿ ಸಂಭಾವನೆ ಪಡೆದಿದ್ದು ಇಲ್ಲ. ಅವರೆಲ್ಲರನ್ನ ವಿಜಯ್ ಬೀಟ್ ಮಾಡಿದ್ದಾರೆ.