ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!

Published : Dec 26, 2024, 03:38 PM ISTUpdated : Dec 26, 2024, 03:39 PM IST
ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!

ಸಾರಾಂಶ

ಮಿರ್ಚಿ ಕನ್ನಡ ಸಂದರ್ಶನದಲ್ಲಿ ಕಿಚ್ಚ ಸುದೀಪ್, ಬಿಗ್‌ಬಾಸ್‌ನಲ್ಲಿ ಸಹ-ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣನನ್ನು ಸ್ಪರ್ಧಿಯಾಗಿ ಗೆಲ್ಲಿಸುವುದಾಗಿ ಹೇಳಿದರೆ, ರಮ್ಯಾ ಜೊತೆಗಿನ ಸ್ಪರ್ಧೆ ಕಠಿಣವಾಗಬಹುದೆಂದಿದ್ದಾರೆ. ಉಪೇಂದ್ರ ಇದ್ದರೆ, ಉಳಿದ ಸ್ಪರ್ಧಿಗಳು ಹೊರಬೀಳುವ ಸಾಧ್ಯತೆ ಇದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಸುದೀಪ್ ಅವರು ನಟಿ ರಮ್ಯಾ (Sandalwood queen Ramya) ಬಗ್ಗೆ ಮಾತನ್ನಾಡಿದ್ದಾರೆ. ಕಿಚ್ಚ ಸುದೀಪ್ ಹೇಳಿರುವ ಆ ಮಾತು ವೈರಲ್ ಆಗುತ್ತಿದ್ದು, ಅನೇಕರು ವಿಭಿನ್ನ ಕಾಮೆಂಟ್ ಹಾಕಿದ್ದಾರೆ. ಹಾಗಿದ್ದರೆ ಅಲ್ಲಿ ಸುದೀಪ್ ಹೇಳಿದ್ದೇನು? ಯಾಕೆ ರಮ್ಯಾ-ಸುದೀಪ್ ಬಗ್ಗೆ ಈಗ ಅಷ್ಟೊಂದು ಚರ್ಚೆ ಶುರುವಾಗಿದೆ, ಇಲ್ಲಿದೆ ನೋಡಿ ಸ್ಟೋರಿ.. 

'ನಾನು ಒಳಗಡೆ ಹೋಗಿ ಕಂಟೆಸ್ಟಂಟ್ ಆದ್ರೆ ನನ್ನ ಸಹ-ಕಂಟೆಸ್ಟಂಟ್ ಯಾರು? ಎಂದ ಸುದೀಪ್ ಪ್ರಶ್ನೆಗೆ ನಿರೂಪಕರು 'ಶಿವಣ್ಣ' ಎಂದಿದ್ದಾರೆ. ಈಗ ಶಿವಣ್ಣ ಇದ್ರೆ ನಾವೇ ಗೆಲ್ಲಿಸ್ತೀವಿ.. ಅವ್ರು ಇದಾರೆ ಅಂದ್ರೆ ನಾವೇ ಅವ್ರನ್ನ ಗೆಲ್ಲಿಸ್ತೀವಿ.. ಅವ್ರೇನೂ ಶ್ರಮ ಪಡೋದೇ ಬೇಡ, ನಾವೇ ಗೆಲ್ಲಿಸ್ತೀವಿ ಅರೆ ಶಿವಣ್ಣ ಗೆಲ್ಬೇಕು ಅಂತ.. 

ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್‌ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?

ನಮ್ಮ ಧ್ರುವ ಸರ್ಜಾಅವ್ರು' ಎಂದಿದ್ದಕ್ಕೆ 'ನಾವು ಅವ್ರಿಗೆ ಕರೆದು ಹೇಳ್ತೀವಿ, ನೋಡು ನಾನು ಗೆಲ್ಬೇಕು, ಸುಮ್ನೆ ನೀನು ಸೈಡ್‌ಗೆ ಹೋಗು ಅಂತ.. ಇಲ್ಲ ಅಂದ್ರೆ ಮರ್ಯಾದೆ ಹೋಗುತ್ತೆ ನಿಂದು ಅಂತ.. ಆಯ್ತು ಅಂತ ಬರ್ತಾರೆ, ಈಸಿ ಆಗ್ತದೆ, ಹೇಳೀ..  ರಮ್ಯಾ ಮೇಡಂ, ಎಂದಿದ್ದಕ್ಕೆ ಕಿಚ್ಚ ಸುದೀಪ್ ಅವರು 'ಬಾಗಿಲು ಓಪನ್ ಆಗೋದು ಇದ್ಯಲ್ಲಾ, ಒಂದು ಕೀನ ಕೈನಲ್ಲೇ ಹಿಡ್ಕೊಂಡು ಇರ್ತೀನಿ, ಒಂದು ಅವ್ರು ಓಡೋಗ್ತಾರೆ ಇಲ್ಲ ನಾನು ಓಡೋಗ್ತೀನಿ.. ವಿ ಆರ್ ವೆರಿ ಗುಡ್ ಫ್ರಂಡ್ಸ್‌, ಗ್ರೇಟ್ ಫ್ರಂಡ್ಸ್‌, ಆದರೆ, ನಾವಿಬ್ರೂ ಒಟ್ಟಾಗಿ ಒಂದೆರಡು ಗಂಟೆಗಳು ಮಾತ್ರ ಇರೋದಕ್ಕೆ ಸಾಧ್ಯ' ಎಂದಿದ್ದಾರೆ ನಟ ಸುದೀಪ್. 

ಇನ್ನು, ಉಪೇಂದ್ರ ಅಂದಿದ್ದಕ್ಕೆ, ಉಪ್ಪಿ ಸರ್ ಇರೋ ಕಡೆ ನಮ್ಗೆ ಬಿಗ್ ಬಾಸ್‌ಗೆ ಏನ್ ಕೆಲಸ ಅಂತ ಯೋಚ್ನೆ ಮಾಡ್ಬೇಕು.. ಯಾಕಂದ್ರೆ, ಟಾಸ್ಕ್ ಅವ್ರೊಂದು ಕೊಟ್ರೆ ಇವ್ರು ಒಂದು ಕ್ರಿಯೇಟ್ ಮಾಡ್ತಾ ಇರ್ತಾರೆ ಇಲ್ಲಿ ಕೂತ್ಕೊಂಡು.. ಎಲ್ಲಾರಿಗೂ, ಸುದೀಪ್ ಇದಲ್ಲಾರಿ ಟಾಸ್ಕು, ಹೇಳ್ತೀನಿ ಕೇಳಿ.. ಅವ್ರು ಮಾಡ್ಸೋದು ತಪ್ರೀ, ಬಿಗ್ ಬಾಸೇ ತಪ್ರೀ.. ಎಲ್ಲಾನೂ ತಪ್ಪು ಅಂದ್ಬಿಟ್ಟು.. ಉಪೇಂದ್ರ ಅವ್ರು ಮನೆಯೊಳಗೆ ಇದ್ರೆ ಕಂಟೆಸ್ಟಂಟ್ ಆಗಿ, ಸಪೋಸ್ 18 ಜನ ಕಂಟೆಸ್ಟಂಟ್ ಅಗಿ ಮೆನಯೊಳಗೆ ಇದ್ರೆ ಉಳಿದ 17 ಜನ ಕಳಪೆ ಪಟ್ಟಕ್ಕೆ ಹೋಗ್ತಾರೆ.. ಉಳಿದವರೆಲ್ಲರೂ ಮನೆ ಹೊರಗೆ ಇರ್ತಾರೆ' ಎಂದು ಹೇಳಿದಾಗ ಸ್ವತಃ ಸುದೀಪ್ ಸೇರಿದಂತೆ ನಿರೂಪಕರೂ ಕೂಡ ನಕ್ಕಿದ್ದಾರೆ.

ಯಶ್ ಕುದಿಯುತ್ತಿದ್ದಾರೆ, ಬೇಯುತ್ತಿದ್ದಾರೆ, ನರಳುತ್ತಿದ್ದಾರೆ: ಯಾಕೆ ಈ ಸುದ್ದಿ ಹಬ್ಬಿದೆ?

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Deepika Padukone-Indrajit Lankesh: 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ನಟಿ ಕೃಷಿ ತಾಪಂಡ ಬೆಡ್​ರೂಮಿನಲ್ಲಿ ಗೆಳೆಯನ ಡೆಡ್​​ಬಾಡಿ! 7 ತಿಂಗಳಲ್ಲಿ ಏನೆಲ್ಲಾ ನಡೆದುಬಿಡ್ತು ಅವಳ ಬಾಳಲ್ಲಿ!