
ವಿಜಯ್ ರಾಘವನ್ ಮಗಳ ವಿಧ್ಯಾಭ್ಯಾಸಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದ ವಿಜಯ್ ರಾಘವನ್ ಮಗಳ ಸ್ಕೂಲ್ ಫೀಸ್ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಕೊರೋನಾದಿಂದ ಎರಡು ವರ್ಷದಿಂದ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಗದೆ ಕೆಲಸ ಇಲ್ಲದೆ ವಿಜಯ್ ರಾಘವನ್ ಮನೆಯಲ್ಲೇ ಇದ್ದರು.
ಮಗಳ ಸ್ಕೂಲ್ ಫೀಸ್ಗೂ ಹಣವಿಲ್ಲದೇ ಪರದಾದುತ್ತಿದ್ದ ವಿಜಯ್‌ಗೆ ಕಿಚ್ಚ ನೆರವಾಗಿದ್ದಾರೆ.
ಶಿಕ್ಷಕರಿಗೆ ಕಿಚ್ಚ ಸುದೀಪ್ ಆರ್ಥಿಕ ನೆರವು...
ಸ್ಕೂಲ್ ಫೀಸ್ ಕಟ್ಟಿಲ್ಲ ಅಂತ ಆನ್ ಲೈನ್ ಕ್ಲಾಸ್ ಗೆ ಸೇರಿಸಿಕೊಂಡಿಲ್ಲ. ಶಾಲೆ ಸಿಬ್ಬಂದಿ ನಟನ ಮಗಳಿಗೆ ಟಿಸಿ ಕೊಟ್ಟು ಕಳಿಸಿದ್ದರು. ಕೊನೆಗೆ ದಿಕ್ಕು ತೋಚದೆ ತಾನೇ ಓದಿದ್ದ ಶಾಲೆಗೆ ಮಗಳನ್ನ ಸೇರಿಸಿದ್ದರು.
ಆ ಶಾಲೆಯವರು ನಾಲ್ಕು ಕಂತುಗಳಲ್ಲಿ ಸ್ಕೂಲ್ ಫೀಸ್ ಕಟ್ಟುವಂತೆ ಹೇಳಿದ್ದರು. ಕಿಚ್ಚ ಸುದೀಪ್ ಚಾರಿಟಬಲ್ ಮುಖಾಂತರ ರಾಘವನ್ ಮಗಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ ನಟ ಸುದೀಪ್. ರಾಘವನ್ ಮಗಳ ಓದಿನ ಸಂಪೂರ್ಣ ಶುಲ್ಕವನ್ನು ಸುದೀಪ್ ಪಾವತಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.