ಕಿಚ್ಚ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ; 'ಕೋಟಿಗೊಬ್ಬ-3' ಟೀಸರ್ ಜತೆ ಫಾಲ್ಕೆ ಪ್ರಶಸ್ತಿ!

Suvarna News   | Asianet News
Published : Feb 22, 2020, 09:35 AM ISTUpdated : Feb 22, 2020, 04:00 PM IST
ಕಿಚ್ಚ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ; 'ಕೋಟಿಗೊಬ್ಬ-3' ಟೀಸರ್ ಜತೆ ಫಾಲ್ಕೆ ಪ್ರಶಸ್ತಿ!

ಸಾರಾಂಶ

ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಫೆ.21ರ ಶುಕ್ರವಾರ ಡಬಲ್ ಸಂಭ್ರಮ. ಒಂದು ಕಡೆ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆ, ಮತ್ತೊಂದು ಕಡೆ ಇಂಟರ್‌ನ್ಯಾಷನಲ್ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಮುಡಿಗೇರಿದೆ.  

ಕಲರ್‌ಫುಲ್ ಟೀಸರ್ ಅವನು ಇಬ್ಬರಲ್ಲ, ಒಬ್ಬನೇ, ಅವತ್ತೇ ಹೇಳಿದೆ ಲೋಕಲ್ನಲ್ಲಿ ಬಿಟ್ಟರೆ ಅವನನ್ನ ಹಿಡಿಯಕ್ಕಾಗಲ್ಲ ಅಂತ. ಅವನು ಈಗ ಇಂಟರ್‌ನ್ಯಾಷನ್ ಕಿಲಾಡಿ... ಹೀಗೆ ಸುದೀಪ್ ಅವರ ಹೀರೋಯಿಸಂ ಬಿಂಬಿಸುವ ಸಂಭಾಷಣೆಗಳೊಂದಿಗೆ ಬಂದಿರುವ ಟೀಸರ್ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ. ಆನಂದ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿದ್ದು, ಈಗಾಗಲೇ ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ. ಈಗಾಗಲೇ ನಾಲ್ಕು ಲಕ್ಷ ಹಿಟ್ಸ್ ದಾಟಿದೆ.

ಶಿವ ಕಾರ್ತಿಕ್ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರದ ಟೀಸರ್‌ನಲ್ಲಿ ರವಿಶಂಕರ್, ಸುದೀಪ್ ಹಾಗೂ ಚಿತ್ರದ ನಾಯಕಿ ಮಡೋನಾ ಸೆಬಾಸ್ಟಿನ್ ಪಾತ್ರಗಳನ್ನು ಮಾತ್ರ ರಿವಿಲ್ ಮಾಡಲಾಗಿದೆ. ಅದ್ದೂರಿ ಮೇಕಿಂಗ್, ಕಲರ್‌ಫುಲ್ ಲೋಕೇಶನ್‌ಗಳು ಚಿತ್ರದ ಹೈಲೈಟ್ ಆಗಿ ನಿಂತಿವೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು.

ಚಿತ್ರಗಳ: ಹೊಸ ಅವಾತಾರದಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸ್ವೀಕರಿಸಿದ ಕಿಚ್ಚ..!

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅಂದಹಾಗೆ ನಟ ಸುದೀಪ್ ಅವರು ದಾದಾ ಸಾಲ್ ಫಾಲ್ಕೆ ಹೆಸರಿನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ದಬಾಂಗ್ 3’ ಚಿತ್ರದಲ್ಲಿನ ನಟನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಮುಂಬಾಯಿನಲ್ಲಿ ದಾದಾ ಸಾಹೇಬ್ ಫಾಲ್ಕೆ ಹೆಸರಿನಲ್ಲಿ ಇಂಟರ್‌ನ್ಯಾಷನ್ ಚಿತ್ರೋತ್ಸವ ನಡೆಯುತ್ತ ಬಂದಿದ್ದು, ಈ ಚಿತ್ರೋತ್ಸವದಲ್ಲಿ ಸಲ್ಮಾನ್ ಖಾನ್ ಜತೆ ಖಳನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ಅವರು ಅತ್ಯುತ್ತಮ ನಟನೆ ನೀಡಿದ್ದಾರೆ ಎಂದು ಗುರುತಿಸಿ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಚಿತ್ರೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

25 ವರ್ಷದಲ್ಲಿ 49 ಚಿತ್ರಗಳು; ಕಿಚ್ಚ ಸುದೀಪ್‌ ಸಿನಿ ಜರ್ನಿ!

‘ಈ ಪ್ರಶಸ್ತಿ ನನ್ನ ಒಬ್ಬನಿಗೆ ಸೇರಿದ್ದಲ್ಲ. ಇಲ್ಲಿವರೆಗೂ ನನ್ನ ಬೆಳೆಸಿಕೊಂಡು ಬಂದ ಚಿತ್ರರಂಗ, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಪ್ರೇಕ್ಷಕರು, ಅಭಿಮಾನಿಗಳ ಬೆಂಬಲ ಈ ಪ್ರಶಸ್ತಿಗೆ ಕಾರಣ. ಇಂಥ ಪ್ರಶಸ್ತಿಗಳು ನಟನಿಗೆ ಮತ್ತಷ್ಟು ಸ್ಫೂರ್ತಿ ಹೆಚ್ಚಿಸುತ್ತವೆ’ ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ