
ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ 2019 ಗುಡ್‌ಬೈ ಹೇಳಿ 2020 ಅನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಈ ವೇಳೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಕ್ಕಳೊಂದಿಗಿರುವ ಫೋಟೋ ರಿವೀಲ್ ಮಾಡಿದ್ದಾರೆ.
'ನಮ್ಮೆಲ್ಲಾ ಆತ್ಮೀಯರಿಗೆ ನಮ್ಮ ಕುಟುಂಬದಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು' ಎಂದು ರಾಧಿಕಾ ಫ್ಯಾಮಿಲಿ ಫೋಟೋದೊಂದಿಗೆ ಶುಭಾಶಯ ಕೋರಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ 'ಹೊಸ ವರ್ಷವನ್ನು ಮಕ್ಕಳಂತೆ ಉತ್ಸಾಹ, ಸಂತೋಷ ಹಾಗೂ ಮುಗ್ದರಾಗಿ ನೋಡಿದರೆ ವರ್ಷವಿಡೀ ಹರುಷ ತುಂಬಿರುತ್ತದೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಐರಾ ಹಾಗೂ ಲಿಟಲ್ ಯಶ್ ಫೋಟೋ ನೋಡಿದ ಅಭಿಮಾನಿಗಳು 'ವಾ! ಎಷ್ಟು ಚಂದ ನಮ್ಮ ಮುದ್ದು ಹುಡುಗಿ' , 'ಸೂಪರ್ ಕುಟುಂಬ' ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಕಿ ಬಾಯ್ ಫ್ಯಾನ್ಸ್ ಕೆಜಿಎಫ್-2 ಸೂಪರ್ ಹಿಟ್ ಆಗಲಿ ಎಂದು ಆಶಿಸಿದ್ದಾರೆ.
ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.