ನಟ ದರ್ಶನ್ ಸುತ್ತಿಕೊಂಡ್ತು ಹೊಸ ವಿವಾದ; ನಿರ್ಮಾಪಕ ಉಮಾಪತಿ ವಿರುದ್ಧ ಬಳಸಿದ ಪದಕ್ಕೆ ಆಕ್ಷೇಪ

By Shriram Bhat  |  First Published Feb 21, 2024, 3:20 PM IST

'ಕಾಟೇರ ಸಿನ್ಮಾ ಕಥೆ ಬರೆಸಿದವನು ನಾನು. ತೆರೆಮೇಲೆ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಪರೀಕ್ಷೆ ಇತ್ತು. ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ. 'ಕಾಟೇರ' ಟೈಟಲ್ ಇಟ್ಟವನು ನಾನೇ, ಕಥೆ ಬರೆಸಿದವನು ನಾನೇ..


ನಟ ದರ್ಶನ್ ವಿರುದ್ಧ ಕರ್ನಾಟಕ‌ಪ್ರಜಾಪರ ವೇದಿಕೆ ದೂರು ಸಲ್ಲಿಸಲಾಗಿದೆ. ಕರ್ನಾಟಕ ಪ್ರಜಾಪರ ವೇದಿಕೆ 'ಫಿಲಂ ಚೇಂಬರ್'ಗೆ ದೂರು ನೀಡಿದ್ದಾರೆ. ದರ್ಶನ್ ಅವರು 'ಗುಮ್ಮಿಸ್ಕೋತಿಯಾ' ಅಂತ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು ಅಂತ ಮನವಿ  ಮಾಡಿಕೊಂಡಿದೆ ಕರ್ನಾಟಕ ಪ್ರಜಾಪರ ವೇದಿಕೆ.

ರಾಬರ್ಟ್ ಕತೆ ಕೊಟ್ಟಿದ್ದೆ ನಾವು- ಉಮಾಪತಿಗೆ ಪಂಚ್ ಕೊಟ್ಟ ದರ್ಶನ್; ಕಾಟೇರ ಕತೆ ಬರೆಸಿದ್ದೆ ನಾನು ಅಂದಿದ್ದರು ನಿರ್ಮಾಪಕ ಉಮಾಪತಿ!
ಕಾಟೇರ 50ನೇ ದಿನದ ಸಂಭ್ರಮದಂದು ಪ್ರಸನ್ನ ಚಿತ್ರಮಂದಿರದಲ್ಲಿ ವೇದಿಕೆಯಲ್ಲಿ ಮಾತನಾಡಿದ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ ತಿರುಗೇಟು ನೀಡಿದ್ದಾರೆ. 'ಉಮಾಪತಿ ಶ್ರೀನಿವಾಸ್ 'ಕಾಟೇರ' ಕಥೆ ಬೆರಸಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನು' ಎಂದು ಉಮಾಪತಿ ಹೇಳಿದ್ದರು. ಇದಕ್ಕೆ ದರ್ಶನ್ ಉತ್ತರ ನೀಡಿದ್ದಾರೆ.

Tap to resize

Latest Videos

ನಟ ದರ್ಶನ್ ಮಾತನಾಡಿ 'ಕೆಲವರು ಕಥೆ ನಾನು ಮಾಡಿಸಿದೆ, ಟೈಟಲ್ ನಾನು ಕೊಟ್ಟೆ ಅಂತ ಹೇಳ್ತಿದಾರೆ..  ಅಯ್ಯೋ ತಗಡೇ.. ನಿನಗೆ 'ರಾಬರ್ಟ್' ಕಥೆ ಕೊಟ್ಟದ್ದೇ ನಾವು. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು.. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡೂ ಬುದ್ದಿ ಕಲಿಯಲಿಲ್ಲ ಅಂದ್ರೆ ನಾವು ಏನು ಹೇಳೋಣ... ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?' ಎಂದು ಪ್ರಶ್ನಿಸಿದರು.

'ಸಿಸಿಎಲ್'ಗೆ ದಿನಗಣನೆ, ಪ್ರಾಕ್ಟಿಸ್ ಶುರು; ಬಿಗ್ ಅಪ್ ಡೇಟ್ ಕೊಟ್ಟ ಕರ್ನಾಟಕ ಬುಲ್ಡೋಜರ್ಸ್ ತಂಡ

'ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಗುಡ್. ನೀನು ಮಾಡಬಹುದಿತ್ತಲ್ಲ. ಟೈಟಲ್ ನಾನು ಕೊಟ್ಟೆ ಎನ್ನುತ್ತೀಯಾ. 'ಕಾಟೇರ' ಟೈಟಲ್ ಕೊಟ್ಟಿದ್ದು ನಾನು. ಅದಕ್ಕೂ ಸ್ಪಷ್ಟನೆ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು' ಎಂದು ನಿರ್ದೇಶಕ ಅಯೋಗ್ಯ ಮಹೇಶ್ ಅವರನ್ನು ವೇದಿಕೆ ಕರೆದರು.

ಉಪೇಂದ್ರ 'ಯುಐ' ಸಿನಿಮಾದಲ್ಲಿ ಸನ್ನಿ ಲಿಯೋನ್ ಕುಣಿಯುತ್ತಿಲ್ಲ, ನಟಿಸುತ್ತಿದ್ದಾರೆ; ಯಾಕೆ ಅಂತಿದಾರೆ ಏನ್ ಹೇಳೋದು!

ಸರಿನಾ ಸ್ವಾಮಿ? ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಯಾಕೆ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ, ಎಲ್ಲೋ ಚೆನ್ನಾಗಿದ್ದೀಯಾ, ಅಲ್ಲೇ ಇದ್ದುಬಿಡು' ಎಂದು ದರ್ಶನ್ ಹೇಳಿದ್ದಾರೆ.

'ಕಾಟೇರ' ಸಕ್ಸಸ್ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. 'ಕಾಟೇರ ಸಿನ್ಮಾ ಕಥೆ ಬರೆಸಿದವನು ನಾನು. ತೆರೆಮೇಲೆ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಪರೀಕ್ಷೆ ಇತ್ತು. ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ. 'ಕಾಟೇರ' ಟೈಟಲ್ ಇಟ್ಟವನು ನಾನೇ, ಕಥೆ ಬರೆಸಿದವನು ನಾನೇ. ಯಾರಿಗೆ ಏನು ಧಕ್ಕಬೇಕು ಅಂತ ಇರುತ್ತೋ ಅದು ಧಕ್ಕುತ್ತೆ..'

ರಿಷಬ್ ಶೆಟ್ಟಿಗೆ ಹೊಸ ಸಂಕಷ್ಟ; 'ಕಾಂತಾರ 1' ಸಿನಿಮಾದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ?

'ನನ್ನ ಖುಷಿ ಏನು ಅಂದ್ರೆ ನನ್ನ ಜಡ್ಜ್ಮೆಂಟ್ ಎಲ್ಲೂ ತಪ್ಪಾಗಿಲ್ಲ. ನಿರ್ಮಾಪಕನಾಗಿ ಒಳ್ಳೆ ಕಥೆ ಆಯ್ಕೆ ಮಾಡಿದ ಖುಷಿಯಿದೆ. 'ರಾಬರ್ಟ್' ರಿಲೀಸ್ಗೂ ಮುನ್ನ 'ಕಾಟೇರ' ಕಥೆ ಬರೆಸಿದ್ದೆ ಖುಷಿಯಿದೆ. ರಾಕ್ಲೈನ್ ಸರ್ ಅಂದ್ರೆ ಬಹಳ ಪ್ರೀತಿಯಿದೆ. ಅವರ ಬ್ಯಾನರ್ ಸಿನ್ಮಾ ನನ್ನ ಬ್ಯಾನರ್ ಸಿನ್ಮಾ' ಎಂದು ಹೇಳಿದ್ದರು. ಇದಕ್ಕೆ ನಟ ದರ್ಶನ್ ಕಾಟೇರ 50ನೇ ದಿನದ ಸಂಭ್ರಮದಲ್ಲಿ ಪ್ರತಿಕ್ರಿಯಿಸಿದ್ದು ರಾಬರ್ಟ್ ನಿರ್ಮಾಪಕ ಉಮಾಪತಿ ಬಗ್ಗೆ ಮಾತನಾಡಿದ್ದಾರೆ. 

ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ; ಬಾಲಿವುಡ್​ ಇಷ್ಟೊಂದು ಹೆದರುತ್ತಿರೋದೇಕೆ?

ಮದಗಜ ನಿರ್ದೇಶಕ ಮಹೇಶ್ ಮಾತನಾಡಿ 'ಮದಗಜ ಟೈಟಲ್ ರಾಮಮೂರ್ತಿ ಸರ್ ಬಳಿ ಇತ್ತು. ಅದನ್ನು ತೆಗೆದುಕೊಳ್ಳಲು 'ಕಾಟೇರ' ಟೈಟಲ್ ಅನ್ನು ಉಮಾಪತಿ ಸರ್ ಕೊಟ್ಟರು. ಮದಗಜ ಟೈಟಲ್ ಅನ್ನು ರಾಮಮೂರ್ತಿ ಸರ್ ನನಗೆ ಕೊಟ್ಟರು' ಎಂದರು.

click me!