Karnataka Election Results 2023: ಶಿವರಾಜ್ ಕುಮಾರ್ ಪ್ರಚಾರ ಮಾಡಿದವರಲ್ಲಿ ಗೆದ್ದವರು ಯಾರು, ಸೋತವರ್ಯಾರು?

Published : May 13, 2023, 05:31 PM IST
Karnataka Election Results 2023: ಶಿವರಾಜ್ ಕುಮಾರ್ ಪ್ರಚಾರ ಮಾಡಿದವರಲ್ಲಿ ಗೆದ್ದವರು ಯಾರು, ಸೋತವರ್ಯಾರು?

ಸಾರಾಂಶ

Karnataka Election Results 2023: ಶಿವರಾಜ್ ಕುಮಾರ್ ಪ್ರಚಾರ ಮಾಡಿದವರಲ್ಲಿ ಗೆದ್ದವರು ಯಾರು, ಸೋತವರ್ಯಾರು? ಇಲ್ಲಿದೆ ಸಂಪೂರ್ಣ ವಿವರ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು ಕಾಂಗ್ರೆಸ್ ಬಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಎಲೆಕ್ಷನ್​​ನಲ್ಲಿ ಸ್ಟಾರ್ ಪ್ರಚಾರಕರು ಅಬ್ಬರದ ಪ್ರಚಾರ ಮಾಡಿದ್ರು.  ಅನೇಕ ನಟ-ನಟಿಯರು ತಮ್ಮಿಷ್ಟಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪರ ಕಿಚ್ಚ ಸುದೀಪ್ ನಿಂತಿದ್ರು. ಕಾಂಗ್ರೆಸ್ ಪರ ಶಿವರಾಜ್ ​ಕುಮಾರ್ ಅಖಾಡಕ್ಕಿಳಿದು ಪ್ರಚಾರ ಮಾಡಿದ್ರು.  ಶಿವಣ್ಣ ಪ್ರಚಾರ ಮಾಡಿದ ಬಹುತೇಕ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 

ಮಧು ಬಂಗಾರಪ್ಪ 

ಶಿವರಾಜ್ ಕುಮಾರ್ ಪ್ರಚಾರ ಮಾಡಿದ ಕ್ಷೇತ್ರದಲ್ಲಿ ತನ್ನ ಬಾಮೈದುನ ಮಧು ಬಂಗಾರಪ್ಪ ಸ್ಪರ್ಧಿಸಿದ್ದ ಸೊರಬ ಕ್ಷೇತ್ರ ಪ್ರಮುಖವಾಗಿತ್ತು. ಶಿವರಾಜ್ ಕುಮಾರ್ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಸೊರಬ ಕ್ಷೇತ್ರದಲ್ಲಿ ಅಣ್ಣ-ತಮ್ಮನೆ ಹೋರಾಟಕ್ಕೆ ನಿಂತಿದ್ದರು.  ಇಬ್ಬರ ಕಾಳಗದಲ್ಲಿ ಅಂತಿಮವಾಗಿ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿ ಮಧು ಬಂಗಾರಪ್ಪ ಗೆಲುವಿನ ನಗೆ ಬೀರಿದ್ದಾರೆ. 

ಸಿದ್ಧರಾಮಯ್ಯ 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಜಿ ಸಿಎಂ ಸಿದ್ಧರಾಮಯ್ಯ ಪರ ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ವಿ.ಸೋಮಣ್ಣ ವಿರುದ್ಧ ಸಿದ್ಧರಾಮಯ್ಯ ಗೆಲುವು ದಾಖಲಿಸಿದ್ದಾರೆ. ಸಿದ್ಧರಾಮಯ್ಯ ಪರ ಶಿವರಾಜ್ ಕುಮಾರ್ ವರುಣದಲ್ಲಿ ಪ್ರಚಾರ ಮಾಡಿದ್ದರು. 

ಭೀಮಣ್ಣ ನಾಯ್ಕ್ 

ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಭೀಮಣ್ಣ ನಾಯ್ಕ್  ಪರವಾಗಿ ಶಿವರಾಜ್ ಕುಮಾರ್‌ಗೆ ಇಳಿದಿದ್ದರು. ಭೀಮಣ್ಣ ನಾಯ್ಕ್ ಎದುರು ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪರ್ಧಿಸಿದ್ದರು. ಆದರೆ ಕಾಗೇರಿಯನ್ನು ಸೋಲಿಸಿ ಭೀಮಣ್ಣ ನಾಯಕ್ ಗೆಲುವಿನ ನಗೆ ಬೀರಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ 

ಬೆಳಗಾವಿ ಗ್ರಾಮಾಂತರದಿಂದ  ಸ್ಪರ್ಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವು ದಾಖಲಿಸಿದ್ದಾರೆ. ಶಿವಣ್ಣ ಲಕ್ಷ್ಮೀ ಹೆಬ್ಬಾಳ್ಕರ್ ಪರ ಮತಯಾಚನೆ ಮಾಡಿದ್ದರು. ನಾಗೇಶ ಮನ್ನೋಳ್ಕರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ದರು. 

Karnataka Election Results 2023: ಕರ್ನಾಟಕ ರಾಜಕೀಯ ಹೊಲಸು ಮಾಡಿದ್ದ ಹಲವರು ಸೋತಿದ್ದಾರೆ - ಕವಿರಾಜ್

ಬೇಲೂರು ಗೋಪಾಲಕೃಷ್ಣ 

ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೋಲೂರು ಗೋಪಾಲಕೃಷ್ಣ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದರು. ಹರತಾಳ ಹಾಲಪ್ಪ ವಿರುದ್ಧ ಬೇಲೂರು ಗೋಪಾಲಕೃಷ್ಣ ಗೆಲುವು ದಾಖಲಿಸಿದ್ದಾರೆ. 

ಸೋತವರು 

ಜಗದೀಶ್ ಶೆಟ್ಟರ್ 

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಶಿವರಾಜ್ ಕುಮಾರ್ ಪ್ರಚಾರ ಮಾಡಿದ್ದರು. ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಟಿಕೆಟ್ ಸಿಗದೆ ಕಾಂಗ್ರೆಸ್‌ಗೆ ಹಾರಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಪರ ಶಿವಣ್ಣ ಮತಯಾಚನೆ ಮಾಡಿದ್ದರು. 

ಕಿಮ್ಮನೆ ರತ್ನಾಕರ್ 

ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪರ ಶಿವಣ್ಣ ಪ್ರಚಾರ ಮಾಡಿದ್ದರು. ಆಧರೆ ಕಿಮ್ಮನೆ, ಆರಗ ಜ್ಞಾನೇಂದ್ರ ವಿರುದ್ಧ ಸೋಲು ಕಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?