ಹನುಮಾನ್ ಪಾತ್ರಕ್ಕೆ ರಿಷಬ್ ಶೆಟ್ಟಿ ಆಯ್ಕೆ; ಟಾಲಿವುಡ್‌ಗೂ 'ಜೈ' ಅಂದ್ಬಿಟ್ರಾ ಕಾಂತಾರಾ ಹೀರೋ!?

By Shriram Bhat  |  First Published Oct 19, 2024, 4:42 PM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ಸದ್ಯ 'ಕಾಂತಾರ ಚಾಪ್ಟರ್ 1'ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 'ಜೈ ಹನುಮಾನ್ ಪಾರ್ಟ್ 2'ನಲ್ಲಿ ರಿಷಬ್ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಟಾಲಿವುಡ್ ಸೇರಿದಂತೆ ಎಲ್ಲಾ ಕಡೆ ಹರಿದಾಡತೊಡಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ...


ಸದ್ಯ ಭಾರತವೂ ಸೇರಿದಂತೆ ಜಗತ್ತಿಗೇ ಒಂದು ಹೊಸ ಸುದ್ದಿ ಅಪ್ಪಳಿಸಿದೆ. ಅದೇನೆಂದರೆ, ಕಾಂತಾರ (Kantara) ಚಿತ್ರದ ಮೂಲಕ ಪ್ರಪಂಚ ಪ್ರಸಿದ್ಧಿ ಪಡೆದಿರುವ ನಟ-ನಿರ್ದೇಶಕರಾದ ಕನ್ನಡಿಗ ರಿಷಬ್ ಶೆಟ್ಟಿ (Rishab Shetty) ಅವರು 'ಜೈ ಹನುಮಾನ್ ಭಾಗ-2' ರಲ್ಲಿ ನಟಿಸಲಿದ್ದಾರೆ ಎಂಬ ನ್ಯೂಸ್. ಈ ಸುದ್ದಿಯೀ ಕಾಡ್ಗಿಚ್ಚಿನಂತೆ ಹಬ್ಬತೊಡಗಿದೆ. ಸುದ್ದಿ ನಿಜ, ಆದರೆ ಅದನ್ನು ಕಾಂತಾರ ನಟ ಯಾವಾಗ ಹೊರಜಗತ್ತಿಗೆ ಹೇಳಬಹುದು ಎಂಬ ಕುತೂಹಲವಷ್ಟೇ ಬಾಕಿ ಉಳಿದಿದೆ. 

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ಸದ್ಯ 'ಕಾಂತಾರ ಚಾಪ್ಟರ್ 1'ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 'ಜೈ ಹನುಮಾನ್ ಪಾರ್ಟ್ 2'ನಲ್ಲಿ ರಿಷಬ್ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಟಾಲಿವುಡ್ ಸೇರಿದಂತೆ ಎಲ್ಲಾ ಕಡೆ ಹರಿದಾಡತೊಡಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಜೈ ಹನುಮಾನ ಚಿತ್ರದ 'ಹನುಮಾನ್' ಪಾತ್ರಧಾರಿಗೆ ಬಹಳಷ್ಟು ಅಳೆದೂ ತೂಗಿ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

ಟಾಲಿವುಡ್‌ನಲ್ಲಿ ಮೂಡಿ ಬರಲಿರುವ 'ಜೈ ಹನುಮಾನ್ ಪಾರ್ಟ್-2' ಸಿನಿಮಾಗೆ ಕನ್ನಡಿಗ ರಿಷಬ್ ಶೆಟ್ಟಿ ಆಯ್ಕೆಯ ಹಿಂದೆ ಹಲವು ಸಂಗತಿಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ಕಾರಣ, ರಿಷಬ್ ಶೆಟ್ಟಿ ನಟರು ಮಾತ್ರವಲ್ಲ, ನಿರ್ದೇಶಕರು ಕೂಡ. ಈ ಕಾರಣಕ್ಕೆ ಯಾವುದೇ ಪಾತ್ರವನ್ನಾದರೂ ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಜೊತೆಗೆ, ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗಗಳಲ್ಲೂ ಹೆಚ್ಚಿನ ಪ್ರತಿಭೆ-ಕಂಟ್ರೋಲ್ ಇದೆ. ರಷಬ್ ಕನ್ನಡದವರಾದರೂ ಭಾರತ ಹಾಗೂ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. 

undefined

ಈ ಅಂಶಗಳನ್ನು ಹೊರತು ಪಡಿಸಿ ಕೂಡ, ರಿಷಬ್ ಶೆಟ್ಟಿ ಅವರನ್ನು ಜೈ ಹನುಮಾನ್ ಎನ್ನುವ ಭಾಗ-2 ರ ನಾಯಕರನ್ನಾಗಿ ಮಾಡಿಕೊಂಡರೆ ಬಹಳಷ್ಟು ಲಾಭವಿದೆ. ನ್ಯಾಷನಲ್ ಪ್ರಶಸ್ತಿ ಪಡೆದಿರುವ ಕನ್ನಡಿಗ ರಿಷಬ್ ಶೆಟ್ಟಿ ಅವರಿಗೆ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ, ಜಗತ್ತಿನ ತುಂಬವೂ ಇದ್ದಾರೆ. ಅವರು ಕಮರ್ಷಿಯಲ್ ಹೀರೋ ಆಗಿ ಸೈ. ಜೊತೆಗೆ, 'ಕಾಂತಾರ ಭಾಗ-1' ಸಿನಿಮಾವನ್ನು ಅವರು ಭಾರೀ ಬಜೆಟ್ ಇಟ್ಟುಕೊಂಡು, ವಿಭಿನ್ನ ಮೇಕಿಂಗ್ ಮೂಲಕ ಶೂಟಿಂಗ್ ಮಾಡುತ್ತಿದ್ದಾರೆ. 

ಕಾಂತಾರ ಪ್ರೀಕ್ವೆಲ್ ಸಿನಿಮಾ ಶೂಟಿಂಗ್ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಮುಂಬರುವ ರಿಷಬ್ 'ಶೆಟ್ಟಿ ಕಾಂತಾರ-1' ಚಿತ್ರವು ಶೂಟಿಂಗ್ ಮುಗಿಸಿ ತೆರೆಗೆ ಬರುವುದು ಬಹುಶಃ 2026ರಲ್ಲಿ ಆಗಬಹುದು. ಆದರೆ, ಅಷ್ಟರಲ್ಲಿ 'ಜೈ ಹನುಮಾನ್ ಪಾರ್ಟ್-2' ಸಿನಿಮಾವನ್ನು ತೆರೆಗೆ (2025ರಲ್ಲಿ) ತರುವುದು ಖಚಿತ! ಹೀಗಾಗಿ, 'ಜೈ ಹನುಮಾನ್ ಭಾಗ-2' ಚಿತ್ರಕ್ಕೆ ರಿಷಬ್ ಶೆಟ್ಟಿಯವರ 'ಕಾಂತಾರ-ಪ್ರೀಕ್ವೆಲ್ ಖ್ಯಾತಿ ಕೂಡ ಸಿಗಲಿದೆ. ಮೇಲಾಗಿ, ರಿಷಬ್ ಶೆಟ್ಟಿಯವರ ಲುಕ್ ಹಾಗೂ ಬಾಡಿ ಶೇಪ್ ಹುಮಾನ್ ಪಾತ್ರಕ್ಕೆ ಹೊಂದಿಕೆ ಆಗುತ್ತದೆ. 

ರಶ್ಮಿಕಾ-ಸುದೀಪ್ ಹುಶಾರ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ಫ್ಯಾನ್ಸ್ ಕೂಗು!

ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಪ್ರಕಾರ, 'ರಿಷಬ್ ಶೆಟ್ಟಿಯವರು ದೇಹಾಕೃತಿಯಲ್ಲಿ ಮಾತ್ರವಲ್ಲ, ಎಲ್ಲ ರೀತಿಯ ಎಮೋಶನ್ ಕೊಡುವುದರಲ್ಲಿ ಅತ್ಯಂತ ಸಿದ್ಧಹಸ್ತರು. ನನ್ನ ಚಿತ್ರದ ಹನುಮಂತನ ಪಾತ್ರದಲ್ಲಿ ಒಮ್ಮೆ ಘೋರ ಸಿಟ್ಟನ್ನು ಅಭಿನಯಿಸಬೇಕು. ಅದನ್ನು ರಿಷಬ್ ಶೆಟ್ಟಿಯವರೇ ಸಮರ್ಥವಾಗಿ ನಿಭಾಯಿಸಲು ಸಾಧ್ಯ' ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಒಟ್ಟಿನಲ್ಲಿ, ತಾವೇ ಸೃಷ್ಟಿಸಿದ ಕನ್ನಡದ 'ಕಾಂತಾರ' ಮೂಲಕ ಕನ್ನಡಿಗ ರಿಷಬ್ ಶೆಟ್ಟಿಯವರು ಏರಿರುವ ಎತ್ತರ ಊಹಿಸಲಾಗದ್ದು!

ಆದರೆ, ನಿಜವಾಗಿಯೂ ಕನ್ನಡಿಗ ರಿಷಬ್ ಶೆಟ್ಟಿ ಟಾಲಿವುಡ್‌ ಮೂಲದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಾರಾ? ಗೊತ್ತಿಲ್ಲ. ಏಕೆಂದರೆ, ಇದು ಆಯ್ಕೆಯ ಸುದ್ದಿ ಅಷ್ಟೇ, ಅಧಿಕೃತ ಘೋಷಣೆ ಆಗಿಲ್ಲ. ಜೈ ಹನುಮಾನ್ ಚಿತ್ರದ ನಿರ್ದೇಶಕರಾಗಿರುವ ಪ್ರಶಾಂತ್ ವರ್ಮಾ ಅವರಾಗಲೀ ಅಥವಾ ಸ್ವತಃ ರಿಷಬ್ ಶೆಟ್ಟಿ ಅವರಾಗಲೀ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಂತಿಲ್ಲ. ನೋಡೋಣ, ಭವಿಷ್ಯದಲ್ಲಿ ಈ ಸುದ್ದಿ ನಿಜವೂ ಆಗಬಹುದು, ಸುಳ್ಳೂ ಆಗಬಹುದು! 

click me!