ಕಾಂತಾರಾ ಚೆಲುವೆ ಸಪ್ತಮಿ ಗೌಡ ಇದೀಗ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಅವರು ಹೇಳಿದ್ದೇನು?
ಕಾಂತಾರ ಸಿನಿಮಾದ ಬೆಡಗಿ ಸಪ್ತಮಿ ಗೌಡ ಅವರಿಗೆ ಕಾಂತಾರಾ ಸಕ್ಸಸ್ ಬಳಿಕ ಭರ್ಜರಿ ಆಫರ್ ಬರುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಈ ಮೂಲಕ ಬಾಲಿವುಡ್ಗೆ ನಟಿ ಸಪ್ತಮಿ ಎಂಟ್ರಿ ಕೊಟ್ಟರು. ಸಣ್ಣ ಪಾತ್ರದಲ್ಲೇ ಎಲ್ಲರ ಗಮನ ಸೆಳೆದರು. ಇದೀಗ ನಟಿಗೆ ಟಾಲಿವುಡ್ನಲ್ಲಿಯೂ ಆಫರ್ ಸಿಕ್ಕಿದೆ. ಈ ಹಿಂದೆಯೇ ಟಾಲಿವುಡ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುವ ಕುರಿತು ಸುದ್ದಿಗಳಿದ್ದವು. ಇದೀಗ ಸಪ್ತಮಿ ಗೌಡ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿದ್ದಾರೆ. ತಮ್ಮಡು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಈ ಚಲನಚಿತ್ರದ ಶೂಟಿಂಗ್ ಆರಂಭವಾಗಿದೆ. ನಾನು ಶೂಟಿಂಗ್ ಸೆಟ್ ಸೇರಿಕೊಳ್ಳಬೇಕಿದೆ" ಎಂದು ಸಪ್ತಮಿ ಗೌಡ ಹೇಳಿದ್ದಾರೆ. ನಟ ಡಾಲಿ ಧನಂಜಯ್ ಜೊತೆ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಕಾಂತಾರ ಸಕ್ಸಸ್ ಬಳಿಕ ಟಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ನಟ ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಕೂಡ ಶೂಟಿಂಗ್ನಲ್ಲಿ ಭಾಗಿಯಾಗಲು ತೆರಳೋದಾಗಿ ಸಪ್ತಮಿ ಗೌಡ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ನಟಿ ಸಪ್ತಮಿ ಗೌಡ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರದಲ್ಲಿ ಯುವ ರಾಜ್ಕುಮಾರ್ಗೆ ಸಪ್ತಮಿ ಗೌಡ ಜೋಡಿಯಾದರು. ಈ ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತಾಡಿದ ಸಪ್ತಮಿ ಗೌಡ ‘ಕಾಂತಾರಾ: ಚಾಪ್ಟರ್ 1’ ಸಿನಿಮಾದಲ್ಲಿ ನಾನು ನಟಿಸಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ತೆಲುಗು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ತಮ್ಮಡು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಪ್ತಮಿ ಗೌಡ ಕುದುರೆ ಸವಾರಿಯನ್ನೂ ಕಲಿಯುತ್ತಿದ್ದಾರೆ. ನಾನು ಹಾರ್ಸ್ ರೈಡಿಂಗ್ ಕಲಿಯುತ್ತಿದ್ದೇನೆ. ಇನ್ನೂ ಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ. ಸಿನಿಮಾದಲ್ಲಿ ನನ್ನ ಪಾತ್ರದ ಕುರಿತು ಮಾಹಿತಿ ನೀಡುವಂತೆ ಇಲ್ಲ ಎಂದು ನಟಿ ಹೇಳಿದ್ದಾರೆ. ನಿತಿನ್ ನಟನೆಯ ತಮ್ಮಡು ಸಿನಿಮಾದಲ್ಲಿ ಸಪ್ತಮಿ ಗೌಡ ಮಾತ್ರವಲ್ಲದೆ ನಟಿ ಲಯಾ ಕೂಡ ನಟಿಸುತ್ತಿದ್ದಾರೆ. ಇದು ಶ್ರೀರಾಮ್ ವೇಣು ನಿರ್ದೇಶನದ ಚಲನಚಿತ್ರವಾಗಿದೆ. ಪಾತ್ರದ ಬಗ್ಗೆ ಸಿನಿಮಾ ಟೀಮ್ ಹೆಚ್ಚೇನು ಹೇಳಿಲ್ಲ ಎಂದು ಸಪ್ತಮಿ ಗೌಡ ಹೇಳಿದರು.
ಸೀತಾರಾಮ ಸೀರಿಯಲ್ ಅಶೋಕ್- ಪ್ರಿಯಾ ರೀಲ್ ಮದ್ವೆಗೂ ಇಷ್ಟೊಂದು ಖರ್ಚಾ? ವಿವಾಹದ ಮೇಕಿಂಗ್ ವಿಡಿಯೋ ವೈರಲ್
ಕಾಂತಾರ ಸಿನಿಮಾದಲ್ಲಿ ಖ್ಯಾತಿ ಗಳಿಸುವ ಮೊದಲು ಸಪ್ತಮಿ ಗೌಡ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿದ್ದರು. 2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನ-ನಟನೆಯ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇದು ಸಪ್ತಮಿ ಗೌಡರ ಖ್ಯಾತಿಯನ್ನು ಹೆಚ್ಚಿಸಿತ್ತು. ಬಾಲಿವುಡ್‌ನ ವಿವೇಕ್ ಅಗ್ನಿಹೋತ್ರಿಯವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಸಪ್ತಮಿ ಗೌಡ ಕೂಡ ಟಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಕಾಂತಾರ ಪ್ರೀಕ್ವೆಲ್ ಶುರುವಾಗ್ತಿದ್ದ ಹಾಗೆ ನಟಿ ಸಪ್ತಮಿ ಗೌಡ ರೋಲ್ ಏನು ಹೇಗಿರುತ್ತೆ ಅನ್ನೋ ಬಗ್ಗೆ ದೊಡ್ಡ ಚರ್ಚೆ ಆಗುತ್ತಿತ್ತು. ಆದರೆ ಈಗ ನಟಿ ಸಪ್ತಮಿ ಗೌಡ ಆ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. 'ನಾನು ನಟಿಸುತ್ತಿಲ್ಲ. ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ಈಗ ಸಿದ್ಧವಾಗುತ್ತಿರುವುದು ಪ್ರೀಕ್ವೆಲ್. ಆ ಪಾತ್ರವೇ ಇಲ್ಲ ಎಂದಾಗ ನಾನು ನಟಿಸೋದು ಹೇಗೆ' ಎಂದಿದ್ದಾರೆ ನಟಿ ಸಪ್ತಮಿ ಗೌಡ. ಈ ಮೂಲಕ ಕಾಂತಾರ ಪ್ರೀಕ್ವೆಲ್ನಲ್ಲಿ ಸಪ್ತಮಿ ಇರೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.
ಗುಂಡಿನ ದಾಳಿ ಬಳಿಕ ಮೌನಕ್ಕೆ ಜಾರಿದ ಸಲ್ಮಾನ್ ಖಾನ್: ಸಹೋದರ ಅರ್ಬಾಜ್ ಖಾನ್ ಪ್ರತಿಕ್ರಿಯೆ ಹೀಗಿದೆ...