
ಕನ್ನಡದ 'ರಂಗನಾಯಕಿ' ಖ್ಯಾತಿಯ ನಟ ಅಶೋಕ್ (Ashok) ಅವರು ನಟ, ಇಂಡಿಯಾದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಬಗೆಗಿನ ಸೀಕ್ರೆಟ್ ಒಂದನ್ನು ಹೇಳಿದ್ದಾರೆ. ನಟ ರಜನಿಕಾಂತ್ ಅವರು ಯಾಕೆ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳಲಿಲ್ಲ? ಅವರು ಯಾಕೆ ಇಲ್ಲಿ ಕ್ಲಿಕ್ ಆಗಲಿಲ್ಲ? ಈ ಬಗ್ಗೆ ಸಂದರ್ಶನದಲ್ಲಿ ಹಿರಿಯ ನಟ ಅಶೋಕ್ ಹೇಳಿದ್ದಾರೆ. ಸಹಜವಾಗಿಯೇ ಈ ಬಗ್ಗೆ ಯಾರಿಗಾದೂ ಕುತೂಹಲ ಇದ್ದೇ ಇರುತ್ತದೆ. ಈ ಕಾರಣಕ್ಕಾಗಿಯೇ ನಿರೂಪಕರು ಆ ಪ್ರಶ್ನೆಯನ್ನು ಅಶೋಕ್ ಅವರಿಗೆ ಕೇಳಿದ್ದಾರೆ.
ಹಾಗಿದ್ದರೆ ಕನ್ನಡದ ಹಿರಿಯ ನಟ ಅಶೋಕ್ ಈ ಬಗ್ಗೆ ಹೇಳಿದ್ದಾದರೂ ಏನು? 'ರಜನಿಕಾಂತ್ ಅವರು ಕನ್ನಡದಲ್ಲಿ ನಟಿಸಿದ ಚಿತ್ರಗಳು ಓಡಲಿಲ್ಲ. ಹೀಗಾಗಿ ಅವರಿಗೆ ಇಲ್ಲಿ ಮತ್ತೆಮತ್ತೆ ಒಳ್ಳೆಯ ಅವಕಾಶಗಳು ಸಿಗಲಿಲ್ಲ. ಅದಕ್ಕಿಂತ ಹೆಚ್ಚಾಗಿ, ನಟ ರಜನಿಕಾಂತ್ ಅವರಿಗೆ ತಮಿಳಿನಲ್ಲಿ ಬಾಲಚಂದರ್ ಸಿನಿಮಾ ಆಫರ್ ಸಿಕ್ತು. ಜೊತೆಗೆ, ಅವರ ಸಿನಿಮಾಗಳು ಅಲ್ಲಿ ಚೆನ್ನಾಗಿ ಓಡಿದವು. ಕನ್ನಡಕ್ಕಿಂತ ಹೆಚ್ಚು ಪ್ರೀತಿ-ಗೌರವ ಅಲ್ಲಿ ತಮಿಳಿನಲ್ಲಿ ನಟ ರಜನಿಕಾಂತ್ ಅವರಿಗೆ ಸಕ್ತು.
ಅದೆಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿನ ಸಿನಿಮಾ ಮಾರ್ಕೆಟ್ ಆಗ ತುಂಬಾ ದೊಡ್ಡದಿತ್ತು. ಕನ್ನಡಕ್ಕೆ ಹೋಲಿಸಿದರೆ ಅಲ್ಲಿ ತುಂಬಾ ಹೆಚ್ಚು ಸಂಭಾವನೆ ಸಿಗುತ್ತಿತ್ತು. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ ಸಹಜವಾಗಿಯೇ ಹಣದ ಆಕರ್ಷಣೆ ಎಲ್ಲರಿಗೂ ಇರುತ್ತೆ. ಅದೇ ರೀತಿ ನಟ ರಜನಿಕಾಂತ್ ಅವರಿಗೆ ಇಲ್ಲಿ ಸಿನಿಮಾ ಓಡಲಿಲ್ಲ, ಅವಕಾಶಗಳೂ ಸಿಗಲಿಲ್ಲ. ಆದರೆ ಅಲ್ಲಿ ಎಲ್ಲವೂ ಸಿಗುತ್ತಾ ಇತ್ತು. ಹೀಗಾಗಿ ಅವರು ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲೇ ಇಲ್ಲ.
ಆದರೆ ನನ್ನ ಪರಿಸ್ಥಿತಿ ಅದಕ್ಕೆ ತ್ವಿರುರುದ್ಧ ಎಂಬಂತೆ ಆಯ್ತು. ನಾನು ತಮಿಳಿನಲ್ಲಿ ಮಾಡಿದ ಕನ್ನಡದ 'ಮುಗಿಲ ಮಲ್ಲಿಗೆ' ರೀಮೇಕ್ ಸಿನಿಮಾ ಕೂಡ ಅಲ್ಲಿ ಓಡಲಿಲ್ಲ. ಜೊತೆಗೆ, ನನ್ನ ನಟನೆಯ ಯಾವುದೇ ಸಿನಿಮಾ ಅಲ್ಲಿ ಚೆನ್ನಾಗಿ ಓಡಲಿಲ್ಲ. ಜೊತೆಗೆ, ನನಗೆ ಅಲ್ಲಿದ್ದಾಗ ಅಲ್ಲಿನ ಸಿನಿಮಾ ವಾತಾವರಣ ಕೂಡ ಯಾಕೋ ಸೆಟ್ ಆಗಲಿಲ್ಲ. ಹೀಗಾಗಿ ನಾನು ಮತ್ತೆ ಅವಕಾಶ ಸಿಕ್ಕರೂ ತಮಿಳು ಸಿನಿಮಾರಂಗಕ್ಕೆ ಹೋಗಲಿಲ್ಲ. ಕನ್ನಡವೇ ನನಗೆ ಸಾಕು ಅಂತ ಇಲ್ಲೇ ಉಳಿದುಕೊಂಡೆ. ಅದೇ ಸಂಗತಿ ನಟ ರಜನಿಕಾಂತ್ ಅವರಿಗೂ ಆಯ್ತು' ಎಂದಿದ್ದಾರೆ.
ಇನ್ನು, ನಟ ಅಶೋಕ್ ಅವರು ಪುಟ್ಟಣ್ಣ ನಿರ್ದೇಶನದ, ಆರತಿ ನಟನೆಯ 'ರಂಗನಾಯಕಿ' ಚಿತ್ರದಲ್ಲಿ ನಟಿಸಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಧರ್ಮಸೆರೆ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ಅಶೋಕ್. ಆದರೆ, ಅವರು ಡಾ ರಾಜ್‌ಕುಮಾರ್ ಎದುರು ಖಳನಾಯಕರಾಗಿ ನಟಿಸಿದ ಬಳಿಕ ಅವರಿಗೆ ಹೀರೋ ಚಾನ್ಸ್ ತಪ್ಪತೊಡಗಿತು. ಜೊತೆಗೆ, ಮೊದಲಿನಂತೆ ಅವಕಾಶಗಳು ಬರಲೇ ಇಲ್ಲ. ಈ ಸಂಗತಿಯನ್ನು ಸ್ವತಃ ನಟ ಅಶೋಕ್ ಅವರೇ ಹೇಳಿಕೊಂಡಿದ್ದಾರೆ.
ಇನ್ನು, ತಮಿಳಿನಲ್ಲಿ ನಟ ರಜನಿಕಾಂತ್ ಅದೆಷ್ಟು ಬೆಳೆದರು ಎಂಬುದನ್ನು ಹೇಳಲೇಬೇಕಿಲ್ಲ. ತಮಿಳು ಸಿನಿಮಾಗಳು ತೆಲುಗು ಹಾಗೂ ಬಾಲಿವುಡ್‌ಗೆ ಕೂಡ ಡಬ್ಬಿಂಗ್ ಆಗಿ ಅಲ್ಲಿಯೂ ಸೂಪರ್ ಹಿಟ್ ಆಗುವ ಮೂಲಕ ನಟ ರಜನಿಕಾಂತ್ ಅವರು 'ಆಲ್ ಇಂಡಿಯಾ ಸ್ಟಾರ್' ಆಗಿ ಬೆಳೆದರು. ಇಂದು ಏಷ್ಯಾದಲ್ಲಿಯೇ ಅವರಂಥ ಸೂಪರ್ ಸ್ಟಾರ್ ಇಲ್ಲ ಎನ್ನಲಾಗುತ್ತದೆ. 70 ವರ್ಷದ ಇಳಿವಯಸ್ಸಿನ ಬಳಿಕವೂ ನಟ ರಜನಿಕಾಂತ್ ಅವರು ಈಗಲೂ ಸ್ಟಾರ್‌ಡಮ್ ಉಳಿಸಿಕೊಂಡು ಹೀರೋ ಆಗಿಯೇ ನಟನೆ ಮುಂದುವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.