66ನೇ ವಯಸ್ಸಿನಲ್ಲಿ ತೀರಿಕೊಂಡಿರುವ ಅಂಬಿಯವರು (24 November 2018) ಮೂಲತಃ ಮಂಡ್ಯದ ದೊಡ್ಡರಸಿನಕೆರೆಯವರು. ನಟ ಅಂಬರೀಷ್ ಅವರ ಮೂಲ ಹೆಸರು ಅಮರನಾಥ್. ಪುಟ್ಟಣ್ಣ ಕಣಗಾಲ್..
ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಷ್ (Sumalatha Ambareesh) ಅವರು ಸೋಷಿಯಲ್ ಮೀಡಿಯಾದಲ್ಲಿ ದಿವಂಗತ ನಟ, ರೆಬೆಲ್ ಸ್ಟಾರ್ ಅಂಬರೀಷ್ (Rebel star Ambareesh) ಅವರ ಸಿನಿಮಾದ ಕ್ಲಿಪ್ಪಿಂಗ್ ಒಂದನ್ನು ಶೇರ್ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ಕನ್ನಡದ ನಟ ಅಂಬರೀಷ್ ಅವರ ನಟನೆಯ 'ಗೂಂಡಾ ಗುರು' ಚಿತ್ರಕ್ಕೆ ಕ್ಲಾಪ್ ಮಾಡುತ್ತಿರುವ ಫೋಟೋವದು. 1985 ರಲ್ಲಿ ನಟ ಅಂಬರೀಷ್ ಹಾಗೂ ನಟಿ ಗೀತಾ ಜೋಡಿಯ ಈ ಚಿತ್ರವನ್ನು ಎಟಿ ರಘು ನಿರ್ದೇಶಿಸಿದ್ದರು.
ಎಸ್ ರಾಮ್‌ನಾಥ್ ಹಾಗೂ ಚಂದುಲಾಲ್ ಜೈನ್ ಜಂಟಿಯಾಗಿ ಈ 'ಗೂಂಡಾ ಗುರು' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಷ್ ನಾಯಕತ್ವದ ಈ ಚಿತ್ರದಲ್ಲಿ ಅಂದಿನ ಘಟಾನುಘಟಿ ನಟರಾದ ವಜ್ರಮುನಿ, ಸುಂದರ್‌ಕೃಷ್ಣ ಅರಸ್, ಹೇಮಾ ಚೌಧರಿ ಮುಂತಾದವರು ನಟಿಸಿದ್ದರು. ಈ ಚಿತ್ರಕ್ಕೆ ಎಂ ರಂಗರಾವ್ ಸಂಗೀತ ನಿರ್ದೇಶನವಿತ್ತು. ಈ ಚಿತ್ರ ಅಂದು ಹೇಳಿಕೊಳ್ಳುವಂಥ ಯಶಸ್ಸು ಪಡೆಯದಿದ್ದರೂ ಕೂಡ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಇತ್ತು.
undefined
ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?
ಕನ್ನಡದ ರೆಬಲ್ ಸ್ಟಾರ್ ಅವರು ಇಂದು ನಮ್ಮೊಂದಿಗಿಲ್ಲ. ತಮ್ಮ 66ನೇ ವಯಸ್ಸಿನಲ್ಲಿ ತೀರಿಕೊಂಡಿರುವ ಅಂಬಿಯವರು (24 November 2018) ಮೂಲತಃ ಮಂಡ್ಯದ ದೊಡ್ಡರಸಿನಕೆರೆಯವರು. ನಟ ಅಂಬರೀಷ್ ಅವರ ಮೂಲ ಹೆಸರು ಅಮರನಾಥ್. ಪುಟ್ಟಣ್ಣ ಕಣಗಾಲ್ ನಿರ್ದೇಶನ, ನಟ ವಿಷ್ಣುವರ್ಧನ್ ನಾಯಕತ್ವದ 'ನಾಗರಹಾವು' ಚಿತ್ರದಲ್ಲಿ ನಟಿಸಿದಾಗ ಅವರ ಹೆಸರನ್ನು 'ಅಂಬರೀಷ್' ಎಂದು ನಾಮಕರಣ ಮಾಡಲಾಯಿತು. ಮುಂದೆ ಅವರು ರೆಬಲ್ ಸ್ಟಾರ್ ಅಂಬರೀಷ್ ಎಂದೇ ಖ್ತಾತಿ ಪಡೆದರು.
ನಟ ಅಂಬರೀಷ್ ಅವರು ದಾನ ಮಾಡುವುದರಲ್ಲಿ, ಸಮಾಜ ಸೇವೆ ಮಾಡುವುದರಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು. ಕಷ್ಟವಿದೆ ಎಂದು ಹೇಳಿಕೊಂಡು ತಮ್ಮ ಎದುರಿಗೆ ಬಂದ ಯಾವುದೇ ಒಬ್ಬರನ್ನು ಅವರು ಬರಿಗೈನಲ್ಲಿ ವಾಪಸ್ ಕಳುಹಿಸಿದ್ದೇ ಇಲ್ಲ ಎನ್ನಲಾಗಿದೆ. ತಮ್ಮನ್ನು ದ್ವೇಷಿಸುವ ವೈರಿಗಳ ಜೊತೆಗೆ ಕೂಡ ಸ್ನೇಹದಿಂದಲೇ ವರ್ತಿಸುತ್ತಿದ್ದ ನಟ ಅಂಬರೀಷ್ ಅವರು, ಜೀವನದಲ್ಲಿ ಯಾವತ್ತೂ ಯಾವುದಕ್ಕೂ ಬೇಸರಗೊಂಡು ಕೈಕಟ್ಟಿ ಕುಳಿತಿರುತ್ತಿರಲಿಲ್ಲವಂತೆ.
ನಟಿಯಾಗಿಯೂ ಅಂಬರೀಷ್ ಅವರ ಜೊತೆ ನಟಿಸಿದ್ದ ನಟಿ ಸುಮಲತಾ ಅವರು ಬಾಳ ಸಂಗಾತಿ ಕೂಡ ಆಗಿದ್ದು ಗೊತ್ತೇ ಇದೆ. ನಟ ಅಂಬರೀಷ್ ಅವರು ನಟರಾಗಿ ಅಲ್ಲದೇ ರಾಜಕೀಯವಾಗಿಯೂ ಬೆಳೆದವರಾಗಿದ್ದರೂ. ಅದರಂತೆ, ನಟಿ ಸುಮಲತಾ ಕೂಡ ಮಂಡ್ಯದ ಸಂಸದೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸಕ್ರಿಯರಾಗಿರುವ ಸುಮಲತಾ ಅವರು ಇದೀಗ 1985ರ ಸಿನಿಮಾದ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು, ಅದೀಗ ವೈರಲ್ ಆಗುವಂತೆ ಮಾಡಿದ್ದಾರೆ.
ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..!
ಒಟ್ಟಿನಲ್ಲಿ, ನಟ ರೆಬಲ್ ಸ್ಟಾರ್ ಅಂಬರೀಷ್ ಅವರು ನಿಧನರಾದ ಮೇಲೂ ಅವರ ಅಭಿಮಾನ ಕಮ್ಮಿಯೇನೂ ಆಗಿಲ್ಲ ಎಂಬುದು ಸೋಷಿಯಲ್ ಮೀಡಿಯಾಗಳಲ್ಲಿ ಇಂದಿಗೂ ಕಾಣಸಿಗುವ ಕಾಮೆಂಟ್ ಹೇಳುತ್ತಿವೆ. ನಟ ಅಂಬರೀಷ್ ನೆನಪು ಪತ್ನಿ ಸುಮಲತಾ ಅವರಿಂದ ಈಗಲೂ ದೂರವಾಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ ಅವರು ತಮ್ಮ ಪತಿ ಅಂಬರೀಷ್ ಸಿನಿಮಾಗಳ ಸುದ್ದಿಗಳನ್ನು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತ ಇರುತ್ತಾರೆ.