ಮುಂದಿನ ಜನ್ಮದಲ್ಲಿ ನಾನು ಹುಡುಗನಾಗಿ ಹುಟ್ಟಬೇಕು: Rashmika Mandanna

Suvarna News   | Asianet News
Published : Mar 05, 2022, 03:48 PM IST
ಮುಂದಿನ ಜನ್ಮದಲ್ಲಿ ನಾನು ಹುಡುಗನಾಗಿ ಹುಟ್ಟಬೇಕು: Rashmika Mandanna

ಸಾರಾಂಶ

ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾ ಪ್ರಚಾರದ ವೇಳೆ ಶಾಕಿಂಗ್ ಹೇಳಿಕೆ ಕೊಟ್ಟ ರಶ್ಮಿಕಾ ಮಂದಣ್ಣ. 

ಸ್ಯಾಂಡಲ್‌ವುಡ್‌ ಸಾನ್ವಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸುಮಾರು ಒಂದು ತಿಂಗಳಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.  'ಪುಷ್ಪ' ಸಿನಿಮಾ ಹಿಟ್ ಆದ ನಂತರ ರಶ್ಮಿಕಾಳ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾಗೆ ಜೋಡಿಯಾಗಿ ಶರ್ವಾನಂದ ನಟಿಸಿದ್ದಾರೆ ಆದರೆ ವೈಯಕ್ತಿಕ ಕಾರಣಗಳಿಂದ ಶಿರ್ವಾ ಯಾವ ಪ್ರಚಾರದಲ್ಲೂ ಭಾಗಿಯಾಲು ಸಾಧ್ಯವಾಗಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. 

ರಶ್ಮಿಕಾ ಶಾಕಿಂಗ್ ಹೇಳಿಕೆ:

'ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾವನ್ನು ಎಲ್ಲಾ ವಯಸ್ಸಿನವರು ನೋಡಬೇಕು. ಕೆಲವೊಂದು ನೈಜ ದೃಶಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ. ತುಂಬಾ ಕಾಮಿಡಿ ಮತ್ತು ಎಮೋಷನ್‌ ಮತ್ತು ರಿಯಲ್‌ ಘಟನೆಗಳನ್ನು ಜನರ ಮುಂದೆ ತಂದಿಡುವ ಪ್ರಯತ್ನವಾಗಿದೆ. ಇಷ್ಟೆಲ್ಲಾ ವಿಚಾರಗಳು ಸಿನಿಮಾದಲ್ಲಿ ಇದೆ ಅಂದ್ಮೇಲೆ ಖಂಡಿತ ಎಲ್ಲರೂ ಕುಟುಂಬ ಸಮೇತರಾಗಿ ಸಿನಿಮಾ ನೋಡಬಹುದು. ಎಲ್ಲರೂ ಫ್ಯಾಮಿಲಿ ಕರೆದುಕೊಂಡು ಬನ್ನಿ' ಎಂದು ರಶ್ಮಿಕಾ ವೇದಿಕೆ ಮೇಲೆ ಮಾತನಾಡಿದ್ದಾರೆ. 

'ನಾನು ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಅಂದುಕೊಂಡಿರುವೆ. ಅದರಲ್ಲೂ ಪುಷ್ಪ ಮತ್ತು ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾ ಚಿತ್ರೀಕರಣ ಮಾಡಿದ ಮೇಲೆ ಹೀಗೆ ಅನಿಸಿದೆ. ಈ ಎರಡೂ ಚಿತ್ರಗಳಿಗೆ ಡಿಫರೆಂಟ್ ಅಗಿರುವ ಕಾಸ್ಟ್ಯೂಮ್‌ಗಳನ್ನು ಬದಲಾಯಿಸಿ ಬದಲಾಯಿಸಿ ಸಾಕಾಗಿದೆ. ಹುಡುಗರಿಗೆ ಇಷ್ಟೆಲ್ಲಾ ಕೆಲಸ ಇಲ್ಲ ಅವರ ಜೀವನ ತುಂಬಾನೇ ಸುಲಭ. ಇಷ್ಟೊಂದು ಬದಲಾವಣೆ ಇರುವುದಿಲ್ಲ' ಎಂದು ರಶ್ಮಿಕಾ ಹೇಳಿದ್ದಾರೆ.

ಈ ಮಾತುಕತೆ ನಡುವೆ ತಮ್ಮ ಮದುವೆ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ. ನಾನು ಮದುವೆ ಆಗುತ್ತಿಲ್ಲ ಇದರ ಬಗ್ಗೆ ಯಾವ ಯೋಚನೆಯೂ ನನಗಿಲ್ಲ. ಮದುವೆ ಆಗಲು ಸಮಯ ಇದೆ. ಅದಕ್ಕೆ ಯಾರನ್ನೂ ಹುಡುಕುತ್ತಿಲ್ಲ ಎಂದಿದ್ದಾರೆ. 

'ಈ ಸಿನಿಮಾನ ಬರೀ ಫ್ಯಾಮಿಲಿ ಅವರು ನೋಡಬೇಕು ಅಂತಿಲ್ಲ . ಯುವಕರು ಕೂಡ ನೋಡಬೇಕು. ರಶ್ಮಿಕಾ ಮಂದಣ್ಣ ಮತ್ತು ಖುಷ್ಬೂ ಬಾಂಡಿಂಗ್ ಸೂಪರ್ ಆಗಿದೆ. ಸಿನಿಮಾದಲ್ಲಿ ತೋರಿಸುವ ಅನೇಕ ಪಾತ್ರಗಳಿಗೆ ವೀಕ್ಷಕರು ಕನೆಕ್ಟ್ ಆಗುತ್ತಾರೆ. ಇಂಟರ್ವಲ್‌ ಆದ್ಮೇಲೂ ಒಂದು ಶೇಡ್ ನೋಡಬಹುದು. ಸಿನಿಮಾ ನೋಡಲು ಬಂದಿರುವ ಮಹಿಳೆಯರು ಖಂಡಿತ ವಿಷಲ್ ಹೊಡೆಯುತ್ತಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದರೆ ಒಳ್ಳೆಯ ಅನುಭವ ಗ್ಯಾರೆಂಟಿ' ಎಂದು ನಿರ್ಮಾಪಕ ಸುಧಾಕರ ಚೆರುಕುರಿ ಹೇಳಿದ್ದಾರೆ. 

ಪಕ್ಕಾ ಬಾಲಿವುಡ್ ನಟಿಯಂತೆ ಕಾಣಿಸಿಕೊಂಡ Rashmika Mandanna ಕನ್ನಡಿಗರಿಂದ ಟ್ರೋಲ್?

'ಸಿನಿಮಾದಲ್ಲಿ ಮಹಿಳೆಯರಿಗೆ ಮೊದಲು ಕ್ರೆಡಿಟ್ ಕೊಡಬೇಕು ಎಂದು ನಟ ಶೆರ್ವಾ ಹೇಳಿದ್ದರು.  ಹೀಗಾಗಿ ಜ್ಯೂನಿಯರ್ ನಟಿಯರ ಹೆಸರು ಮೊದಲು ನೋಡುತ್ತೀರಿ ಆಮೇಲೆ ನಟನ ಹೆಸರು ಬರುತ್ತದೆ.  ಎಲ್ಲಾ ಲೀಡ್‌ ನಟಿಯರ ಹೆಸರು ಕೂಡ ಹೈಲೈಟ್ ಮಾಡಲಾಗುತ್ತದೆ' ಎಂದು ತಂಡ ಹೊಸ ವಿಚಾರ ಹಂಚಿಕೊಂಡಿದೆ. 

Wedding Rumor: ರಶ್ಮಿಕಾ ಜೊತೆ ಮದುವೆ ಬಗ್ಗೆ ಬಾಯಿ ಬಿಟ್ಟ ವಿಜಯ್ ದೇವರಕೊಂಡ!

ಇನ್ನು ಪುಷ್ಪ 2 ಸಿನಿಮಾ ಮಾಡುವುದಕ್ಕೆ ರಶ್ಮಿಕಾ ಮಂದಣ್ಣ  2.5 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲನೇ ಭಾಗಕ್ಕೆ 2 ಕೋಟಿ ಪಡೆದುಕೊಂಡ ನಟಿ ನ್ಯಾಷನಲ್ ಕ್ರಶ್ ಸ್ಥಾನಕ್ಕೆ ಕರೆಕ್ಟ್‌ ಆಗಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅಲ್ಲು ಜೊತೆ ಮತ್ತೆ ಸಿನಿಮಾ ಯಾವಾಗ ಶುರು ಆಗುತ್ತದೆ ಶೆಡ್ಯೂಲ್ ಏನು ಎಂದು ಮಾಹಿತಿ ಲಭ್ಯವಾಗಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!