ಲವ್‌ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ

By Gowthami K  |  First Published Jul 7, 2024, 5:31 PM IST

ಡಿವೋರ್ಸ್ ಬಳಿಕ ಚಂದನ್ ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಬದುಕಿಗೆ ಚೆನ್ನಾಗಿರೋ ಹುಡುಗಿ ಒಳ್ಳೆ ಹುಡುಗಿ ಸಿಗಬೇಕು ಅನ್ನೋ ಆಸೆ ಇತ್ತು ಎಂದಿದ್ದಾರೆ.


ನಿವೇದಿತಾ ಗೌಡ-ಚಂದನ್ ಶೆಟ್ಟಿ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಊಹಾ-ಪೋಹಗಳು ಹಬ್ಬಿದ್ವು, ಇನ್ನೇನು ಆ ರೂಮರ್ಸ್‌ಗಳಿಗೆ ರೆಕ್ಕೆ ಪುಕ್ಕ ಬಂತು ಅನ್ನುವಷ್ಟರಲ್ಲಿ ಇಬ್ಬರೂ ಕೂಡ ಜೊತೆಯಾಗಿ ಬಂದು ಕ್ಲಾರಿಫಿಕೇಶನ್ ಕೊಟ್ರು.  ಅದಾದ ಬಳಿಕ ಚಂದನ್ ಶೆಟ್ಟಿ ಹಲವು ಕಡೆ ಸಂದರ್ಶನಗಳನ್ನು ನೀಡಿದ್ದಾರೆ. ಅದರಲ್ಲಿ ತನ್ನ ವೈಯಕ್ತಿಕ ಜೀವನ, ಸಾಧನೆ, ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ಖಾಸಗಿ ವಾಹಿಯೊಂದರಲ್ಲಿ ಮತ್ತೆ ಚಂದನ್ ಮಾಡಿದ್ದು, ತನ್ನ ಬದುಕಿಗೆ ಚೆನ್ನಾಗಿರೋ ಹುಡುಗಿ ಒಳ್ಳೆ ಹುಡುಗಿ ಸಿಗಬೇಕು ಅನ್ನೋ ಆಸೆ ಇತ್ತು. ಚೆನ್ನಾಗಿರೋರೆ ಸಿಕ್ಕಿದ್ರು ಆದ್ರೆ ಜೀವನ ಅಂದ್ರೇನೆ ಹಂಗೆ ಸಮುದ್ರದ ಅಲೆಗಳ ತರ ಎಂದಿದ್ದಾರೆ.

ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್‌ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!

Latest Videos

undefined

ಸಮುದ್ರದ ಅಲೆಗಳು ಎಂದಿಗೂ ನಿಂತಿರುವುದಿಲ್ಲ. ಯಾಕೆಂದರೆ ಅದು ಅಲೆ, ಕೆಲವೊಂದು ಬಾರಿ ದೊಡ್ಡ ಅಲೆಗಳು ಬರುತ್ತಿರುತ್ತದೆ. ಒಂದು ಬಾರಿ ಸಣ್ಣ ಅಲೆ ಬರುತ್ತದೆ. ಕೆಲವೊಮ್ಮೆ ಸುನಾಮಿಯೇ ಆಗುತ್ತದೆ. ಅದು ಯಾವಾಗ, ಹೇಗೆ ಆಗುತ್ತೆ ಎನ್ನುವುದನ್ನು ನಾವು ನಿರೀಕ್ಷಿಸಬಾರದು. ಎಲ್ಲರ ಜೀವನದಲ್ಲೂ ನೋವು ಎನ್ನುವುದು ಸರ್ವೇ ಸಾಮಾನ್ಯ. ಕೆಟ್ಟ ಘಟನೆಗಳು ನಡೆದೇ ಇರುತ್ತೆ. ಅದು ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಲ್ಲ ನೆನಪು ಅಷ್ಟೇ.  ಕುಟುಂಬದಲ್ಲಿ ಕೆಲವರು ಅಂತ್ಯಂತ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುತ್ತಾರೆ. ಆ ಸಾವು ಯಾವುದೇ ರೀತಿಯಲ್ಲಿ ಬಂದಿರಬಹುದು ಅದು ಅವರಿಗೆ ಕೆಟ್ಟ ನೆನಪಾಗಿ ಉಳಿಯುತ್ತದೆ. 

ಅದರಂತೆ ನನ್ನ ಜೀವನದಲ್ಲಿ ಕೂಡ ಮದುವೆ ಅನ್ನೋದು ಒಂದು ಕೆಟ್ಟ ನೆನಪಾಗಿ ಉಳಿದುಕೊಂಡಿದೆ ಅಷ್ಟೇ. ಇದಕ್ಕೆ ಏನೂ ಮಾಡಲು ಆಗುವುದಿಲ್ಲ. ಲವ್ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಬೇರೆ ಬೇರೆಯಾಗಿಯೇ ಇರುತ್ತಾರೆ. ಪ್ರೀತಿಯಲ್ಲಿ ಬಿದ್ದಿರುತ್ತಾರೆ ಹೊರತು ಮದುವೆಯಾಗಿರುವುದಿಲ್ಲ. ಲವ್ ಅನ್ನೋದೆ ಬೇರೆ. ಮದುವೆಯೇ ಬೇರೆ. ಕೆಲವರು ಅಂದುಕೊಳ್ಳಬಹುದು ಲವ್‌ ಮಾಡುವಾಗ ಒಬ್ಬರ ಬಗ್ಗೆ ಒಬ್ಬರಿಗೆ ಗೊತ್ತಿರ್ಲಿಲ್ವಾ ಅಂತ.  ಆದ್ರೆ ಮದುವೆಯಾಗಿ ಒಂದೇ ರೂಂನಲ್ಲಿ ಸಂಸಾರ ಮಾಡುತ್ತಾರಲ್ವಾ ಅದೇ ಬೇರೆ. ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತೆ ಎಂದು ಲವ್ ಮತ್ತು ಅರೇಂಜ್ ಮ್ಯಾರೇಜ್ ಬಗ್ಗೆ ಮಾತನಾಡಿದ್ದಾರೆ.

ದುಬೈನಲ್ಲಿ ಕುಳಿತು ಬೆಂಗಳೂರಿನಲ್ಲಿ ತಾಯಿ, ಮಗಳ ಡ್ರಗ್ ದಂಧೆ!

ಜೀವನದಲ್ಲಿ ಬೇರೆ ರೀತಿಯ ಸವಾಲಗಳು ಅನೇಕ ಇರುತ್ತದೆ. ಹೆಚ್ಚು ಹೇಳಬೇಕೆಂದರೆ ಇಬ್ಬರೂ ಕೂಡ ಒಂದೇ ಇಂಡಸ್ಟ್ರೀಯಲ್ಲಿ ಇರುವಾಗ ಅವರು ಬ್ಯುಸಿ ಇರ್ತಾರೆ, ನಾನು ಬ್ಯುಸಿ ಇರ್ತೀನಿ. ಎಲ್ಲೂ ಒಂದು ಕಡೆ ಇದೆಲ್ಲ ತಕ್ಕಡಿಯಲ್ಲಿನ ಮುಳ್ಳಿನಂತೆ,  ಸಮವಾಗಿ ತೂಗುವುದೇ ಇಲ್ಲ. ಅದು ಮೇಲೆ ಕೆಳಗೆ ತೂರಾಡುತ್ತಲೇ ಇರುತ್ತದೆ. ಹಾಗಾಗಿ ಕೊನೆ ಕ್ಷಣದಲ್ಲಿ ಎಲ್ಲರೂ ಹ್ಯಾಪಿ ಆಗಿರುವುದೇ ಮುಖ್ಯ ಎಂದಿದ್ದಾರೆ ಚಂದನ್ ಶೆಟ್ಟಿ.

ಒಂದಾಗಿ ಎಂದು ಎಲ್ಲರೂ ಒಳ್ಳೆ ಮನಸ್ಸಿಂದ ಹೇಳಿರುತ್ತಾರೆ. ಅದು ಒಳ್ಳೆಯದೇ, ಆದರೆ ನಮ್ಮ ಮನಸ್ಸಿನ ಮಾತುಗಳು, ನಮ್ಮ ಮನಸ್ಸಿನಲ್ಲಿ ಏನೇನು ಆಗುತ್ತಿರುತ್ತೆ ಈ ಗೊಂದಲಗಳು ಅವರಿಗೆ ಅರ್ಥ ಆಗುವುದಿಲ್ಲ. ಬಿಡಿ ಈವಾಗೆಲ್ಲ ಮುಗೀತು. ಮತ್ತೆ ಈ ಬಗ್ಗೆ ಮಾತು ಬೇಡ. ನಾನು ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದು ಕಾಯ್ತಾ ಇದ್ದೇನೆ. ಮತ್ತೆ ಹಳೇ ಚಂದನ್ ಶೆಟ್ಟಿ ಬೇಕು. ಎಲ್ಲೋ ಸಾಫ್ಟ್ ಆಗಿದ್ದಾನೆ ಆ ಚಂದನ್ ಶೆಟ್ಟಿ ಅನ್ನಿಸಿತ್ತು. ಹಳೆಯ ಚಂದನ್ ಆಗಿ ಬರಲು ಈಗ ಮತ್ತೆ ಕನಸು ಚಿಗುರಿಗೆ  ಎಂದಿದ್ದಾರೆ.

click me!