ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಹುಟ್ಟು ಹಬ್ಬಕ್ಕೆ ಬಿಡುಗಡೆಯಾದ 777 ಚಾರ್ಲಿ ಚಿತ್ರದ ವಿಡಿಯೋ ನೋಡುಗರ ಮೆಚುಗೆಗೆ ಪಾತ್ರವಾಗುತ್ತಿದೆ.
ನಾಯಿ, ತಟ್ಟೆ, ಇಂಡ್ಲಿ, ಹೋಟೆಲ್, ಗ್ಯಾರೇಜ್... ಹೀಗೆ ವಿಭಿನ್ನ ತಿರುಗಳನ್ನು ಹೇಳುವ ಈ ವಿಡಿಯೋ ಮಕ್ಕಳಿಗೆ ತುಂಬಾ ಇಷ್ಟವಾಗುತ್ತಿದೆ. ಈ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಸುದೀಪ್‌ಗೆ ನಿರ್ದೇಶನ ಮಾಡೋ ಆಸೆ ಇತ್ತು: ರಕ್ಷಿತ್ ಶೆಟ್ಟಿ
undefined
ತಮಾಷೆ, ಭಾವುಕತೆ ಗೊತ್ತಿಲ್ಲದ ಮನುಷ್ಯ ಮತ್ತು ಪ್ರಾಣಿ ಜಗತ್ತಿನ ಕತೆಯಂತೆ ತೋರುತ್ತಿರುವ 777 ಚಾರ್ಲಿ ಚಿತ್ರದ ಈ ವಿಡಿಯೋ ನೋಡಿದಾಗ ಮಕ್ಕಳ ಅಚ್ಚುಮೆಚ್ಚಿನ ಸಿನಿಮಾ ಇದಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಹೀಗಾಗಿಯೇ ಚಿತ್ರವನ್ನು ಕನ್ನಡದ ಜತೆಗೆ ಬೇರೆ ಭಾಷೆಗಳಿಗೂ ತೆಗೆದುಕೊಂಡು ಹೋಗುತ್ತಿದ್ದಾರೆ ನಿರ್ಮಾಪಕರು. ಕಿರಣ್ ರಾಜ್ ಅವರು ಮೊದಲ ಪ್ರಯತ್ನದಲ್ಲೇ ಹೊಸ ಬಗೆಯ ಸಿನಿಮಾ ಕೊಟ್ಟಿದ್ದಾರೆ ಎಂಬುದನ್ನು ಈ ವಿಡಿಯೋ ನೋಡಿಯೇ ಹೇಳಬಹುದು.
ಚಾರ್ಲಿ ಚಿತ್ರದ ಜತೆಗೆ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದು ಕೂಡ ಕುತೂಹಲಕಾರಿಯಾಗಿದೆ. ಎಂದಿನಂತೆ ಕಂಟೆಂಟ್ ಹೊಂದಿರುವ ಸಿನಿಮಾ ಇದಾಗಿದ್ದು, ಖೈದಿಗಳ ಶೋಧನೆ ರಸೀದಿ, ಅದರಲ್ಲಿ ಪೊಲೀಸ್ ಇಲಾಖೆಯ ರೆಕಾರ್ಡ್ ಬರಹ, ಚಿತ್ರದ ಬಗ್ಗೆ ಸಾಕಷ್ಟುಕುತೂಹಲ ಮೂಡಿಸುತ್ತಿದೆ. ಇದರ ಜತೆಗೆ ‘777 ಚಾರ್ಲಿ’ ಚಿತ್ರದ ಹೊಸ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ರಕ್ಷಿತ್ ಶೆಟ್ಟಿಮತ್ತು ನಾಯಿ ಕಾಂಬಿನೇಷನ್‌ನ ಪೋಸ್ಟರ್ ಹೊಸದಾಗಿದೆ. ಹೀಗೆ ಮೂರು ಸಪ್ರೈಸ್ ಗಿಫ್ಟ್ ಮೂಲಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.