ವಿಷ್ಣುವರ್ಧನ್ ಅವರನ್ನೇ 'ನಾಗರಹಾವು'ಗೆ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ್ದೇಕೆ? ಭಾರೀ ಗುಟ್ಟು ರಟ್ಟಾಯ್ತು!

By Shriram Bhat  |  First Published Apr 13, 2024, 4:04 PM IST

ನಟ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಆಯ್ಕೆಯಾಗುವ ಮೊದಲು 'ವಂಶವೃಕ್ಷ' ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಅವರಿಗೆ ಚ್ಯೂಯಿಂಗ್ ಗಮ್ ಅಗಿಯುವ ಪಾತ್ರ ನೀಡಲಾಗಿತ್ತು. ಆಗ ಅವರು ಕುಮಾರ್ ಆಗಿದ್ದರು, ಇನ್ನೂ ವಿಷ್ಣುವರ್ಧನ್ ಎಂಬ ಹೆಸರು ಬಂದಿರಲಿಲ್ಲ.


ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಪಟ್ಟಣ್ಣ ಕಣಗಾಲ್ ನಿರ್ದೇಶನ ಹಾಗೂ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಚಿತ್ರ ಒಂದು ಬಹುದೊಡ್ಡ ಮೈಲಿಗಲ್ಲು. ಈ ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಮಾಸ್ ಹೀರೋ ಆಗಿ ಎಂಟ್ರಿ ಕೊಟ್ಟು ಸ್ಟಾರ್ ನಟರಾಗಿ ಬೆಳೆದಿದ್ದು ಒಂದು ಇತಿಹಾಸ. ಇನ್ನೊಂದು, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 'ಗೆಜ್ಜೆ ಪೂಜೆ' ಹಾಗೂ 'ಶರಪಂಜರ'ಗಳಂತಹ ಮಹಿಳಾ ಪ್ರಧಾನ ಸಿನಿಮಾಗಳನ್ನೆ ಮಾಡಿ ಆ ಹಣೆಪಟ್ಟಿಗೆ 'ಬ್ರಾಂಡ್' ಆಗಿಬಿಟ್ಟಿದ್ದರು. ಈ ಸಿನಿಮಾ ಮೂಲಕ ಅವರು 'ಮಹಿಳಾ ಪ್ರಧಾನ ಸಿನಿಮಾ ನಿರ್ದೇಶಕ' ಹಣೆಪಟ್ಟಿ ಕಳಚಿಕೊಂಡು ಹೊಸ ಇತಿಹಾಸ ನಿರ್ಮಿಸಿದರು. 

ನಟ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಆಯ್ಕೆಯಾಗುವ ಮೊದಲು 'ವಂಶವೃಕ್ಷ' ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಅವರಿಗೆ ಚ್ಯೂಯಿಂಗ್ ಗಮ್ ಅಗಿಯುವ ಪಾತ್ರ ನೀಡಲಾಗಿತ್ತು. ಆಗ ಅವರು ಕುಮಾರ್ ಆಗಿದ್ದರು, ಇನ್ನೂ ವಿಷ್ಣುವರ್ಧನ್ ಎಂಬ ಹೆಸರು ಬಂದಿರಲಿಲ್ಲ. ಕುಮಾರ್ ಅವರನ್ನು ಪುಟ್ಟಣ್ಣ ಕಣಗಾಲ್ ತಮ್ಮ ನಾಗರಹಾವು ಚಿತ್ರಕ್ಕೆ ಆಯ್ಕೆ ಮಾಡಲು ಕಾರಣವೇನು  ಎಂಬ ಸಂಗತಿ ಎಂದೋ ಬಹಿರಂಗವಾಗಿತ್ತು. ಆದರೆ ಅಂದು ಇಂದಿನಂತೆ ಮೀಡಿಯಾಗಳು, ಸೋಷಿಯಲ್ ಮೀಡಿಯಾಗಳು ಇರಲಿಲ್ಲ. ಹೀಗಾಗಿ ಅದು ಜಾಸ್ತಿ ಪ್ರಚಾರ ಪಡೆದಿರಲಿಲ್ಲ. 

Tap to resize

Latest Videos

ಸಾಧು ಕೋಕಿಲ ಪ್ರಶ್ನೆಗೆ ನಗುತ್ತ 'ಮೌನವೇನೇ ಧ್ಯಾನವೇ ಪ್ರೇಮಾ' ಎಂದಿದ್ದೇಕೆ ರಿಯಲ್ ಸ್ಟಾರ್ ಉಪೇಂದ್ರ?

ಹಾಗಿದ್ದರೆ ವಂಶವೃಕ್ಷ ಸಿನಿಮಾದ ನಟ ಕುಮಾರ್ ಅವರು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರಕ್ಕೆ ಬಂದಿದ್ದು ಹೇಗೆ? ಮೊದಲೇ ಬಹಿರಂಗವಾಗಿದ್ದ ಈ ಸತ್ಯ ಸಂಗತಿ, ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಆಗುತ್ತಿದೆ. ವಂಶವೃಕ್ಷ ಚಿತ್ರದಲ್ಲಿ ಚ್ಯೂಯಿಂಗ್ ಗಮ್ ಅಗಿಯುತ್ತಿದ್ದ ನಟ ಕುಮಾರ್ ಅವರ ಮುಖದಲ್ಲಿ ಎದ್ದು ಕಾಣುತ್ತಿದ್ದ ಹೀರೋಯಿಸಂ ಅನ್ನು ಪುಟ್ಟಣ್ಣ ಕಣಗಾಲ್ ಗುರುತಿಸಿದ್ದರಂತೆ. ಜತೆಯಲ್ಲಿ, ಅವರು ಕತ್ತನ್ನು ಒಂದು ಕಡೆ ತಿರುಗಿಸುತ್ತಿದ್ದ ರೀತಿಯನ್ನೂ ಸಹ ಪುಟ್ಟಣ್ಣ ನೆನಪಿಟ್ಟುಕೊಂಡಿದ್ದರಂತೆ. 

ಬ್ಯಾಡ್ ಕಾಮೆಂಟ್ಸ್‌ ಬಗ್ಗೆ ಪ್ರಿಯಾಂಕಾ ಚೋಪ್ರಾ ಖಡಕ್ ಮಾತು ಕೇಳಿ ಸೋಷಿಯಲ್ ಮೀಡಿಯಾ ಬೆಪ್ ತಕ್ಕಡಿ!

ಬಳಿಕ, ಪತ್ರಿಕೆಯೊಂದರ ಸಂದರ್ಶನದ ಕಾರಣಕ್ಕೆ ಫೋಟೋ ತೆಗೆಸಿಕೊಂಡಿದ್ದ ನಟ ಕುಮಾರ್ ಅವರ ಫೋಟೋ ನೋಡಿದ ಪುಟ್ಟಣ್ಣ ಕಣಗಾಲ್, ಕುಮಾರ್ ಅವರೇ ನಾಗರಹಾವು ಚಿತ್ರಕ್ಕೆ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿದರಂತೆ. ಅದಕ್ಕೆ ಸ್ವತಃ ಪುಟ್ಟಣ್ಣ ಕಣಗಾಲ್ ಅವರೇ ಕಾರಣವನ್ನೂ ಹೇಳಿದ್ದರಂತೆ. ಹಾಗಿದ್ದರೆ ನಾಗರಹಾವು ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ಅವರೇ ಸೂಕ್ತ ಎನ್ನಲು ಪುಟ್ಟಣ್ಣ ಕಣಗಾಲ್ ಕೊಟ್ಟ ಕಾರಣಗಳು ಏನು ಗೊತ್ತಾ? 'ಕುಮಾರ್ ಕಣ್ಣಿನಲ್ಲಿ ಶಾರ್ಪ್‌ನೆಸ್ ಇದೆ, ಅದು ಒಂಥರಾ ನಾಗರಹಾವಿನ ನೋಟಕ್ಕೆ ಹತ್ತಿರವಿದೆ. ಇನ್ನೊಂದು ಅವರು ಕತ್ತು ತಿರುಗಿಸುವ ರೀತಿಯೂ ನಾಗರಹಾವಿನ ಮೂವ್ಮೆಂಟ್‌ ಥರಹವೇ ಇದೆ' ಎಂದಿದ್ದರಂತೆ ಪುಟ್ಟಣ್ಣ ಕಣಗಾಲ್. 

ರಾಕಿ ಅಂದ್ರೆ ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್; ಬೇರೆಯದೇ ಆ್ಯಂಗಲ್‌ನಲ್ಲಿ ಅರ್ಥ ಹೇಳ್ಬಿಟ್ರು ಯಶ್!

click me!