ವೈಶಂಪಾಯನ ತೀರ ಟೈಟಲ್‌ ಲಾಂಚ್‌

By Kannadaprabha NewsFirst Published Aug 25, 2021, 10:40 AM IST
Highlights
  • ಸಣ್ಣ ಕತೆ ಆಧರಿತ ‘ವೈಶಂಪಾಯನ ತೀರ’ ಚಿತ್ರದ ಟೈಟಲ್‌ ಲಾಂಚ್‌ 
  • ಶೀರ್ಷಿಕೆ ಅನಾವರಣ ಮಾಡಿದ ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ

ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕತೆ ಆಧರಿತ ‘ವೈಶಂಪಾಯನ ತೀರ’ ಚಿತ್ರದ ಟೈಟಲ್‌ ಲಾಂಚ್‌ ಆಗಿದೆ. ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಅವರು ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಈ ಚಿತ್ರದ ನಿರ್ದೇಶಕ ರಮೇಶ್‌ ಬೇಗಾರು ಅವರು ಶೃಂಗೇರಿಯಲ್ಲಿದ್ದುಕೊಂಡೇ ಅಲ್ಲಿನ ಪ್ರಾದೇಶಿಕತೆಯಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಬಹಳ ಕಾಲದ ಬಳಿಕ ಅವರನ್ನು ಮತ್ತೆ ಸಿನಿಮಾ ರಂಗದಲ್ಲಿ ನೋಡಲು ಸಂತಸವಾಗುತ್ತಿದೆ’ ಎಂದರು.

ಈ ಚಿತ್ರದ ನಿರ್ದೇಶಕ ರಮೇಶ್‌ ಬೇಗಾರು ಈ ಹಿಂದೆ ಸಿನಿಮಾ, ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಉಳ್ಳವರು. ಇದೀಗ ಯಕ್ಷಗಾನ ಕಲಾವಿದರ ಹಗಲು ಬದುಕಿನ ಜೊತೆಗೆ ಸ್ತ್ರೀ ದೌರ್ಜನ್ಯ ಹಾಗೂ ಪ್ರಕೃತಿ ದೌರ್ಜನ್ಯವನ್ನು ಸಮೀಕರಿಸಿ ಈ ಚಿತ್ರ ಮಾಡುತ್ತಿದ್ದಾರೆ. ‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾದ ನಾಯಕಿ ವೈಜಯಂತೀ ಅಡಿಗ ಈ ಚಿತ್ರದ ನಾಯಕಿ.

ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ

ಯಕ್ಷಗಾನ ಕಲಾವಿದರಾದ ರವೀಶ್‌ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್‌, ನಾಗಶ್ರೀ ಬೇಗಾರು, ಪ್ರಮೋದ್‌ ಶೆಟ್ಟಿ, ರಮೇಶ್‌ ಭಟ್‌, ಮೂರು ಮುತ್ತು ಚಿತ್ರದಲ್ಲಿ ನಟಿಸಿದ ಕುಳ್ಳರು ಸೇರಿದಂತೆ ಹಲವರು ನಟಿಸಿದ್ದಾರೆ. ಸ್ವರ ಸಂಗಮ ಎಂಟರ್‌ಪ್ರೈಸಸ್‌ ಮೂಲಕ ಸುರೇಶ್‌ ಬಾಬು ಈ ಚಿತ್ರ ನಿರ್ಮಿಸಿದ್ದಾರೆ.

ಸ್ವರಸಂಗಮ ನಿರ್ಮಾಣ ಸಂಸ್ಥೆ

ಮೂರು ದಶಕಗಳ ಕಾಲ ಆಡಿಯೋ ಕ್ಯಾಸೆಟ್‌ ಮಾಡಿದ ಅನುಭವ ಇರುವ ಸುರೇಶ್‌ ಬಾಬು ಅವರು ಇದೀಗ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಸ್ವರ ಸಂಗಮ’ ಅವರ ನಿರ್ಮಾಣ ಸಂಸ್ಥೆ. ಇದರ ಮೂಲಕ ಪ್ರಾದೇಶಿಕ, ಬ್ರಿಡ್ಜ್‌ ಸಿನಿಮಾಗಳನ್ನು ನಿರ್ಮಿಸುವ ಕನಸು ಅವರದು.

click me!