ಡಾ.ರಾಜ್‌ಕುಮಾರ್ 92ನೇ ಹುಟ್ಟು ಹಬ್ಬದ ಪ್ರಯುಕ್ತ ನಾವು ನಿಮಗೆ ಅಣ್ಣಾವ್ರು ಎಷ್ಟು ಆಹಾರ ಪ್ರಿಯಾ ಎಂದು ಹೇಳುತ್ತೇವೆ. ಓದಿ...
ಕನ್ನಡ ಚಿತ್ರರಂಗದ ಜಗ ಮೆಚ್ಚಿದ 'ಬೇಡರ ಕಣ್ಣಪ್ಪ' ಡಾ. ರಾಜ್‌ಕುಮಾರ್ ಅವರ 92ನೇ ಹುಟ್ಟು ಹಬ್ಬ ಇಂದು .ಕಸ್ತೂರಿ ನಿವಾಸದ ಕೊಡುಗೈ ದಾನಿ ರಾಜ್‌ಕುಮಾರ್ ತುಂಬಾನೇ ಆಹಾರ ಪ್ರಿಯರು ಹಾಗಂತ ಸ್ಟಾರ್ ಹೋಟೆಲ್‌ನಲ್ಲೇ ತಿನ್ನಬೇಕು ಅಂತೇನು ಇರಲಿಲ್ಲ.
ಡಾ.ರಾಜ್ ಹುಟ್ಟುಹಬ್ಬ; ಅಣ್ಣಾವ್ರೇಕೆ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ!
ರಾಜಣ್ಣನಿಗೆ ವಾಕಿಂಗ್ ಹೋಗುವ ಅಭ್ಯಾಸವಿತ್ತು ದಾರಿಯಲ್ಲಿ ಯಾವುದೋ ಗುಡಿಸಿಲಲ್ಲಿ ಮಾಡುತ್ತಿದ್ದ ಅಡುಗೆ ಘಮ ಘಮ ಎಂದರೆ ಸಾಕು ಅಲ್ಲಿಗೆ ಯಾರಿಗೂ ಹೇಳಿದೆ ಕೇಳದೆ ಹೋಗಿ ಏನು ಮಾಡಿದ್ಯಾವ್ವ? ಅಂತ ಮಾತನಾಡಿಸಿ ಊಟದ ರುಚಿ ನೋಡಿ ಬರುತ್ತಿದ್ದರು. ವಿಚಿತ್ರ ಏನೆಂದರೆ ಊಟದ ರುಚಿ ಚೆನ್ನಾಗಿತ್ತು ಅಂದ್ರೆ ಅಣ್ಣಾವ್ರು ಕೈ ತೊಳೆಯುತ್ತಿರಲಿಲ್ಲವಂತೆ.
ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ ಡಾ. ರಾಜ್; ಅವರಿಗಿದೋ ಫೋಟೋ ನಮನ!
ಕನ್ನಡದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ಮನೆಗೆ ರಾಜ್‌ಕುಮಾರ್ ಅವರು ಊಟಕ್ಕೆ ಹೋಗಿದ್ದರಂತೆ.ಅಣ್ಣಾವ್ರು ಬರ್ತಿದ್ದಾರೆ ಎಂದು ಮಟನ್ ಬಿರಿಯಾನಿ ಮಾಡಿಸಲಾಗಿತ್ತು ಬಿರಿಯಾನಿ ತಿಂದ ನಂತರ ಅಣ್ಣಾವ್ರು ಕೈ ತೊಳೆಯದೇ ಕೈ ಒರೆಸಿಕೊಂಡು ಕುಂತುಬಿಟ್ಟರಂತೆ. ತಕ್ಷಣವೇ ನಿಸಾರ್ ಅಹಮದ್ ಅವರು ಪಾರ್ವತಮ್ಮ ಅವರನ್ನು ಕರೆದು 'ಯಜಮಾನ್ರಿಗೆ ಊಟ ಇಷ್ಟವಾಗಿಲ್ವಾ, ಕೋಪ ಬಂತು ಅನಿಸುತ್ತದೆ ಹಾಗಾಗಿ ಕೈ ತೊಳೆದುಕೊಂಡಿಲ್ಲ' ಎಂದು ಹೇಳಿದರಂತೆ ಅದಕ್ಕೆ ಪಾರ್ವತಮ್ಮ ಅವ್ರನ್ನು ಕರೆದು 'ಯೋಚನೆ ಮಾಡಬೇಡಿ ಅವರಿಗೆ ಬಿರಿಯಾನಿ ತುಂಬಾ ಇಷ್ಟವಾಗಿದೆ ಹಾಗಾಗಿ ಅದರೆ ಘಮ ಹೋಗಿ ಬಿಡುತ್ತದೆ ಅನ್ನೋ ಕಾರಣದಿಂದ ಕೈ ತೊಳೆಯದೇ ಕೈ ಒರಸಿಕೊಂಡಿದ್ದಾರೆ' ಎಂದರಂತೆ. ಅಷ್ಟ ಮಟ್ಟಿಗೆ ಊಟದ ಮೇಲೆ ಪ್ರೀತಿ ಮತ್ತು ಗೌರವ ಬೆಳಸಿಕೊಂಡಿದರಂತೆ ಡಾ.ರಾಜ್‌ಕುಮಾರ್.