ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!

Suvarna News   | Asianet News
Published : Oct 31, 2020, 01:30 PM ISTUpdated : Oct 31, 2020, 01:32 PM IST
ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!

ಸಾರಾಂಶ

ಚಿತ್ರರಂಗದಿಂದ ದೂರ ಉಳಿದರೂ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಕನಿಹಾ ಮೊದಲ ಬಾರಿಗೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.  

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜೊತೆ ಅಭಿನಯಿಸಿರುವ ನಟಿ ಕನಿಹಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಾಗೂ ಇಷ್ಟು ವರ್ಷಗಳ ಸಿನಿ ಜರ್ನಿ ಬಗ್ಗೆ ಏನಾದರೂ ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಕನಿಹಾ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ.

ಬಾಡಿ ಶೇಮಿಂಗ್‌ ಮಾಡುವವರ ಬಾಯಿ ಮುಚ್ಚಿಸಿದ ಹಾಸ್ಯ ನಟಿ ಲುಕ್‌ ನೋಡಿ

ಬಾಡಿ ಶೇಮಿಂಗ್ ಬೇಡ:
'ಇದು ನನ್ನ ಹಳೇ ಫೋಟೋ. ಎಲ್ಲರಂತೆ ನಾನೂ ಕೆಲವು ದಿನಗಳಿಂದ ನನ್ನ ಹಳೆ ಫೋಟೋಗಳನ್ನು ನೋಡುತ್ತಿರುವೆ. ಸಣ್ಣ ಹೊಟ್ಟೆ, ಸುಂದರವಾದ ಕೂದಲು ವಾ..ವಾ...! ಆದರೆ ನನಗೆ ಅರಿವಾಗಿದ್ದು ಏನೆಂದರೆ ನಾನು ಹೀಗೆ ಚಿಂತಿಸಲು ಕಾರಣವೇನು? ನಾನು ಹೀಗೆ ಮಾತನಾಡಿಕೊಳ್ಳುವ ಅರ್ಥ ನಾನು ನನ್ನನ್ನು ಒಪ್ಪಿಕೊಂಡಿಲ್ಲ ಎಂದಾ? ಚಾನ್ಸೇ ಇಲ್ಲ. ನಾನು ನನ್ನನ್ನು ತುಂಬಾನೇ ಇಷ್ಟ ಪಡುತ್ತೇನೆ. ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವೂ ಒಪ್ಪಿಕೊಂಡಿರುವೆ. ಎಲ್ಲದರ ಹಿಂದೆ ಒಂದೊಂದು ಕಥೆ ಇದೆ. ಎಲ್ಲವೂ ಪರ್ಫೆಕ್ಟ್ ಆಗಿದ್ದರೆ ಕಥೆ ಹೇಳಲು ಏನೂ ಇರುವುದಿಲ್ಲ ಅಲ್ವಾ? ಮೊದಲು ನಮ್ಮನ್ನು ನಾವು ಒಪ್ಪಿಕೊಳ್ಳಬೇಕು, ಪ್ರೀತಿಸಬೇಕು.  ನಿಮ್ಮನ್ನು ಬೇರೊಬ್ಬರ ಜೊತೆ  ಎಂದೂ ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ಕಥೆ ಇರುತ್ತದೆ. ಒಂದೊಂದು ನೋವುರುತ್ತದೆ. ಯಾರಾದರೂ ನಿಮಗೆ ಬಾಡಿ ಶೇಮ್ ಮಾಡಿದರೆ ಮಿಡಲ್‌ ಫಿಂಗರ್‌ ತೋರಿಸಿ,' ಎಂದು ಬರೆದಿದ್ದಾರೆ.

 

ಸಿನಿ ಜರ್ನಿ:
2005ರಲ್ಲಿ ತಮಿಳು  '5 ಸ್ಟಾರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನಿಕಾ ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಲವೊಂದು ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಕೆಲವು ಚಿತ್ರಗಳಿಗೆ ಡಬ್‌ ಮಾಡಿದ್ದಾರೆ. ಮಲ್ಟಿ ಟ್ಯಾಲೆಂಟೆಂಡ್ ಕನಿಕಾ ಈಗ ಫಿಟ್ನೆನ್‌ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಕಮಲ್‌ ಹಾಸನ್‌ ಪುತ್ರಿ ಅಸಲಿ ಮುಖವಿದು; ಮಾಡಿದ್ದನ್ನು ನಾಚಿಕೆ ಇಲ್ಲದೇ ಒಪ್ಪಿಕೊಂಡ ನಟಿ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?