ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ವಾಹನ ಮತ್ತು 10 ಸಾವಿರ ಮೆಡಿಕಲ್ ಕಿಟ್‌ ನೀಡಿದ ನಟ ಜೆಕೆ ಐರಾವನ್ ತಂಡ!

Suvarna News   | Asianet News
Published : May 17, 2021, 10:48 AM ISTUpdated : May 20, 2021, 03:42 PM IST
ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​  ವಾಹನ ಮತ್ತು 10 ಸಾವಿರ ಮೆಡಿಕಲ್ ಕಿಟ್‌ ನೀಡಿದ ನಟ ಜೆಕೆ ಐರಾವನ್ ತಂಡ!

ಸಾರಾಂಶ

ಐರಾವನ್ ಚಿತ್ರ ತಂಡದಿಂದ ಸಮಾಜಮುಖಿ ಕಾರ್ಯ. ರೋಗಿಗಳ ಸಹಾಯಕ್ಕೆ ನಿಂತ ನಟ ಜಯರಾಮ್ ಕಾರ್ತಿಕ್.

ಕೊರೋನಾ ವೈರಸ್ ಎರಡನೇ ಅಲೆಯಿಂದ ಅದೆಷ್ಟೋ ಮಂದಿ ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ, ಸರಿಯಾದ ಸಮಯದಲ್ಲಿ ಆ್ಯಂಬುಲೆನ್ಸ್ ಸಿಗದೆಯೂ ಜೀವ ಬಿಡುತ್ತಿದ್ದಾರೆ. ಜನರ ಪರಿಸ್ಥಿತಿ ನೋಡಲಾಗದೇ 'ಐರಾವನ್' ಚಿತ್ರತಂಡ ಸಹಾಯಕ್ಕೆ ಮುಂದಾಗಿದೆ. ನಟ ಜಯರಾಮ್ ಕಾರ್ತಿ, ವಿವೇಕ್ ಹಾಗೂ ಅದ್ವಿತಿ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್‌ ಚಿತ್ರತಂಡ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್‌ಗಳನ್ನು ಬ್ಯಾಟರಾಯಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ನೀಡಿದ್ದಾರೆ. ಸುಮಾರು 10 ಸಾವಿರ ಕೋವಿಡ್‌ ಮೆಡಿಕಲ್ ಕಿಟ್ ಹಾಗೂ ಔಷಧಿಗಳನ್ನು ಪೂರೈಸಿದ್ದಾರೆ. ಚಿತ್ರತಂಡದ ಈ ಮಹತ್ವದ ಕೆಲಸ ಇತರರಿಗೂ ಮಾದರಿ ಆಗಲಿದೆ. 

ಕವಿರಾಜ್ 'ಉಸಿರು' ತಂಡದಿಂದ ಉಚಿತ ಆಕ್ಸಿಜನ್ ಕೇರ್ ಸೆಂಟರ್! 

'ದಯವಿಟ್ಟು ನಾವೂ ಹಳ್ಳಿಗಳನ್ನು ನಿರ್ಲಕ್ಷ್ಯಿಸುವುದು ಬೇಡ.  ಸಿಟಿಯಲ್ಲಿರುವವರಿಗಿಂತ ಅವರೇ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿರುವುದು. ಸೋಂಕಿನ ಬಗ್ಗೆ ಅರಿವು ಮೂಡಿಸಿ ನಾವು ಅವರ ಸಹಾಯಕ್ಕೆ ನಿಲ್ಲಬೇಕು. ಈ ಸಮಯಲ್ಲಿ ಹೇಗಿರಬೇಕು, ಏನು ಮಾಡಬೇಕು ಎಂದು ತಿಳಿಸಿ ಹೇಳಬೇಕು,'ಎಂದು ಜೆಕೆ ಬರೆದುಕೊಂಡಿದ್ದಾರೆ. 

ಕನ್ನಡದ ಅನೇಕ ಸ್ಟಾರ್ ನಟರೂ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ನಟ ಉಪೇಂದ್ರ ನೇತೃತ್ವದಲ್ಲಿ ಸಾವಿರಾರು ಜನರಿಗೆ, ಚಿತ್ರತಂಡದ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ನಟ ಅರ್ಜುನ್ ಗೌಡ ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿದ್ದಾರೆ.  ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಎರಡು ಆಕ್ಸಿಜನ್ ಬಸ್‌ಗಳನ್ನು ನೀಡಿದ್ದಾರೆ. ನಟ ಶ್ರೀಮುರಳಿ ದಿನವೂ 5 ಸರ್ಕಾರಿ ಆಸ್ಪತ್ರೆಗಳಿಗೆ ಆಹಾರ ನೀಡುತ್ತಿದ್ದಾರೆ. ನಟಿ ಶುಭಾ ಪೂಂಜಾ ಬಿಗ್ ಬಾಸ್‌ನಿಂದ ಹೊರ ಬಂದ ನಂತರ ಕಟ್ಟಡ ಕಾರ್ಮಿಕರಿಗೆ ಫುಡ್‌ ಕಿಟ್ ವಿತರಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!
ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?