
‘ಮೃತ್ಯುಂಜಯ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುಮನ್ ನಗರ್‌ಕರ್, ‘ಮೃತ್ಯುಂಜಯ ಲಾಕ್‌ಡೌನ್ ನಂತರದ ನನ್ನ ಮೊದಲ ಸಿನಿಮಾ. ಇಂದಿನ ಯುವಕರಲ್ಲಿ ಆತ್ಮಹತ್ಯೆ, ಡಿಪ್ರೆಶನ್‌ನಂಥಾ ಸಮಸ್ಯೆಗಳು ಹೆಚ್ಚುತ್ತಿವೆ. ಈ ಚಿತ್ರದ ನಾಯಕನೂ ಅಂಥದ್ದೊಂದು ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಆತನನ್ನು ಟ್ರೀಟ್ ಮಾಡುವ ಸೈಕಿಯಾಟ್ರಿಸ್ಟ್ ಪಾತ್ರವನ್ನು ನಾನು ಮಾಡುತ್ತಿದ್ದೇನೆ’ ಎಂದರು.
ಮೃತ್ಯುಂಜಯದಲ್ಲಿ ಸೈಕಿಯಾಟ್ರಿಸ್ಟ್ ಆಗಿ ಸುಮನ್ ನಗರ್‌ಕರ್
ನಿರ್ದೇಶಕ ಎಸ್‌ಎಸ್ ಸಜ್ಜನ್ ಮಾತನಾಡಿ, ‘ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಕೇವಲ 192 ಗಂಟೆಗಳಲ್ಲಿ ನಿರಂತರವಾಗಿ ಚಿತ್ರೀಕರಣ ನಡೆಸಲಾಗಿದೆ. ಮಧ್ಯದಲ್ಲೆಲ್ಲೂ ಬ್ರೇಕ್ ತೆಗೆದುಕೊಂಡಿಲ್ಲ. ಇದೊಂದು ಸಸ್ಪೆನ್ಸ್ ಹಾರರ್ ಜಾನರ್‌ನ ಸಿನಿಮಾ. ಇದರ ಹೊರತಾಗಿಯೂ ಸಿನಿಮಾದಲ್ಲಿ ಯುವ ಜನತೆಗೆ ಸ್ಟ್ರಾಂಗ್ ಸಂದೇಶವಿದೆ’ ಎಂದರು.
ನಾಯಕ ಹಿತೇಶ್, ನಾಯಕಿ ಶ್ರೇಯಾ ಶೆಟ್ಟಿ, ನಿರ್ಮಾಪಕಿ ಶೈಲಜಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.