Rashmika Mandanna: ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಬ್ಯಾನ್ ಮಾಡೋದು ಸರಿನಾ, ಜನ ಏನಂತಾರೆ?

By Suvarna NewsFirst Published Nov 26, 2022, 1:21 PM IST
Highlights

ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಅನ್ನೋದು ಕಳೆದ ಎರಡು ದಿನಗಳಿಂದ ಬಿಸಿ ಬಿಸಿ ಚರ್ಚೆ ಆಗ್ತಿರೋ ಸುದ್ದಿ. ಅಷ್ಟಕ್ಕೂ ಹೀಗೆ ನಟಿಯೊಬ್ಬಳನ್ನು ಬ್ಯಾನ್ ಮಾಡೋದು ಸರೀನಾ? ಜನ ಏನಂತಿದ್ದಾರೆ?

ನ್ಯಾಶನಲ್ ಕ್ರಶ್ ಅಂತಲೇ ರಾಷ್ಟ್ರಮಟ್ಟದಲ್ಲಿ ಫೇಮಸ್ ಆಗಿರೋ ನಟಿ ರಶ್ಮಿಕಾ ಮಂದಣ್ಣ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈ ಬೆಡಗಿ ಆಮೇಲೆ ಸೌತ್‌ ಇಂಡಿಯನ್‌ ಇಂಡಸ್ಟ್ರಿಯಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹುಡುಗಿ ಬಗ್ಗೆ ಆರಂಭದಿಂದಲೂ ಕನ್ನಡಿಗರಿಗೆ ಅಸಮಾಧಾನ ಇದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದ್ಯಕ್ಕೀಗ ಈ ನಟಿಯನ್ನು ಕನ್ನಡ ಇಂಡಸ್ಟ್ರಿಯಲ್ಲಿ ಬ್ಯಾನ್ ಮಾಡಲಾಗಿದೆ ಅನ್ನೋ ಮಾತುಗಳಿವೆ. ಆದರೆ ಒಬ್ಬ ನಟಿಯನ್ನು ಬ್ಯಾನ್ ಮಾಡೋದು ಎಷ್ಟು ಸರಿ? ಆಕೆಯನ್ನು ಬ್ಯಾನ್ ಮಾಡೋದಕ್ಕೆ ನಿರ್ದಿಷ್ಟವಾದ ಒಂದು ಕಾರಣ ಇದೆಯಾ ಅನ್ನೋ ವಾದಗಳೂ ಕೇಳಿ ಬರುತ್ತಿವೆ.

ಹಿಂದೊಮ್ಮೆ ನಟನೊಬ್ಬ ಮಾಡಿದ ಅವಾಂತರಕ್ಕೆ ನಟಿಯನ್ನು ಹೊಣೆ ಮಾಡುವ ಹೊಣೆಗೇಡಿತನವೂ ನಡೆದಿತ್ತು ಅನ್ನೋ ಬಗೆಯ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ರಶ್ಮಿಕಾ ಅವರನ್ನು ಜನ ಸುಮ್ಮ ಸುಮ್ಮನೆ ಬೈಯುತ್ತಿಲ್ಲ, ಆಕೆಯ ವರ್ತನೆಗಳೂ ಹಾಗೇ ಇವೆ ಅಂತ ಒಂದಿಷ್ಟು ಜನ ವಿಶ್ಲೇಷಿಸುತ್ತಾರೆ. ಅಷ್ಟಕ್ಕೂ ರಶ್ಮಿಕಾ ಬಗೆಗಿರೋ ಕಂಪ್ಲೇಟ್ ಗಳೇನು?

ರಶ್ಮಿಕಾ ಬಗ್ಗೆ ಸದ್ಯ ಕನ್ನಡಿಗರ ಆಕ್ರೋಶ ಹೆಚ್ಚಾಗೋದಕ್ಕೆ ಬಹುಮುಖ್ಯ ಕಾರಣ ಸಂದರ್ಶನವೊಂದರಲ್ಲಿ ಅವರ ಅಸಡ್ಡಾಳ ವರ್ತನೆ. ತನ್ನ ಸಿನಿ ಜರ್ನಿಯ ಕುರಿತು ಮಾತನಾಡುವಾಗ ಅವರು, ತಮ್ಮ ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ಹೆಸರು ತೆಗೆದು ಪರಂವಃ ಸ್ಟುಡಿಯೋಸ್‌ ಹೆಸರು ಹೇಳದೆ ಬರೀ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದರು. ಜೊತೆಗೆ ತನಗಿಷ್ಟವಿಲ್ಲದಿದ್ದೂ ಈ ಸಿನಿಮಾಕ್ಕೆ ತನ್ನನ್ನು ಬಲವಂತದಿಂದ ಒಪ್ಪಿಸಲಾಗಿತ್ತು ಎಂದಿದ್ದರು. ಇಷ್ಟ ಇಲ್ಲ ಅಂದ ಮೇಲೆ ಬಲವಂತ ಮಾಡಿದರೂ ಯಾಕೆ ಮಣಿಯಬೇಕಿತ್ತು ಅನ್ನುವ ಆಕ್ರೋಶದ ಮಾತುಗಳು ಕೇಳಿಬಂದವು. ಜೊತೆಗೆ ಇದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು. ಸಿನಿ ರಂಗಕ್ಕೆ ರಶ್ಮಿಕಾ ಪ್ರವೇಶಿಸಲು ಕಾರಣವಾದ ಪ್ರೋಡಕ್ಷನ್‌ ಹೌಸ್‌ ಹೆಸರು ಹೇಳದ ಕಾರಣ ಅಭಿಮಾನಿಗಳ ಮನಸ್ಸಿಗೂ ನೋವಾಗಿತ್ತು.

ಇದನ್ನೂ ಓದಿ: ಯುವತಿಯ ಆಡಿಯೋ ವೈರಲ್ ವಿಚಾರ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ನಟ ವಿದ್ಯಾಭರಣ

ರಶ್ಮಿಕಾಗೆ ತನ್ನ ನೆಲದ ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಇಲ್ಲ ಅನ್ನೋದು ಅವರ ಮೇಲಿರೋ ಇನ್ನೊಂದು ಕಂಪ್ಲೇಂಟ್. ಕನ್ನಡದ ಸಿನಿರಂಗದಿಂದಲೇ ಬೆಳೆದು ಮೇಲಕ್ಕೆ ಬಂದಿದ್ದರೂ ವೇದಿಕೆಗಳಲ್ಲಿ ಆಕೆ ಕನ್ನಡ ಮಾತನಾಡಿಲ್ಲ, ಮಾತಾಡೋ ಪ್ರಯತ್ನವನ್ನೇ ಮಾಡಲಿಲ್ಲ. ಕೆಲವು ಸಂದರ್ಶನಗಳಲ್ಲಿ ಕನ್ನಡ ಮಾತನಾಡಲು ಕಷ್ಟ ಎಂದು ಹೇಳಿದ್ದರು. ಆದರೆ ತೆಲುಗು ಭಾಷೆಯನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದರು. ಕನ್ನಡಾಭಿಮಾನ ಮೆರೆಯಬೇಕಿದ್ದ ಕನ್ನಡದ ಹುಡುಗಿ ತನ್ನತನವನ್ನೇ ಮರೆತು ತೆಲುಗು, ತಮಿಳು ಭಾಷೆಯ ಮೇಲೆ ಒಲವು ತೋರಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು.

ಇದೆಲ್ಲ ಸರಿ, ಇದೆಲ್ಲ ಆಕೆಯ ವೈಯುಕ್ತಿಕ ವಿಚಾರಗಳು. ಒಂದು ಭಾಷೆಯನ್ನು ಮಾತಾಡೋದು ಬಿಡೋದು ಆಕೆಗೆ ಸಂಬಂಧಿಸಿದ ವಿಚಾರ. ಇನ್ನು ತಾನು ನಟಿಸಿರೋ ಸಿನಿಮಾದ(Movie) ಹೆಸರು ಹೇಳಲೇ ಬೇಕು ಅನ್ನೋ ರೂಲ್ಸ್(Rules) ಏನೂ ಇಲ್ಲ. ಆಕೆಗೆ ಇಷ್ಟವಿದ್ದರೆ ಹೇಳಬಹುದು, ಇಲ್ಲದಿದ್ದರೆ ಬಿಡಬಹುದು. ಆಟಿಟ್ಯೂಡ್(Atittude) ತೋರಿಸೋದು ಕೂಡ ಆಕೆಯ ಪರ್ಸನಲ್ ಸಂಗತಿ. ಇದೇ ಕಾರಣ ಇಟ್ಟುಕೊಟ್ಟು ನಟಿಯೊಬ್ಬಳಿಗೆ ಬ್ಯಾನ್ ಮೂಲಕ ಅವಮಾನ ಮಾಡೋದು ಎಷ್ಟು ಸರಿ? ನಮ್ಮಲ್ಲಿ ಕೆಲವು ನಟರು ಕೆಟ್ಟದಾಗಿ ಮಾತನಾಡಿ, ಸೆಟ್(Set) ನಲ್ಲಿ ಹೊರಗೆ ದೌರ್ಜನ್ಯ ಮಾಡಿದ್ದೆಲ್ಲ ಇದೆ, ಅಂಥವರ ಬಗ್ಗೆ ಚಕಾರ ಎತ್ತದೇ ನಟಿಯೊಬ್ಬಳನ್ನು ಟಾರ್ಗೆಟ್ ಮಾಡೋದು ಎಷ್ಟು ಸರಿ? ಅದೂ ಸರಿಯಾದ ಒಂದೂ ಕಾರಣ ಇಲ್ಲದೇ ಬಾಯ್‌ಕಾಟ್ ಅಸ್ತ್ರ ಪ್ರಯೋಗಿಸೋದು ಸರಿನಾ ಅನ್ನೋ ರೀತಿಯ ಮಾತುಗಳೂ ಇವೆ.

ಇದನ್ನೂ ಓದಿ: ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಜೊತೆ ನಾಗ ಚೈತನ್ಯ ಫೋಟೋ ವೈರಲ್; ಕನ್ಫರ್ಮ್ ಎಂದ ನೆಟ್ಟಿಗರು

ಬಾಯ್‌ಕಾಟ್ ಇದ್ದರೂ ಇರದಿದ್ದರೂ ತಾನು ಇನ್ನು ಕನ್ನಡ ಸಿನಿಮಾಗಳಲ್ಲಿ ನಟಿಸೋ(Act) ಸಾಧ್ಯತೆ ಕಡಿಮೆ ಅಂತ ಹಿಂದೊಮ್ಮೆ ಈ ನಟಿಯೇ ಹೇಳಿದ್ದರು. ಬಹುಶಃ ಈ ಬಾಯ್‌ಕಾಟ್(Ban) ಅಸ್ತ್ರ ಆಕೆಯ ಮೇಲೇನೂ ಪರಿಣಾಮ ಬೀರದು ಅನ್ನೋ ಮಾತುಗಳೂ ಇವೆ.

click me!