
ನಟ, ನಿರ್ದೇಶಕ ಎಸ್ ಮಹೇಂದರ್ ಅವರು ಎರಡನೇ ಮದುವೆಯಾಗಿದ್ದಾರೆ. ಈಗ ಮೊದಲ ಪತ್ನಿ ಮಗಳು ಗೌರಿ ಹಾಗೂ ಎರಡನೇ ಪತ್ನಿಯ ನಡುವಿನ ಸಂಬಂಧದ ಬಗ್ಗೆ Beyond Limits ಎನ್ನುವ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
“ನನ್ನ ಎರಡನೇ ಹೆಂಡತಿ ಯಶೋದಾ ಯಾರ ಜೊತೆ ಮಾತಾಡುವಾಗ ನಾನು ನನ್ನ ಗೌರಿಯಿಂದ ಕಲಿತೆ ಅಂತಾಳೆ. ಯಶೋದಾ ತುಂಬಾ ಚೆನ್ನಾಗಿ ಓದಿದ್ದಾಳೆ, ತುಂಬಾ ತಿಳ್ಕೊಂಡಿದ್ದಾಳೆ. ಇವತ್ತಿನವರೆಗೂ ಒಂದು ಅಕ್ಷರ ಕೂಡ ನನ್ನ ಮೊದಲ ಮದುವೆ ಬಗ್ಗೆ ನೆಗೆಟಿವ್ ಆಗಿ ಮಾತಾಡಿಲ್ಲ, ಮಾತಾಡೋದಿಲ್ಲ. ನಾವೇ ಒಂದು ಬರೆಯುತ್ತೇವೆ, ಭಗವಂತನೇ ಅವನು ಇನ್ನೊಂದು ಬರೀತಾನೆ. ಯಾರು ಯಾರು ಎಲ್ಲೆಲ್ಲಿ ಜೊತೆ ಸೇರಿ ಎಷ್ಟು ದೂರ ನಾವು ಹೋಗಬೇಕು? ಎಲ್ಲೆಲ್ಲಿ ಯಾರ್ಯಾರು ಇಳ್ಕೊಬೇಕು? ಎಲ್ಲವೂ ಋಣ ಅಂದುಬಿಡ್ತೀನಿ. ಇಲ್ಲಿ ಸೇರೋದು ಋಣ, ಆಚೆ ಹೋಗಿ ಏನಾದರು ತಿನ್ನೋದು ಋಣ, ಸಿಕ್ಕದೆ ಇರೋದು ಋಣ. ಯಾರು ಬೇಕು ಅಂತಲೂ ಮಾಡಲ್ಲ” ಎಂದು ಎಸ್ ಮಹೇಂದರ್ ಅವರು ಹೇಳಿದ್ದಾರೆ.
ಗೌರಿಯಿಂದ ಕಲಿತೆ ಎನ್ನುತ್ತಾಳೆ, ತಾಳ್ಮೆ ಕಲಿತೆ ಎನ್ನುತ್ತಾಳೆ, ಇನ್ನೊಬ್ಬರ ಜೊತೆ ಹೆಂಗೆ ಬಿಹೇವ್ ಮಾಡಬೇಕು? ಒಬ್ಬರ ಜೊತೆ ಪ್ರೀತಿಯಿಂದ ಮಾತಾಡಿಸಬೇಕು ಅನ್ನೋದನ್ನು ನಾನು ಕಲ್ತಿದ್ದೀನಿ ಎಂಉದ ಯಶೋದಾ ಹೇಳುತ್ತಾಳೆ. ನನ್ನ ಮಗನಿಗೆ ಅಕ್ಕನ ನೋಡಿ ಕಲಿತುಕೋ ಎಂದು ಯಶೋದಾ ಹೇಳ್ತಾಳೆ. ಅಂಥ ಮಗಳು ನನ್ನ ಗೌರಿ ಎಂದು ಮಹೇಂದರ್ ಹೇಳಿದ್ದಾರೆ.
ಗೌರಿ ನಮ್ಮ ಮನೆಗೆ ಬಂದರೆ ನಮಗೆಲ್ಲ ಅಡುಗೆ ಎಲ್ಲ ಮಾಡಿ ಊಟ ಹಾಕ್ತಾಳೆ. ಅವಳು ನಮ್ಮ ಮನೆಯಲ್ಲೂ ಫ್ರೀ ಆಗಿದ್ದಾಳೆ, ಹಾಗೆ ಇರೋಕೆ ಬಿಟ್ಟಿದ್ದೇವೆ. ನನ್ನ ಕಡೆಯಲ್ಲಿ ತುಂಬ ಸಂಬಂಧಿಕರಿದ್ದಾರೆ, ಹೀಗಾಗಿ ನಮ್ಮ ಮನೆಯ ಕಾರ್ಯಕ್ರಮಗಳಿಗೂ ಗೌರಿ ಬರುತ್ತಾಳೆ. ನನ್ನ ಹುಟ್ಟುಹಬ್ಬ, ನನ್ನ ಮಗನ ಹುಟ್ಟುಹಬ್ಬ ಎಂದು ಗೌರಿ ಯಾವುದಕ್ಕೂ ಮಿಸ್ ಮಾಡೋದಿಲ್ಲ. ನನ್ನ ಎರಡನೇ ಪತ್ನಿ ಯಶೋದಾ ಹಾಗೂ ಮಗಳು ಗೌರಿ ಮೂರು ಹೊತ್ತು ಫೋನ್‌ನಲ್ಲಿ ಮಾತನಾಡುತ್ತಾರೆ ಎಂದು ಮಹೇಂದರ್ ಹೇಳಿದ್ದಾರೆ.
ನನ್ನ ಕಂಡರೆ ಗೌರಿಗೆ ತುಂಬ ಇಷ್ಟ. ಮನೆಗೆ ಬರುವಾಗ ಮಗನಿಗೆ ಚಾಕೋಲೇಟ್ ತರುತ್ತಾಳೆ, ನನ್ನ ಎರಡನೇ ಹೆಂಡ್ತಿ ಸಸ್ಯಾಹಾರಿ. ಹೀಗಾಗಿ ಗೌರಿಯನ್ನು ಬಿರಿಯಾನಿ ತಿನಿಸೋಕೆ ಹೊರಗಡೆ ಕರೆದುಕೊಂಡು ಹೋಗ್ತೀನಿ. ಗೌರಿ ಮನೆಗೆ ಬಂದರೆ ನಮಗೆ, ನನ್ನ ಹೆಂಡ್ತಿಗೆ ತುಂಬ ಖುಷಿ ಎಂದು ಎಸ್ ಮಹೇಂದರ್ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.