
ಸ್ಯಾಂಡಲ್‌ವುಡ್ ನಿರ್ದೇಶಕ ರವಿ ಶ್ರೀವತ್ಸ 'ಎಂಆರ್' ಹೆಸರಿನಲ್ಲಿ ಮುತ್ತಪ್ಪ ರೈ ಅವರ ಬದುಕನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಮೂರು ಭಾಗಗಳಲ್ಲಿ ಸಿನಿಮಾ ಆಗಲಿದೆ ಎಂದು ತಿಳಿಸಿದ್ದರು. ಆದರೆ ಸಿನಿಮಾ ಮಾಡುವ ಬಗ್ಗೆ ಆಕ್ಷೇಪ ಎದುರಾದ ಕಾರಣ ಚಿತ್ರೀಕರಣ ನಿಲ್ಲಿಸಿದ್ದಾರೆ. ಈ ನಡುವೆ ತಮ್ಮ ಮುಂದಿನ ಸಿನಿಮಾವನ್ನು ಕೈಗೆತ್ತುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿದರು. ‘ಈ ಹಿಂದಿನ ಡಿಆರ್ ಚಿತ್ರದ ಸ್ಕ್ರೀಪ್ಟ್ ಅನ್ನು ಪಕ್ಕಕ್ಕಿಟ್ಟು, ಈ ಸಿನಿಮಾ ಕೈಗೆತ್ತಿಕೊಂಡಿರುವೆ. ಇಂದಲ್ಲ ನಾಳೆ ಆ ಸಿನಿಮಾ ಮಾಡುವುದು ಖಂಡಿತಾ. ಇದೀಗ ಕೈಗೆತ್ತಿಕೊಂಡಿರುವ ಡೆಡ್ಲಿ 3 ಸಿನಿಮಾ, ಡೆಡ್ಲಿ ಸೋಮದ ಸೀಕ್ವೆಲ್ ಆಗಿದೆ. ಎರಡನೇ ಸಿನಿಮಾದಲ್ಲಿ ನಾಯಕ ಸತ್ತು ಹೋಗುತ್ತಾನೆ. ಅವನ ಮಗ ಈ ಡೆಡ್ಲಿ 3 ಚಿತ್ರದ ನಾಯಕ. ಆ ಪಾತ್ರವನ್ನು ಹೊಸ ನಟ ದೀಕ್ಷಿತ್ ನಿರ್ವಹಿಸುತ್ತಿದ್ದಾರೆ. ಈಗ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ,’ ಎಂದಿದ್ದಾರೆ.
ಥ್ರಿಲ್ಲರ್ ಮಂಜು ಹೊಸ ನಟನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ನಾಯಕ ದೀಕ್ಷಿತ್ ಈ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡಿದರು. ನಿರ್ಮಾಪಕರಾದ ಶೋಭಾ ರಾಜಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.