
ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ ಚಿರು ನೆನಪಿನಲ್ಲಿ ದಿನ ಕಳೆಯುತ್ತಿರುವ ಕುಟುಂಬಸ್ಥರು ಆತನ ಜೊತೆ ಕಳೆದ ಅಮೂಲ್ಯ ಕ್ಷಣಗಳ ವಿಡಿಯೋ ಮತ್ತು ಪೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ನಗು ಮುಖದ ಚಿರು ಅವರನ್ನು ಅಪರೂಪದ ಭಾವಚಿತ್ರಗಳನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ಪರಮಶ್ರೇಷ್ಠ ನಟನಾಗಿ, ಉತ್ತಮ ಸಹೋದರನಾಗಿ, ಅದ್ಭುತ ಮಗನಾಗಿ, ಬೆಸ್ಟ್ ಪತಿಯಾಗಿದ್ದವ ಚಿರಂಜೀವಿ. ಇನ್ನು ಅಣ್ಣ-ತಮ್ಮನ ಸಂಬಂಧದ ಬಗ್ಗೆ ಹೇಳಿವುದೇ ಬೇಡ, ರಾಮ ಲಕ್ಷ್ಮಣನಂತೆ ಇದ್ದವರು. ಧ್ರುವ ಮದುವೆಯಲ್ಲೂ ಚಿರು- ಮೇಘನಾನೇ ಧಾರೆ ಮಾಡಿದವರು. ಧ್ರುವ ಪತ್ನಿ ಪ್ರೇರಣಾಳನ್ನು ಬಾಲ್ಯದಿಂದಲೂ ನೋಡಿರುವ ಚಿರು ಬೆಸ್ಟ್ ಫ್ರೆಂಡ್‌ನಂತಿದ್ದರು. ಪ್ರತಿಷ್ಠಿತ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಪ್ರೇರಣಾ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡವರಲ್ಲ ಅಥವಾ ಯಾವುದೇ ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡಿದವರಲ್ಲ. ಆದರೀಗ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ತುಂಬಾನೇ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಚಿರು ಜೊತೆಗಿನ ಫೋಟೋ ಶೇರ್ ಮಾಡಿದ ಪ್ರೇರಣಾ ಅಮೂಲ್ಯ ಕ್ಷಣದ ವಿಡಿಯೋವೊಂದನ್ನು ಕೂಡ ಭಾವುಕ ಪದಗಳಲ್ಲಿ ವರ್ಣಿಸಿ ಹಂಚಿಕೊಂಡಿದ್ದಾರೆ. ಮನೆಯಲ್ಲಿ ತಮಾಷೆ ಮಾಡಿಕೊಂಡು ಸಮಯ ಕಳೆಯುವಾಗ ಚಿರು ಜೊತೆ ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
' ಈ ವಿಡಿಯೋವನ್ನು ನಾವು ತಮಾಷೆಗಾಗಿ ಮಾಡಿದ್ದು, ಇದನ್ನು ಪೋಸ್ಟ್ ಮಾಡುತ್ತೇನೆ ಅಂತ ಎಂದೂ ಅಂದುಕೊಂಡಿರಲಿಲ್ಲ. ಆದರೆ ಇದು ನನ್ನ ಬಳಿ ಇರುವ ಅಮೂಲ್ಯವಾದ ವಿಡಿಯೋ ಇದು' ಎಂದು ಪ್ರೇರಣಾ ಬರೆದುಕೊಂಡಿದ್ದಾರೆ.
ಜೇನುಗೂಡಿನಂತಿರುವ ಈ ಕುಟುಂಬ ಲಾಕ್‌ಡೌನ್ ಸಮಯದಲ್ಲಿ ಇನ್‌ಡೋರ್ ಗೇಮ್‌ಗಳನ್ನು ಆಡುತ್ತಾ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲದೆ ವರ್ಕೌಟ್ ಮಾಡುವಾಗ ಚಿರು ಚಿತ್ರೀಕರಿಸಿದ ವಿಡಿಯೋದಲ್ಲಿ ಪ್ರೇರಣ ಕಾಣಿಸಿಕೊಂಡಿದ್ದಾರೆ. ಆಪ್ತ ಸ್ನೇಹಿತ ಪನ್ನಗಾಭರಣ ದಿನವೂ ಚಿರು ನೆನಪಿನಲ್ಲಿ ಪೋಟೋಗಳನ್ನು ಶೇರ್ ಮಾಡುತ್ತಲ್ಲೇ ಇರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.