
'ಬಜಾರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಧನ್ವೀರ್ ಸಂಕಷ್ಟದ ನಡುವೆಯೂ ನಿರಂತರವಾಗಿ ಸೇವೆ ಮುಂದುವರೆಸುತ್ತಿರುವ ನಿಸ್ವಾರ್ಥ ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕೆಲ ತಿಂಗಳುಗಳ ಹಿಂದೆ ಪೌರ ಕಾರ್ಮಿಕರ ಕಾಲು ತೊಳೆದಿದ್ದರು ಹಾಗೆಯೇ ಐದು ಮಹಿಳಾ ಪೌರ ಕಾರ್ಮಿಕರ ಕಾಲು ತೊಳೆದು ಶಾಲು ಹೊದಿಸಿದ ನಟ ಧನ್ವೀರ್ ಗೆ ಪೌರ ಕಾರ್ಮಿಕರು ಆಶೀರ್ವಾದ ಮಾಡಿದ್ದಾರೆ. ಈ ಬಗ್ಗೆ ನಟ ಧನ್ವೀರ್ ಖಾಸಗಿ ವೆಬ್‌ಸೈಟ್ ವೊಂದರಲ್ಲಿ ಮಾತನಾಡಿದ್ದಾರೆ.
ಹೆಚ್ಚಾಗಿ ಅಧ್ಯಾತ್ಮದ ಪುಸ್ತಕಗಳನ್ನು ಓದುವ ಧನ್ವೀರ್ ಪೌರ ಕಾರ್ಮಿಕರ ವರ್ಗ ತುಂಬ ಶ್ರೇಷ್ಠ ಎಂದು ತಿಳಿದು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಪಾದ ಪೂಜೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ತಮ್ಮ 'ಬಂಪರ್' ಚಿತ್ರದ ಟೀಸರ್‌ನನ್ನು ಬರ್ತಡೇ ದಿನ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಕೇವಲ 10 ದಿನಗಳ ಶೂಟಿಂಗ್ ಬಾಕಿ ಉಳಿದಿದ್ದು ಕೊರೋನಾ ಸೋಂಕು ಕಡಿಮೆಯಾದ ಮೇಲೆ ಚಿತ್ರೀಕರಣ ಪ್ರಾರಂಭಿಸಬೇಕು ಎಂದು ನಿರ್ಧರಿಸಿದ್ದಾರೆ.
"
ಸಿಕ್ಕಾಪಟ್ಟೆ ಫೀಮೇಲ್ ಫ್ಯಾನ್ಸ್ ಹೊಂದಿರುವ ಧನ್ವೀರ್‌ರನ್ನು ತೆರೆ ಮೇಲೆ ಆದಷ್ಟು ಬೇಗ ನೋಡಬೇಕು ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. 'ಬಜಾರ್' ಚಿತ್ರದಲ್ಲಿ ಶೋಕ್ದಾರ್ ಆಗಿದ್ದ ಧನ್ವೀರ್ ಬಂಪರ್‌ನಲ್ಲಿ ಹೇಗಿರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.