ಪಬ್ಲಿಕ್‌ನಲ್ಲಿ ಪತ್ನಿ ಸೀರೆ ನೆರಿಗೆ ಸರಿ ಮಾಡಿದ ದಿಗಂತ್!

Suvarna News   | Asianet News
Published : Feb 28, 2020, 01:05 PM IST
ಪಬ್ಲಿಕ್‌ನಲ್ಲಿ ಪತ್ನಿ ಸೀರೆ ನೆರಿಗೆ ಸರಿ ಮಾಡಿದ ದಿಗಂತ್!

ಸಾರಾಂಶ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಡೆಸಿದ ಸನ್ಮಾನ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವಿದ್ಯಾರ್ಥಿನಿಯೊಬ್ಬಳ ಕೋಟ್ ಸರಿ ಮಾಡಿದ ವೀಡಿಯೋ ವೈರಲ್ ಆದರೆ, ನಮ್ಮ ಮಲೆನಾಡ ಹುಡುಗ ದಿಗಂತ್, ಮಡದಿಯ ಸೆರಗು ಸರಿ ಮಾಡಿದ ವೀಡಿಯೋ ಸಹ ವೈರಲ್ ಆಗುತ್ತಿದೆ. ಏನಿದೆ ಈ ವೀಡಿಯೋದಲ್ಲಿ?

ಸ್ಯಾಂಡಲ್‌ವುಡ್‌ ದೂದ್‌ ಪೇಡಾ ದಿಗಂತ್‌ ಹಾಗೂ ಪತ್ನಿ ಐಂದ್ರಿತಾ ರೇ ದಿನೇ ದಿನೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋದು. ದಿನಕ್ಕೊಂದು ಪ್ಲೇಸ್‌ಗೆ ಹೋಗಿ ವಿಭಿನ್ನ ನಮೂನೆಯ ಫೋಟೋ ಹಾಕಿ, ಅಭಿಮಾನಿಗಳ ತಲೆಯಲ್ಲಿ ಹುಳ ಬಿಡೋ ಕೆಲಸ ಮಾಡುವ ಈ ಜೋಡಿಯ ವೀಡಿಯೊವೊಂದು ಇದೀಗ ಮತ್ತೆ ವೈರಲ್ ಆಗಿದೆ. 

ಕೆಲವು ದಿನಗಳ ಹಿಂದೆ ಇಶಾ ಪೌಂಡೇಷನ್‌ ನಡೆಸಿದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಈ ಕ್ಯೂಟ್‌ ಕಪಲ್‌, ಖಾದಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತ ಬಣ್ಣದ ಜುಬ್ಬಾ ಪೈಜಾಮಾದಲ್ಲಿ ದಿಗಂತ್‌ ಹಾಗೂ ಕಾಟನ್‌ ಎಲಿಫೆಂಟ್ ಪ್ರಿಂಟೆಂಡ್ ಸೀರೆಯಲ್ಲಿ ಐಂದ್ರಿತಾ ಕಂಗೊಳ್ಳಿಸುತ್ತಿದ್ದರು. ಭಕ್ತಿ ಪರವಶರಾದ ಶಿವ ಭಕ್ತರ ನಡುವೆಯೇ ಈ ಜೋಡಿ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ದು ಸುಳ್ಳಲ್ಲ.

ಇದೇನಾಯ್ತಪ್ಪಾ! ಮದ್ವೆ ಆದ್ಮೇಲೆ ಐಂದ್ರಿತಾ ಬಿಕಿನಿ ಲುಕ್‌ಗೆ ಬಂದ್ಬಿಟ್ರು!

ಈ ವೇಳೆ ದಿಗಂತ್ ಐಂದ್ರಿತಾ ಸೀರೆ ನೆರಿಗೆ ಸೀರೆ ಸರಿ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಪಂಚರಂಗಿ' ಚಿತ್ರದಲ್ಲಿ ಯಾರು ಸೀರೆ ಉಡಿಸುವುದನ್ನು ಇಷ್ಟ ಪಟ್ಟರೋ, ಅವರಿಗೀಗ ಕಲಿತ ಸ್ಕಿಲ್ ಉಪಯೋಗಕ್ಕೆ ಬರುತ್ತಿದೆ,' ಎಂದು ಐಂದ್ರಿತಾ ಬರೆದು ಕೊಂಡಿದ್ದಾರೆ.

ಡಿಸೆಂಬರ್ 13,2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯನ್ನು ತೆರೆ ಮೇಲೆ ಯಾವಾಗ ಕಾಣುತ್ತೇವೋ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೊಂದು ಸಂತೋಷದ ಸುದ್ದಿ ಇದೆ. ಸತಿ-ಪತಿ ಇಬ್ಬರೂ ಒಟ್ಟಾಗಿ ಹಾಸ್ಯ ಪ್ರಧಾನ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ, ಈ ಚಿತ್ರದ ಚಿತ್ರೀಕರಣ ಮಲೆನಾಡಿನಲ್ಲಿಯೇ ನಡೆಯಲಿದ್ದು ದಿಗಂತ್ ಅಡಿಕೆ ಕೃಷಿಕನಾಗಿಯೇ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ತಂಡ. ಆದರೆ, ಐಂದ್ರಿತಾ ಪಾತ್ರದ ಬಗ್ಗೆ ಇನ್ನೂ ಏನೂ ಬಹಿರಂಗಗೊಂಡಿಲ್ಲ.

ಗಂಡನೊಂದಿಗೆ ಹಾಟ್ ಪೋಟೋ ಹಂಚಿಕೊಂಡ ಐಂದ್ರಿತಾ ಕೊಟ್ಟ ಟಾಸ್ಕ್!

ಮನಸಾರೆ, ಪಾರಿಜಾತ ಚಿತ್ರದಲ್ಲಿ ನಟಿಸಿದ ಮಲೆನಾಡ ಹುಡುಗ, ಬೆಂಗಾಲಿ ಬೆಡಗಿಯ ಜೋಡಿ ಇದೀಗ ದಂಪತಿಯಾಗಿದ್ದು, ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವ ನಿರೀಕ್ಷೆ ಇದೆ. ನೋಡೋಣ ಹೇಗಿರುತ್ತೆ ಚಿತ್ರವೆಂದು. ಒಟ್ಟಾರೆ ಈ ಜೋಡಿಗೆ ಶುಭವಾಗಲಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ