ದಶಕಗಳ ಹಿಂದಿನ ಈ ಫೋಟೋದಲ್ಲಿ ತಾರಾ, ಮಾಲಾಶ್ರೀ ಜೊತೆ ಇರೋ ಬಾಲೆ ಯಾರು ಗೆಸ್ ಮಾಡ್ತೀರಾ?

Published : Aug 22, 2024, 11:41 AM ISTUpdated : Aug 22, 2024, 11:45 AM IST
ದಶಕಗಳ ಹಿಂದಿನ ಈ ಫೋಟೋದಲ್ಲಿ ತಾರಾ, ಮಾಲಾಶ್ರೀ ಜೊತೆ ಇರೋ ಬಾಲೆ ಯಾರು ಗೆಸ್ ಮಾಡ್ತೀರಾ?

ಸಾರಾಂಶ

ನಟಿ ತಾರಾ ಅನುರಾಧಾ ಅವರು ಶೇರ್ ಮಾಡಿಕೊಂಡಿರುವ ಆ ಹಳೆಯ ಫೋಟೋದಲ್ಲಿ ಯಾರೆಲ್ಲಾ ಇದ್ದಾರೆ? ಯಾವ ಸಮಯದಲ್ಲಿ ಯಾರು ಕ್ಲಿಕ್ಕಿಸಿದ ಫೋಟೋ ಅದು? ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ.. ಈ ಬಗ್ಗೆ ಸ್ವತಃ ನಟಿ ತಾರಾ ಅವರೇ ಬರೆದು ಪೋಸ್ಟ್ ಮಾಡಿದ್ದಾರೆ...

ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧಾ (Tara Anuradha) ಅವರು ಹಳೆಯ ಫೋಟೋ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ಹಳೆಯ ಮಧುರ ನೆನಪನ್ನು ಜಗತ್ತಿನಾದ್ಯಂತ ಇರುವ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಂದಿನ ಕಾಲದ ಕನಸಿನ ರಾಣಿ ಸೂಪರ್ ಸ್ಟಾರ್ ಇದ್ದಾರೆ, ಅಪ್ಪಟ ಕನ್ನಡತಿಯರಾದ ಕಲಾವಿದೆಯರು, ಸ್ಟಾರ್ ನಟಿಯರು ಇದ್ದಾರೆ. ಜೊತೆಗೆಒಬ್ಬ ಪುಟಾಣಿ ಕೂಡ ಇದ್ದಾರೆ. 

ನಟಿ ತಾರಾ ಅನುರಾಧಾ ಅವರು ಶೇರ್ ಮಾಡಿಕೊಂಡಿರುವ ಆ ಹಳೆಯ ಫೋಟೋದಲ್ಲಿ ಯಾರೆಲ್ಲಾ ಇದ್ದಾರೆ? ಯಾವ ಸಮಯದಲ್ಲಿ ಯಾರು ಕ್ಲಿಕ್ಕಿಸಿದ ಫೋಟೋ ಅದು? ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ.. ಈ ಬಗ್ಗೆ ಸ್ವತಃ ನಟಿ ತಾರಾ ಅವರೇ ಬರೆದು ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿ ಅವರ ಹಾಗೂ ಫೋಟೋದಲ್ಲಿದ್ದರವರ ಅಭಿಮಾನಿಗಳು ಖುಷಿಯಾಗಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ತಾರಾ ಅನುರಾಧಾ ಅವರು, ಸ್ಪಷ್ಟವಾಗಿ, ಚೆಂದವಾಗಿ ಹೀಗೆ ಬರೆದುಕೊಂಡಿದ್ದಾರೆ..

ನಮ್ಮ ಜೊತೆ ಇರುವ ಈ ಪುಟ್ಟ ಪುಟಾಣಿ ಶ್ರೀಮತಿ ಶ್ರುತಿ ರವರ ಪುತ್ರಿ ಕುಮಾರಿ ಗೌರಿ... ಕನ್ನಡ ಚಿತ್ರರಂಗ ಕಂಡ 75 ವರ್ಷಗಳ ಸಂಭ್ರಮ ಆಚರಣೆಯ ಸಮಾರಂಭದ ಮನೋರಂಜನೆ ಕಾರ್ಯಕ್ರಮದ ತಾಲೀಮು ದಿನಗಳಲ್ಲಿ ಶೃತಿ ರವರ ಮನೆಯಲ್ಲಿ ಶ್ರುತಿ ರವರೇ ತೆಗೆದ ಈ ಭಾವಚಿತ್ರ... ಶ್ರೀಮತಿ ಸುಧಾರಾಣಿ,,, ಶ್ರೀಮತಿ ಮಾಲಾಶ್ರೀ,,, ಶ್ರೀಮತಿ ಭಾವನ ಇವರೊಂದಿಗೆ ನಾನು... ನಮ್ಮ ಎಲ್ಲರೊಂದಿಗೆ ಸುಂದರಿ ...ನಮ್ಮ ಈ ಗೌರಿ..' ಎಂದು ನಟಿ ತಾರಾ ಬರೆದುಕೊಂಡಿದ್ದಾರೆ. 

ಈ ಸೋಷಿಯಲ್ ಮೀಡಿಯಾ ಎಂಬುದು ಹೀಗೆಯೇ.. ಇಲ್ಲಿ, ಯಾರು ಯಾವಾಗ ಯಾವ ನೆನೆಪನ್ನು ಹಂಚಿಕೊಳ್ಳುತ್ತಾರೆ, ಏನಂತ ಬರೆಯುತ್ತಾರೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಜನಸಾಮಾನ್ಯರು, ಸೆಲೆಬ್ರಿಟಿಗಳು ಎಂಬ ಬೇಧಭಾವವಿಲ್ಲದೇ ಇದನ್ನು ಎಲ್ಲರೂ ಬಳಸುತ್ತಾರೆ, ಬೆಳೆಸುತ್ತಾರೆ. ಇದು ಸೆಲೆಬ್ರಟಿಗಳು ಹಾಗು ಅಭಿಮಾನಿಗಳ ಮಧ್ಯೆ ಸೇತುವೆಯಂತೆ ಕೂಡ ಕೆಲಸ ಮಾಡುತ್ತದೆ ಎನ್ನಬಹುದು. ಯಾರದೋ ಯಾವುದೋ ನೆನಪು ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಇನ್ಯಾರನ್ನೋ ತಲುಪುತ್ತದೆ. 

ಹೌದು, ಸೋಷಿಯಲ್ ಮೀಡಿಯಾ ಮಹಿಮೆಯೇ ಅಂಥದ್ದು. ಇಲ್ಲಿ ಹಲವರು ತಮ್ಮ ಹೆಜ್ಜೆ ಗುರುತನ್ನು ಬಿಡುತ್ತಾರೆ. ಇನ್ಯಾರೋ ಅದನ್ನು ಫಾಲೋ ಮಾಡುತ್ತಾರೆ. ಆ ಮೂಲಕ ಅವರನ್ನು ಇವರು, ಇವರನ್ನು ಅವರು ನೆನಪು ಮಾಡಿಕೊಂಡು ಮಧುರ ಭಾವ ಅನುಸರಿಸುತ್ತಾರೆ. ಅದನ್ನು ಜಗತ್ತಿಗೂ ತಿಳಿಯಪಡಿಸುತ್ತಾರೆ. ಸೋಷಿಯಲ್ ಮೀಡಿಯಾ ಈ ಕೆಲಸ ಮೀಡಿಯಾಗಳ ಮೂಲಕ ಮತ್ತಷ್ಟು ಅಥೆಂಟಿಕ್ ರೂಪ ಪಡೆದುಕೊಂಡು ಜಗತ್ತನ್ನೆಲ್ಲ ಸುತ್ತುತ್ತದೆ. ಈ ಮೂಲಕ ಹಲವರಿಗೆ ಲೈಪ್ ಸಿಂಪಲ್ ಹಾಗೂ ಬ್ಯೂಟಿಫುಲ್ ಅನ್ನಿಸುತ್ತದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?